;

ತಾಲೂಕು ಕ್ರೀಡಾಂಗಣ ವೀಕ್ಷಣೆ ಮಾಡಿದ ಶಾಸಕ ವೆಂಕಟರಾವ್ ನಾಡಗೌಡ…!!!.

ತಾಲೂಕು ಕ್ರೀಡಾಂಗಣ ವೀಕ್ಷಣೆ ಮಾಡಿದ ಶಾಸಕ ವೆಂಕಟರಾವ್ ನಾಡಗೌಡ.

ಸಿಂಧನೂರು :ಏ.9.ಎರಡು ತಿಂಗಳ ವರೆಗೆ ಕಾಮಗಾರಿ ಸಂಪೂರ್ಣವಾಗಿ ಮುಗಿಯುವ ವರೆಗೂ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ ಸಹಕರಿಸಬೇಕೆಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.

ಲೋಕೋಪಯೋಗಿ ಇಲಾಖೆ ಹಾಗೂ ಯುವ ಸಭಲೀಕರಣ, ಕ್ರೀಡಾ ಇಲಾಖೆಯ ವತಿಯಿಂದ ತಾಲೂಕು ಕ್ರೀಡಾಂಗಣದ ಸ್ಥಳಕ್ಕೆ ಆಗಮಿಸಿ ಕಾಮಗಾರಿಯನ್ನು ಶಾಸಕರು ವೀಕ್ಷಣೆ ಮಾಡಿ ನಂತರ ಮಾತನಾಡಿದ ಅವರು ಕ್ರೀಡಾಂಗಣದ(ಪ್ಲಾಂಟೇಷನ್) ,ಗ್ರೌಂಡ್ ಕ್ರಿಕೆಟ್ ಪಿಚ್, ಲೈಟಿಂಗ್ ಇನ್ನಿತರ ಕಾಮಗಾರಿಯು ಸಂಪೂರ್ಣವಾಗಿ ಮುಗಿದ ಮೇಲೆ ಸದಸ್ಯರನ್ನು ನೇಮಕ ಮಾಡಿ ಸದಸ್ಯತ್ವದ ಪಡೆದವರಿಗೆ ಪ್ರತಿ ತಿಂಗಳಿಗೆ ಇಂತಿಷ್ಟು ಹಣ ನಿಗದಿ ಮಾಡಿ ಬದಂತ ಹಣವನ್ನು ಕ್ರೀಡಾಂಗಣದ ಉಸ್ತುವಾರಿ ನೋಡಿಕೊಳ್ಳಲಿಕ್ಕೆ ವ್ಯಯ ಮಾಡಲಾಗುವುದು ಸದಸ್ಯತ್ವ ಹೊಂದಿದವರು ವಾಕಿಂಗ್ ಇನ್ನಿತರ ಕ್ರೀಡೆಗಳನ್ನು ಆಡಬಹುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಹನುಮೇಶ ಕೆ, ಡಿ.ಸತ್ಯನಾರಾಯಣ,ಎಸ್ಪಿ ಟೇಲರ್‌,ಜೆಇ ಮಾಹಂತೇಶ ಪಾಟೀಲ್ ಸೇರಿದಂತೆ ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;