ಬುದ್ದ ಬಸವ ಅಂಬೇಡ್ಕರ್ ವಿಚಾರಗಳಿಂದ ಮನುಕುಲದ ಉದ್ಧಾರ ಸಾಧ್ಯ – ಬಿ. ಆರ್ ಅಂಚೆಸೂಗೂರು…!!!

ಬುದ್ದ ಬಸವ ಅಂಬೇಡ್ಕರ್ ವಿಚಾರಗಳಿಂದ ಮನುಕುಲದ ಉದ್ಧಾರ ಸಾಧ್ಯ – ಬಿ. ಆರ್ ಅಂಚೆಸೂಗೂರು.

ಸಿಂಧನೂರು : ಬುದ್ದ ಬಸವ ಅಂಬೇಡ್ಕರ್ ವಿಚಾರಗಳಿಂದ ಮನುಕುಲದ ಉದ್ಧಾರ ಸಾಧ್ಯ ಎಂದು ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ರವರ 131 ನೇ ಜಯಂತಿಯ ವಿಶೇಷ ಉಪನ್ಯಾಸಕರಾಗಿ ಬಿ.ಆರ್.ಅಂಚೇಸೂಗುರು ರಾಜ್ಯಶಾಸ್ತ್ರ ಉಪನ್ಯಾಸಕರು ಶಹಪೂರು ಮಾತನಾಡಿದರು.

ನಗರದ ತಾಲೂಕಾಡಳಿತ, ನಗರಸಭೆ,ತಾಲೂಕು ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬೇಡ್ಕರ ರವರು ನಾನು ನನ್ನ ಜನರನ್ನು ಜಾಗೃತಗೋಳಿಸಿದ್ದೆನೆ, ಇಂದಲ್ಲ ನಾಳೆ ಏಚ್ಚರಗೋಳ್ಳುತ್ತಾರೆ. ಈ ನಾಡ ಕಟ್ಟುವ ಜನರಾಗಿರುತ್ತಾರೆ ಅಂಬೇಡ್ಕರ್ ರವರ ಕನಸು ಇಂದು ನನಸಾಗುವ ಕಾಲ ಸಮೀಪವಿದೆಂದು ಅನಿಸುತ್ತದೆ. ಸ್ತ್ರೀ ಪುರುಷನ ಗುಲಾಮಳಲ್ಲಾ ಮಕ್ಕಳನ್ನು ಹೆರಬಹುದು,ಆದರೆ ಪುರುಷನ ಸರಿಸಮಾನಾಗಿ ನಿಲ್ಲಬೇಕೆಂದು ಈ ದೇಶದ ಪ್ರಧಾನ ಮಂತ್ರಿ,ಮುಖ್ಯಮಂತ್ರಿ, ರಾಜ್ಯಪಾಲರು ಇನ್ನಿತರ ಅನೇಕ ಹುದ್ದೆಯನ್ನು ಮಹಿಳೆಯರು ಪಡೆದುಕೊಳ್ಳವಂತ ಸಂವಿಧಾನದ ಮೂಲಕ ಅಧಿಕಾರ ಕೊಟ್ಟವರು ಅಂಬೇಡ್ಕರ್ ರವರು. ರಾಮಾಯಣ ಬರೆದ ವಾಲ್ಮೀಕಿ, ಮಹಾಭಾರತ ಬರೆದ ವಾಸ್ಯ, ಭಗವದ್ಗೀತೆ ಬರೆದ ಶ್ರೀಕೃಷ್ಣ ಕೆಳವರ್ಗದವರೇ,ವೇದ ಉಪನಿಷತ್ ಹೆಸರಿನಲ್ಲಿ ಮಾಡಿದಷ್ಟು ಮೋಸ ಕೆಳವರ್ಗದ ಜನರಿಗೆ ಯಾರು ಮಾಡಿಲ್ಲ.ಬ್ರಾಹ್ಮಣ್ಯಶಾಹಿ ವ್ಯವಸ್ಥೆ ದೇಶಕ್ಕೆ ಮಾರಕವಾಗಿದೆ. 250 ವರ್ಷಗಳ ನಂತರ ಕೊಲಂಬಿಯಾದ ಮಹಾವಿದ್ಯಾಲಯ ಡಾ.ಬಿ.ಆರ್.ಅಂಬೇಡ್ಕರ್ ರವರ ಹೆಸರುಗಳನ್ನು ಪ್ರಸ್ತಾಪ ಮಾಡಿ ಅವರ ಗೌರವ ವ್ಯಕ್ತಿತ್ವಕ್ಕೆ ಗೌರವ ನೀಡಿಲಾಯಿತು ಎಂದು ಹೇಳಿದರು.

ನಂತರ ಮಾತನಾಡಿದ ಶಾಸಕ ವೆಂಕಟರಾವ್ ನಾಡಗೌಡ ಸಂವಿಧಾನ ಶಿಲ್ಪಿ ಡಾ.ಬೀಮ್ ರಾವ್ ಅಂಬೇಡ್ಕರ್ ಜಗತ್ತಿನಲ್ಲೇ ವಿಶಾಲವಾದ ಸಂವಿಧಾನ ರಚನೆಮಾಡಿ ಎಲ್ಲಾರಿಗೂ ಬದುಕುವ ಹಕ್ಕನ್ನು ಕೊಟ್ಟಂತ ಮಹಾನ್ ಚೇತನ ಯಾರು ಸಮಾಜದಲ್ಲಿ ತುಳಿತಕ್ಕೆ ಒಳಗಾಗಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮಿಸಲಾತಿ ನೀಡಿದ ಕೊಡುಗೆ ಅಂಬೇಡ್ಕರ್ ರವರ ಸಂವಿಧಾನದಿಂದ ಮಾತ್ರ ಸಾದ್ಯ ಎಂದು ಹೇಳಿದರು.

ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿರುವ ಅಂಬೇಡ್ಕರ್ ಸರ್ಕಲ್ ಅವರ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು. ಭಾವಚಿತ್ರವಿರುವ ಬೆಳ್ಳಿರಥದ ಮೆರವಣಿಗೆ ವಾಹನಕ್ಕೆ ಶಾಸಕ ಹಾಗೂ ಗಣ್ಯಿರಿಂದ ಚಾಲನೆ ನೀಡಿದರು.

ದಾರಿಯುದ್ದಕ್ಕೂ ನೀಲಿ ದ್ವಜ ಹೊತ್ತ ವಿವಿಧ ಸಮುದಾಯದ ಪ್ರಗತಿಪರ ಸಂಘಟನೆಗಳು ಹಾಗೂ ಸರಕಾರಿ ನೌಕರರ ಕೊರಳಿಗೆ ನೀಲಿ ಶಾಲು ಹಾಕಿ “ಅಂಬೇಡ್ಕರ್ ಹಬ್ಬ” ಸಡಗರ ಸಂಭ್ರಮದಿಂದ ಬಿಸಿಲುನ್ನು ಲೆಕ್ಕಿಸದೆ ಸಿಂಗಾರಿ ಮೇಳ, ಡಿಜಿ ,ಬ್ಯಾಂಜೋ ,ಹಾಗೂ ಇತಿಹಾಸ ಸಾರುವ ಹಗಲು ವೇಶದಾರಿಗಳು ಪ್ರದರ್ಶನ ಮಾಡುತ್ತಾ. ಅಂಬೇಡ್ಕರ್ ಸರ್ಕಲ್ ದಿಂದ ಮುಖ್ಯ ರಸ್ತೆಯಲ್ಲಿ ಮೂಲಕ ಅಶೋಕ ಭವನ ,ಗಾಂಧಿ ವೃತ್ತ ,ಸ್ತ್ರೀ ಶಕ್ತಿ ಭವನದ ವರೆಗೂ ಮೆರವಣಿಗೆಯಲ್ಲಿ ದಾರಿಯುದ್ದಕ್ಕೂ ನೀಲಿ ದ್ವಜದ ಕಂಗೊಳಿಸುತ್ತಿದ್ದವು ಆಯಾ ಇಲಾಖೆಯ ವತಿಯಿಂದ ಅಂಬೇಡ್ಕರ್ ಜಯಂತಿಯ ಬ್ಯಾನರಗಳು ರಾರಾಜಿಸುತ್ತಿದ್ದವು.

ರಾಯಚೂರು ಜಿಲ್ಲೆಯಲ್ಲೇ ಅತಿಹೆಚ್ಚು ತಾಪಮಾನವಿರುವ ಸಿಂಧನೂರಿನಲ್ಲಿ ಸುಡು ಬಿಸುಲಿನಲ್ಲಿ ಪ್ರಾರಂಭವಾದ ಮೆರವಣಿಗೆಯಲ್ಲಿ ಜೈ ಭೀಮ ಜೈ ಭೀಮ ಎಂದು ಘೋಷಣೆ ಕೂಗುತ್ತಾ ಸುಮಾರು ಮೂರು ಕಿ.ಲೋ. ಮೀ. ದೂರದಿಂದ ಸಿಂಗಾರಿ ಮೇಳದ ಮುಂದೆ ಹುಡುಗಿಯ ಕುಣಿತ ಹಾಗೂ ಡಿಜಿ ಮುಂದೆ ಕಾಲೇಜ್ ಹುಡುಗರ ಕುಣಿತ ನೋಡುಗರ ಗಮನ ಸೆಳೆಯಿತು. ಸಂಘಟನೆಯವರು ಮೆರವಣಿಗೆಯ ಉದ್ದಕ್ಕೂ ಕುಣಿದು ಕುಪ್ಪಳಿಸಿದರು.

ಅಂದು ಅಂಬೇಡ್ಕರನ್ನು ಅಸ್ಪೃಶ್ಯತೆ ಯಿಂದ ನೋಡಿದ ಸಮಾಜ ಇಂದು ಅವರನ್ನು ಆರಾಧಿಸುತ್ತಿದ್ದಾರೆ. ಸಂಪೂರ್ಣವಾಗಿ ಬದುಕುವದಕ್ಕಿಂತ ಶ್ರೇಷ್ಠನಾಗಿ ಬಾಳು ಎಂದು ಹೇಳಿದ ಮಹಾನಾಯಕನ ತತ್ವ ಸಿದ್ದಾಂತಗಳು ಮಾರ್ಗದರ್ಶನದಂತೆ ಮಹಾನಾಯಕ ರಾಗಬೇಕೆಂದು ಪೌರಾಯುಕ್ತ ಮಂಜುನಾಥ ಎಮ್.ಗುಂಡುರು ಪ್ರಾಸ್ತಾವಿಕವಾಗಿ ಮಾತನಾಡಿದರು.ನಂತರ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ ಮಾತನಾಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಮಂಜುನಾಥ ಭೋಗಾವತಿ, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್‌, ನಗರ ಯೋಜನಾ ಪ್ರಾಧಿಕಾರದ ಮಧ್ವರಾಜ್ ಆಚಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿದೇವಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ವಟಗಲ್, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್‌, ನಗರ ಯೋಜನಾ ಪ್ರಾಧಿಕಾರದ ಮಧ್ವರಾಜ್ ಆಚಾರ್, ಜಿಲ್ಲಾ ಪಂಚಾಯಿತಿ ಎಂಜನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜನಿಯರ್‌ ಅನ್ನಪೂರ್ಣ, ಸರ್ಕಲ್ ಇನ್ಸಪೆಕ್ಟರ್ ಉಮೇಶ ಕಾಂಬ್ಳೆ, ಛಲವಾದಿ ಮಹಾಸಭಾದ ಅಧ್ಯಕ್ಷ ರಾಮಣ್ಣ ಗೋನವಾರ, ಮಾದಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮರಿಯಪ್ಪ ಜಾಲಿಹಾಳ, ವಾಲ್ಮೀಕಿ ನಾಯಕ ಸಮಾಜದ ರಾಮತ್ನಾಳ, ಗ್ರೇಡ್-2 ತಹಶೀಲ್ದಾರ್ ಚಂದ್ರಶೇಖರ, ನಗರಸಭೆ ಸದಸ್ಯರಾದ ಶರಣಪ್ಪ ಉಪ್ಪಲದೊಡ್ಡಿ, ಆಲಂಸಾಬ, ಯಲ್ಲೂಸಾ ಬದಿ ಇದ್ದರು.ವೀರೇಶ ಸಾಲಿಮಠ ನಾಡಗೀತೆ ಹಾಡಿದರು. ಎಂ.ಗಂಗಾಧರ್ ಮತ್ತು ಸಂಗಡಿಗರು ಅಂಬೇಡ್ಕರ್ ಕುರಿತು ಕ್ರಾಂತಿಗೀತೆಗಳನ್ನು ಹಾಡಿದರು. ಶಿಕ್ಷಕ ವೀರೇಶ ಗೋನವಾರ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಅತ್ಯುತ್ತಮ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು….

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend