;

ಜೈ ಭೀಮ್ ಘರ್ಜನೆ ಸಂಘಟನೆ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಯನ್ನು ಸ್ಥಾಪನೆ…!!!

ಸಿಂಧನೂರು : ಬೇಸಿಗೆ ಸಂದರ್ಭದಲ್ಲಿ ಜೈ ಭೀಮ್ ಘರ್ಜನೆ ಸಂಘಟನೆ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಯನ್ನು ಸ್ಥಾಪನೆ ಮಾಡಿರುವುದು ಉತ್ತಮವಾದ ಕಾರ್ಯ ಎಂದು ತಹಸೀಲ್ದಾರ ಮಂಜುನಾಥ ಭೋಗಾವತಿ ಮಾತನಾಡಿದರು.

ನಗರದ ಇಂದಿರಾ ಕ್ಯಾಂಟೀನ್ ಮುಂಭಾಗದ ಮುಖ್ಯ ರಸ್ತೆ ಬದಿ ಜೈ ಬೀಮ್ ಘರ್ಜನೆ ಸಂಘದಿಂದ ಸಾರ್ವಜನಿಕರಿಗೆ ಆಯೋಜಿಸಿರುವ ಉಚಿತ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆ ಚಾಲನೆ ನೀಡಿ ಮಾತನಾಡಿದರು.

ಇಂದಿರಾ ಕ್ಯಾಂಟೀನ್ ಮುಂಬಾಗದಲ್ಲಿ ನಿತ್ಯ ನೂರಾರು ಜನ ಬಂದು ಹೋಗುವರು. ಅರವಟ್ಟಿಗೆಯಿಂದ ತುಂಬ ಉಪಯೋಗವಾಗುತ್ತದೆ. ಆದರೆ ಜನರು ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ಗ್ರಾಮೀಣ ಪ್ರದೇಶದಿಂದ ಜನರು ಕೆಲಸಗಳ ನಿಮಿತ್ತ ನಗರಕ್ಕೆ ಬರುವ ರೈತರು, ಸಾರ್ವಜನಿಕರಿಗೆ ಬೇಸಿಗೆ ಹಿನ್ನೆಲೆಯಲ್ಲಿ ಉಚಿತ ನೀರು ಕಲ್ಪಿಸಲು ಜೈ ಬೀಮ್ ಘರ್ಜನೆ ಸಂಘ ಮುಂದಾಗಿರುವುದು ಶ್ಲಾಘನೀಯವಾದದ್ದು, ಶುದ್ಧ ಕುಡಿಯುವ ನೀರು ಕಲ್ಪಿಸಲು ನಗರಸಭೆ ಹಲವು ಯೋಜನೆ ಜಾರಿಗೊಳಿಸುತ್ತಿದೆ. ಜತೆಗೆ ಸಂಘ ಸಂಸ್ಥೆಗಳು ಕೈಜೋಡಿಸಿದಲ್ಲಿ ಇನ್ನಷ್ಟು ಉತ್ತಮ ಕೆಲಸ ಮಾಡಲು ಸಹಕಾರಿಯಾಗುವುದು.ಹಳ್ಳಿಯಿಂದ ಬಂದ ಜನರಿಗೆ ಕುಡಿವ ನೀರಿನ ಸಮಸ್ಯೆ ನೀಗಿಸುವ ಕಾರ್ಯ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಹೇಳಿದರು..

ಛಲವಾದಿ ಸಮಾಜದ ಅಧ್ಯಕ್ಷರಾದ ರಾಮಣ್ಣ ಗೋನ್ವಾರ ಮಾತನಾಡಿ, ಹಳ್ಳಿಯಿಂದ ನಾನಾ ಕೆಲಸಗಳಿಗೆ ಪಟ್ಟಣಕ್ಕೆ ಬರುವ ಬಡ ಜನರಿಗೆ ಕುಡಿಯುವ ನೀರನ್ನು ಹೋಟೆಲ್‌ನಲ್ಲಿ ಉಚಿತವಾಗಿ ನೀಡುವುದು ಕಷ್ಟ. ಆದ್ದರಿಂದ ನೀರಿನ ಮಹತ್ವ ಅರಿತು ಬೇಸಿಗೆಯಲ್ಲಿ ಬಿಸಿಲಿನ ದಾಹ ನೀಗಿಸಲು ಅರವಟ್ಟಿಗೆ ಸ್ಥಾಪನೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ನರಸಪ್ಪ ಕಟ್ಟಿಮನಿ, ಹನುಮಂತ ಗೋಮರ್ಸಿ, ಮಲ್ಲಯ್ಯ ಸಹಕಾರ ಸಂಘ, ಅಮರೇಗೌಡ ಮಲ್ಲಾಪೂರು, ಹೊನ್ನೂರು ಕಟ್ಟಿಮನಿ, ಶರಣಬಸವ ಮಲ್ಲಾಪೂರು, ಸಿದ್ದಪ್ಪ ಸೋಮಲಾಪೂರು, ಬಾಲರಾಜ ವಿರುಪಾಪೂರು, ವಿರೇಶ ಬೂದಿಹಾಳ ಕ್ಯಾಂಪ್, ವೆಂಕಟೇಶ ನವಲಿ,ವಿರೇಶ ಪೂಜಾರಿ, ಇನ್ನೂ ಮುಂತಾದವರು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;