ಬಿಂದಾಸ್ ಕ್ರಿಕೇಟರ್ಸ- ಇಟ್ಟಿಗಿ ಇವರ ವತಿಯಿಂದ 4ನೇ ಬಾರಿಗೆ ಸ್ಟಂಪರ್ ಬಾಲ್ ಟೂರ್ನಮೆಂಟ್.
ವಿಜಯ ನಗರ ಜಿಲ್ಲಾ, ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ಬಿಂದಾಸ್ ಕ್ರಿಕೇಟರ್ಸ- ಇಟ್ಟಿಗಿ ಇವರ ವತಿಯಿಂದ 4ನೇ ಬಾರಿಗೆ ಸ್ಟಂಪರ್ ಬಾಲ್ ಟೂರ್ನಮೆಂಟ್ ನ್ನು ಆಯೋಜಿಸಲಾಗದೆ. ದಿನಾಂಕ 2-4-2022 ಯುಗಾದಿ ಪಾಡ್ಯದಂದು ಮಾಜಿ ಶಾಸಕರಾದ ಚಂದ್ರನಾಯ್ಕ ಸರ್ ಮತ್ತು ವಿಜಯ ನಗರ ಜಿಲ್ಲೆಯ ಭಾ.ಜ.ಪ. ಉಪಾಧ್ಯಕ್ಷರಾದ ಪಿ.ವಿಜಯ್ ಕುಮಾರ್ ಹಾಗೂ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಬಿ,ಸಿದ್ದಪ್ಪ,&ಗ್ರಾಮ ಪಂಚಾಯತಿಯ ಸರ್ವ ಸದಸ್ಯರುಗಳು,ಸತೀಶ್ ಕುಂಚೂರು,ರಾಮನಗೌಡ್ರು,ಹಾಗೂ ಕ್ರಿಕೆಟ್ ಮೈದಾನಕ್ಕೆ ಸ್ಥಳ ಅವಕಾಶ ನೀಡಿದ ಮೈದಾನದ ಜಾಗದ ವಾರಸುದಾರರಾದ ಬಳಿಗಾರ್ ಮಲ್ಲಿಕಾರ್ಜುನ ಇವರ ಅನುಪ ಸ್ಥಿತಿಯಲ್ಲಿ, ಇಟ್ಟಿಗಿ ಹೋಬಳಿ ಬಿ ಜೆ ಪಿ ಯುವ ಮೋರ್ಚಾ ಅಧ್ಯಕ್ಷರು ಅಡೆಗೌಡ್ರು ನಟರಾಜ್ ಮತ್ತು ಬಿಂದಾಸ್ ಕ್ರಿಕೆಟ್ ತಂಡದ ಯುವಕರು ಹಾಗೂ ಇಟ್ಟಿಗಿ ಗ್ರಾಮಸ್ಥರಿಂದ ದೀಪ ಬೆಳಗುವುದರೊಂದಿಗೆ ಟೂರ್ನಿಮೆಂಟ್ ಗೆ ಚಾಲನೆ ನೀಡಿದರು. ಯುವಕರು ಪಾಠದ ಜೊತೆಗೆ ಕ್ರೀಡೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಒಬ್ಬೊಬ್ಬರಲ್ಲಿ ಒಂದೊಂದು ಕಲೆ, ಕ್ರೀಡಾ ಪ್ರತಿಭೆ ಇರುತ್ತದೆ. ಅದನ್ನು ವೇದಿಕೆಗಳಲ್ಲಿ ಹಾಗೂ ಆಟೋಟಗಳಲ್ಲಿ ಪ್ರದರ್ಶನ ಮಾಡಬೇಕು ಸಾಧಕರ ಆದರ್ಶಗಳನ್ನು ಯುವಕರು ಪಾಲಿಸಬೇಕು ಎಂದು ಅಧ್ಯಕ್ಷ ಭಾಷಣದಲ್ಲಿ ಚಂದ್ರನಾಯ್ಕ ಸರ್ ತಿಳಿಸಿದರು. ಪಂದ್ಯದಲ್ಲಿ ಉತ್ತಮ ಬಹುಮಾನವಿದ್ದು ಜಯಶಾಲಿಗಳಿಗೆ ಪ್ರಥಮ&ದ್ವಿತೀಯ ಸ್ಥಾನವನ್ನು ನೀಡಲಾಗಿದೆ. ಪಿ.ಆರ್.ಕೆ.ಟ್ರೋಪಿ ಪ್ರಥಮ ಬಹುಮಾನ:30000/-ಟ್ರೋಪಿ.ದ್ವಿತೀಯ ಬಹುಮಾನ :15000/-ಟ್ರೋಪಿ ಬಹುಮಾನದ ಕೊಡುಗೆ ಇರುತ್ತದೆ. ಟ್ರೋಪಿಯ ಕೊಡುಗೆ ಪಿ.ವಿಜಯಕುಮಾರ.ಜಿಲ್ಲಾ ಉಪಾಧ್ಯಕ್ಷರು,ಭಾರತೀಯ ಜನತಾ ಪಾರ್ಟಿ. ವಿಜಯನಗರ ಜಿ!! ಇಂದಿನ ಪರಿಸ್ಥಿತಿಯಲ್ಲಿ ಕೆಲವು ಯುವಕರು ಮದ್ಯಪಾನ, ಧೂಮಪಾನ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹೆತ್ತವರು ಮಕ್ಕಳ ಮೇಲೆ ಅನೇಕ ಕನಸುಗಳನ್ನು ಇಟ್ಟುಕೊಂಡಿದ್ದಾರೆ. ಪೋಷಕರ ಕನಸುಗಳಿಗೆ ತೊಂದರೆ ಮಾಡದಂತೆ ಯುವಕರು ಎಚ್ಚರವಹಿಸಿ ಇಂತಹ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿಸಲೆಂದು ನಮ್ಮ ಪತ್ರಿಕೆಯ ಆಶಯ.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
