ಬಾಬಾ ಸಾಹೇಬ ಅಂಬೇಡ್ಕರ್ ರವರ 131ನೇ ಜಯಂತಿಯ ಪೂರ್ವಭಾವಿ ಸಭೆ.
ಸಿಂಧನೂರು : ಏ.8 ನಗರದ ತಾಲೂಕು ಆಡಳಿತ ವತಿಯಿಂದ ಏಪ್ರಿಲ್ 14 ರಂದು ಡಾ.ಬಿ. ಆರ್.ಅಂಭೇಡ್ಕರ ರವರ 131 ನೇ ಜಯಂತಿಯನ್ನು ಸ್ತ್ರೀ ಶಕ್ತಿ ಭವನದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗುವುದೆಂದು ಮಂಜುನಾಥ ಭೋಗಾವತಿ ತಿಳಿಸಿದರು.
ತಹಸೀಲ್ ಕಾರ್ಯಾಲಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಕಛೇರಿಗಳಲ್ಲಿ ಜಯಂತಿ ಆಚರಣೆ ಮಾಡಿ, ತಾಲೂಕು ಆಡಳಿತದಿಂದ ನಡೆಯುವ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಅದ್ದೂರಿಯಾಗಿ ನೆರವೇರಿಸೋಣ, ಒಂದು ವೇಳೆ ಭಾಗವಹಿಸದಿದ್ದರೆ ಆಯಾ ಇಲಾಖೆಯ ಹಾಜರಾತಿಯನ್ನು ಪಡೆದು ಅಧಿಕಾರಿಗಳಿಗೆ ನೋಟೀಸ್ ನೀಡಲಾಗುವುದು ಎಂದರು.
ಡಾ.ಬಾಬಾ ಸಾಹೇಬ ಅಂಬೇಡ್ಕರ್ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರುಗಳ ಸಲಹೆ ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಿದರು.
ತಾಲೂಕು ಆಡಳಿತ ಕಛೇರಿಗಳಿಗೆ ದೀಪಾಂಲಕಾರದಿಂದ ಕೂಡಿರಬೇಕು,ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಹಾಸ್ಟೆಲ್ ವಿದ್ಯಾರ್ಥಿಗಳು, ಪೌರ ಕಾರ್ಮಿಕರು ಎಲ್ಲಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸಬೇಕೆಂದು ಖಡಕ್ಕಾಗಿ ಹೇಳಿದರು.
ನಗರದ ಪ್ರಮುಖ ವೃತ್ತಗಳಲ್ಲಿ ತಮ್ಮ ಇಲಾಖೆ ಕಡೆಯಿಂದ ಬ್ಯಾನರ್ ಮತ್ತು ಕಟೌಟಗಳನ್ನು ಹಾಕಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಂಬೇಡ್ಕರ್ ವೃತ್ತದಲ್ಲಿ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಅಲ್ಲಿಂದ ಸ್ತ್ರೀ ಶಕ್ತಿ ಭವನಕ್ಕೆ ತಲುಪಲಿದೆ. ಮೆರವಣಿಗೆ ಯುದ್ದಕ್ಕೂ ಕುಡಿಯುವ ನೀರಿನ ಹಾಗೂ ಸ್ತ್ರೀಶಕ್ತಿ ಭವನದಲ್ಲಿ ಊಟದ ವ್ಯವಸ್ಥೆ ಮಾಡಲಾಗುವುದು. ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು, ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿಜಯಲಕ್ಷ್ಮಿ ಸಿಪಿಐಗಳಾದ ಉಮೇಶ ಕಾಂಬಳೆ, ಸಿಡಿಪಿಓಗಳಾದ ಅಶೋಕ, ಸುದೀಪಕುಮಾರ, ಅನ್ನಪೂರ್ಣ (ಸಿವಿಲ್) ರಾಮಣ್ಣ ಗೋನ್ವಾರ, ಬೋನಾಚಾರ್, ಅಶೋಕ ನಂಜಲದಿನ್ನಿ, ನರಸಪ್ಪ ಕಟ್ಟಿಮನಿ, ಹನುಮಂತಪ್ಪ ಬೂದಿವಾಳ, ನಿರುಪಾದೆಪ್ಪ, ಗಂಗಣ್ಣ ಡಿಸ್, ಸಂಗಮೇಶ, ಹುಲುಗಪ್ಪ ಮಲ್ಕಾಪೂರು, ನಿರುಪಾದಿ ಸಾಸಲಮರಿ ವಿರೇಶ ಹಂಚಿನಾಳ,ವಿವಿಧ ಇಲಾಖೆಯ ಅಧಿಕಾರಿಗಳು ಸಂಘಟನೆ ಮುಖಂಡರು ಭಾಗವಹಿಸಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
