;

ಗಣಿತ ಕಬ್ಬಿಣದ ಕಡಲೆ ಅಲ್ಲ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ…!!!

ಗಣಿತ ಕಬ್ಬಿಣದ ಕಡಲೆ ಅಲ್ಲ
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ

ಹೂವಿನ ಹಡಗಲಿ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ
ಗಣಿತ ಪರೀಕ್ಷೆಗೆ ಮಂಡಳಿಯ ಮಾದರಿ
ಹಾಗೂ ರಾಜ್ಯ ಮಟ್ಟದ
ಪರೀಕ್ಷೆ ರೀತಿಯಲ್ಲಿ
ಪ್ರಶ್ನೆ ಪತ್ರಿಕೆ ವಿದ್ಯಾರ್ಥಿ ಸ್ನೇಹಿ ಆಗಿರುತ್ತದೆ ಎಂದು
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಎನ್ ಹಳ್ಳಿಗುಡಿ ಹೇಳಿದರು.

ತಾಲೂಕಿನ ನಾಗತಿಬಸಾಪುರ
ಸರ್ಕಾರಿ ಪ್ರೌಢಶಾಲೆಯಲ್ಲಿ
ಶುಕ್ರವಾರ ಆಯೋಜಿಸಿದ್ದ
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ
ಗಣಿತ ಪ್ರಶ್ನೆ ಪತ್ರಿಕೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಗಣಿತ ಪರೀಕ್ಷೆಗೆ ನಾಲ್ಕು ದಿನಗಳ ಸುವರ್ಣಾವಕಾಶ ಒದಗಿ ಬಂದಿದೆ. ಅಂಕಗಣಿತ ಬೀಜಗಣಿತ ರೇಖಾಗಣಿತ ಎಲ್ಲಾ ಘಟಕಗಳನ್ನು ಪುನರಾವರ್ತನೆ ಮಾಡಬೇಕು ಎಂದು ತಿಳಿಸಿದರು.

ಮುಖ್ಯ ಗುರು
ಸುರೇಶ ಅಂಗಡಿ
ಪ್ರಶ್ನೆ ಪತ್ರಿಕೆಯ *38*
ಪ್ರಶ್ನೆಗಳನ್ನು ವಿವರಿಸಿದರು.
ಸುಲಭವಾಗಿ ಅಂಕ ಗಳಿಸಲು ಮಾಹಿತಿ ಹಂಚಿದರು .ಎಂಭತ್ತಕ್ಕೆ ಎಂಭತ್ತು ಅಂಕ ಪಡೆಯುವ
ಗುರಿ ಸಾಧಿಸಿರಿ ಎಂದರು.

ಜಿ ಪಿ ಜಿ ಯ ಗಣಿತ ಶಿಕ್ಷಕರಾದ
ಕೋರಿ ವಿಶ್ವನಾಥ್
ಪ್ರಮೇಯ ಗ್ರಾಫ್ ಸ್ಪರ್ಶಕ
ಓಜೀವ್ ಮೊದಲಾದ
ಲೆಕ್ಕಗಳನ್ನು ಬಿಡಿಸಲು
ವಿವರಿಸಿದರು.

ಮುಖ್ಯ ಶಿಕ್ಷಕಿ
ಸೈಯದ್ ಮುಬೀನಾ
ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ
ಮಲ್ಲಿಕಾರ್ಜುನ
ಗಣಿತ ಶಿಕ್ಷಕಿ
ಎಂ ಪಿ ಎಂ ಸುನೀತಾ
ವಿಜ್ಞಾನ ಶಿಕ್ಷಕಿ ಶ್ರೀಲತಾ
ಶಾಲೆಯ ಶಿಕ್ಷಕ ಸಿಬ್ಬಂದಿ
ಹಾಜರಿದ್ದರು.

ಮೀರಾಕೊರ್ನಹಳ್ಳಿ
ಎಂ ಎಂ ವಾಡಾ
ಕೆ ಎಂ ತಾಂಡಾ
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಇದರ ಪ್ರಯೋಜನ ಪಡೆದುಕೊಂಡರು…

 

ವರದಿ. ಅಜಯ್, ಚ, ಹೂವಿನಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;