ಸರಕಾರಿ ಜಾಗದಲ್ಲಿ ಸಾಗುವಳಿ ಮಾಡಿದರು, ಸುಮ್ಮನೆ ಕುಳಿತ ತಾಲೂಕು ಮತ್ತು ಜಿಲ್ಲಾಡಳಿತ.
ಸಿಂಧನೂರು :2016 -17 ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಅನ್ವಯ ವಸತಿ ಶಾಲೆಗಳು ಇಲ್ಲದ ಹೋಬಳಿಗಳಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ಸಿಂಧನೂರು ತಾಲೂಕಿನ ಗೋರೆಬಾಳ ಗ್ರಾಮದಲ್ಲಿ ಮಂಜೂರು ಮಾಡಲಾಗಿದ್ದು, ವಸತಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಭೂಮಿಯು ಅವಶ್ಯಕತೆ ಇರುವುದರಿಂದ ಸರ್ಕಾರಿ ಭೂಮಿ ಇಲ್ಲದಿರುವ ಕಾರಣದಿಂದ ಖಾಸಗಿಯಾಗಿ ಶಿವನಗೌಡ ತಂದೆ ಹನಮಪ್ಪ ಇವರಿಂದ ಗೋರೆಬಾಳಗ್ರಾಮದ ಭೂಮಿ ಸರ್ವೆನಂ.22/*/ಕ್ಷೇತ್ರ :08 ಎಕರೆ 21 ಗುಂಟೆಯನ್ನು (ಇದರಲ್ಲಿ 00-13 ಗು.ಖರಾಬ) 20 ಅಗಸ್ಟ್ 2018 ನೇ ಇಸವಿಯಲ್ಲಿ ರಾಜ್ಯಪಾಲರು ಕರ್ನಾಟಕ ಸರ್ಕಾರ ಬೆಂಗಳೂರು ರವರ ಪರವಾಗಿ ಪ್ರಾಚಾರ್ಯರು ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ರವರ ಹೆಸರಿಗೆ ಖರೀದಿ ಪತ್ರ ಆಗಿದ್ದು ಷೆಡ್ಯೂಲನಲ್ಲಿ ವಿವರಿಸಿದ ಭೂಮಿಯನ್ನು ರೂ. 1,86,96000 (ಒಂದು ಕೋಟಿ ಎಂಬತ್ತಾರು ಲಕ್ಷ ತೊಂಬತ್ತಾರು ಸಾವಿರ ರೂಪಾಯಿ ಸಂಪೂರ್ಣ ಖರೀದಿ ಹಣವನ್ನು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ರಾಯಚೂರು ಮತ್ತು ಪ್ರಾಚಾರ್ಯರು ಡಾ. ಬಿ. ಆರ್ ಅಂಬೇಡ್ಕರ್ ವಸತಿ ಶಾಲೆ ಗೋರೆಬಾಳ ಹೆಸರಿನಲ್ಲಿ ದಿ.16-08-2018 ದಂದು ಹಣ ಚುಕ್ತಾ ಮಾಡಲಾಗಿದೆ. ಅಂದಿನಿಂದ ಷೆಡ್ಯೂಲ್ ನಲ್ಲಿ ದಾಖಲಾದ ಭೂಮಿಯು ಪ್ರಾಚಾರ್ಯರು ಡಾ. ಬಿ. ಆರ್ ಅಂಬೇಡ್ಕರ್ ವಸತಿ ಶಾಲೆಯ ಸರ್ವ ಹಕ್ಕುಗಳಿಂದ ಮಾಲಿಕತ್ವ ಹಾಗೂ ಸ್ವಾಧೀನತೆ ಹೊಂದಿರುತ್ತದೆ.
ಖರೀದಿ ಪತ್ರದನ್ವಯ ಷೆಡ್ಯೂಲ್ ನಲ್ಲಿ ವಿವರಿಸಿದ ಭೂಮಿ ಖಾತೆ ಕಂದಾಯ ಇಲಾಖೆಯಲ್ಲಿ ನಮೂನೆ 15 ಪ್ರಪತ್ರ ಸಂಖ್ಯೆ 15 (148ನೇ ನಿಯಮ) ದ ಪ್ರಕಾರ 20/08/2018 ರಿಂದ ಡಾ. ಬಿ. ಆರ್ ಅಂಬೇಡ್ಕರ್ ವಸತಿ ಶಾಲೆ (ಪ.ಜಾ.-825) ಹೆಸರಿನಲ್ಲಿ ವರ್ಗ ಮಾಡಿಸಿಕೊಂಡು ಭೂಮಿಯ ಜವಾಬ್ದಾರಿಯನ್ನು ಪಡೆದಿದೆ.ಸರಕಾರಿ ಮಾಲಿಕತ್ವದ ಸರ್ವೆ ನಂ 22 /*/1ಕ್ಷೇತ್ರ 08 ಎಕರೆ 21 ಗುಂಟೆ ಇದರಲ್ಲಿ (00-13ಗುಂಟೆ ಖರಾಬ -ಬಿ) ಉಳಿದ 08 ಎಕರೆ 08 ಗುಂಟೆ ಸರಕಾರಿ ಭೂಮಿಯಲ್ಲಿ ಅಂದಾಜಿನ ಪ್ರಕಾರ 4 ರಿಂದ 5 ಎಕರೆ ಭೂಮಿಯಲ್ಲಿ ಸಾಗುವಳಿ ಮಾಡಿರುತ್ತಾರೆ.ಸದರಿ ಜಮೀನು ಸರಕಾರದ ಆಸ್ತಿಯಾಗಿರುತ್ತದೆ. ಸಾರ್ವಜನಿಕರು ಸದರಿ ಜಮೀನಿನಲ್ಲಿ ಒಕ್ಕಲುತನ ಅಥವಾ ಯಾವುದೇ ತರಹದ ಚಟುವಟಿಕೆಗಳನ್ನು ಮಾಡುವುದು ಕಾನೂನಿಗೆ ವಿರುದ್ಧವಾಗಿರುತ್ತದೆ. ಅಂತವರ ವಿರುದ್ಧ ಸೂಕ್ತ ಕಾನೂನಿನಕ್ರಮ ತೆಗೆದುಕೊಳ್ಳ ಬೇಕಾಗಿರುತ್ತದೆ. ಆದರೆ ತಾಲೂಕು ಅಧಿಕಾರಿಗಳು, ಪ್ರಾಂಶುಪಾಲರು ಕಂಡರೂ ಕಾಣದ ಹಾಗೆ ಕುಳಿತ್ತಿದ್ದಾರೆ. ಇದರ ಬಗ್ಗೆ ಪ್ರಾಂಶುಪಾಲರನ್ನು ಕೇಳಿದಾಗ ಭೂಮಿಯನ್ನು ನಿಮ್ಮ ವಶಕ್ಕೆ ಯಾಕೆ ಪಡೆದುಕೊಂಡಿಲ್ಲ,ಜಮೀನಿನಲ್ಲಿ ಖಾಸಗಿ ವ್ಯಕ್ತಿಗಳು ಸಾಗುವಳಿ ಮಾಡುತ್ತಿದ್ದರಲ್ಲ ಅಂತ ಪ್ರಶ್ನೆ ಕೇಳಿದರೆ ಇಲ್ಲಾ ನಾನು ಜಾಗ ನೋಡಿಲ್ಲ,ನಮ್ಮ ವಶದಲ್ಲಿ ಇದೆ, ಯಾವುದೇ ತರಹದ ಸಾಗುವಳಿ ಮಾಡಿಲ್ಲ ಅಂತ ಹೇಳುತ್ತಾರೆ, ನೀವು ಸ್ಥಳಕ್ಕೆ ಹೋಗಿ ಬೇಟಿ ನೀಡಿದ್ದಿರಾ ಅಂತ ಕೇಳಿದಾಗ, ಹೌದು 4 ರಿಂದ 5 ಎಕರೆ ಜಮೀನು ಸಾಗುವಳಿ ಮಾಡಿದ್ದಾರೆ ಎಂಬ ದ್ವಂದ್ವ ಹೇಳಿಕೆ ನೀಡಿರುತ್ತಾರೆ. ಈ ದ್ವಂದ್ವ ಹೇಳಿಕೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಮುಂಚೆ ಇದ್ದ ಪ್ರಿನ್ಸಿಪಾಲರನ್ನು ಕೇಳಿದಾಗ ಹೌದು ಸರ್ ಒಂದು ಸಾರಿ ಸಾಗುವಳಿ ಮಾಡಿದ್ದು ನಿಜ ನನ್ನ ಗಮನಕ್ಕೆ ಬಂದ ಮೇಲೆ ಜಮೀನು ಮಾರಾಟ ಮಾಡಿದವರಿಗೆ ನಾನೇ ಖುದ್ದಾಗಿ ಭೇಟಿ ನೀಡಿ ಜಮೀನಿನಲ್ಲಿ ನಾಟಿ ಮಾಡಲು ತಯಾರು ಮಾಡಿದ ಸಂದರ್ಭದಲ್ಲಿ ತಾಲೂಕಿನ ಶಾಸಕರ ಗಮನಕ್ಕೆ ತಂದ್ದು ಸಾಗುವಳಿ ಮಾಡುವುದನ್ನು ನಿಲ್ಲಿಸಿದ್ದೇನೆ.
ಶಾಸಕರು ಕೂಡಾ ಸಾಗುವಳಿ ಮಾಡಬಾರದೆಂದು ಜಮೀನು ಮಾರಾಟ ಮಾಡಿದವರಿಗೆ ತಿಳಿಸಿದ್ದಾರೆ ಎಂದರು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಸತೀಸ್ ರವರನ್ನು ಕೇಳಿದರೆ ಇದರ ಬಗ್ಗೆ ನನಗೆ ಗೊತ್ತಿಲ್ಲ, ನಾನು ಬಂದ ಮೇಲೆ ಆಗಿಲ್ಲ ಮುಂಚೆನೇ ಖರೀದಿ ಆಗಿದೆ ಎಂದು ಹೇಳಿದರು.ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಭೂಮಿಯನ್ನು ವಶಕ್ಕೆ ಪಡೆದುಕೊಳ್ಳಬೇಕು.ಕಾನೂನಿನ ಭಯವಿಲ್ಲದೆ ಸರ್ಕಾರಿ ಭೂಮಿಯನ್ನು ಸಾಗುವಳಿ ಮಾಡಿದವರ ಮೇಲೆ ಸೂಕ್ತ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು, ಎಂಬುದು ನಮ್ಮ ಆಶಯ….
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
