ಏಪ್ರಿಲ್-5ರಂದು ಶ್ರೀಮುರುಘಾಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ…
ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಚಿತ್ರದುರ್ಗ ಇವರ ಸಹಯೋಗದಲ್ಲಿ ಏಪ್ರಿಲ್-5 ರಂದು ಬೆಳಗ್ಗೆ 10.30 ಗಂಟೆಗೆ ಡಾ. ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ಮೂವತ್ತೆರಡನೆ ವರ್ಷದ ನಾಲ್ಕನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್‍ಯಕ್ರಮ ನಡೆಯಲಿದೆ.
ಶ್ರೀ ಮ.ನಿ.ಪ್ರ. ನಾಗಭೂಷಣ ಸ್ವಾಮಿಗಳು, ಶ್ರೀ ಅಲ್ಲಮಪ್ರಭು ಹೊಳೆಮಠ, ಬನವಾಸಿ ಇವರು ಗೌರವ ಉಪಸ್ಥಿತಿ ವಹಿಸುವರು. ಮಾಜಿ ಉಪಮುಖ್ಯಮಂತ್ರಿ ಹಾಗು ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಎಂ.ಸವದಿ ಮುಖ್ಯಅತಿಥಿಗಳಾಗಿ ಭಾಗವಹಿಸುವರು. ಕಾರ್ಯಕ್ರಮದ ದಾಸೋಹಿಗಳಾದ ಸುರೇಶ್ ಬಾಫ್ನಾ, ವಿನೋದ್ ಬಾಫ್ನಾ ಮತ್ತು ಮುಖೇಶ್ ಬಾಫ್ನಾ ಚಿತ್ರದುರ್ಗ ಹಾಗು ಎಂ.ಸಿ.ಕೆ.ಎಸ್. ಫೌಂಡೇಶನ್, ಬೆಂಗಳೂರು ಇವರು ಉಪಸ್ಥಿತರಿರುವರು…

ವರದಿ.ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
