;

ಬಳ್ಳಾರಿ ರೆಡ್ ಕ್ರಾಸ್ ಸಂಸ್ಥೆಯಿಂದ ಪ್ರಥಮ ಚಿಕಿತ್ಸೆ ವಿಶೇಷ ಕಾರ್ಯಗಾರ…!!!ಬಳ್ಳಾರಿ ರೆಡ್ ಕ್ರಾಸ್ ಸಂಸ್ಥೆಯಿಂದ ಪ್ರಥಮ ಚಿಕಿತ್ಸೆ ವಿಶೇಷ ಕಾರ್ಯಗಾರ…!!!

ಬಳ್ಳಾರಿ ರೆಡ್ ಕ್ರಾಸ್ ಸಂಸ್ಥೆಯಿಂದ ಪ್ರಥಮ ಚಿಕಿತ್ಸೆ ವಿಶೇಷ ಕಾರ್ಯಗಾರ
ಗಾಯಾಳುಗಳಿಗೆ ಮೊದಲು ಪ್ರಥಮ ಚಿಕಿತ್ಸೆ ನೀಡಿ;ನಂತರ ಆಸ್ಪತ್ರೆಗೆ ಸಾಗಿಸಿ:ಡಿವೈಎಸ್ಪಿ ಸರ್ದಾರ್
ಬಳ್ಳಾರಿ,

ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ತಾವು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಗಳಲ್ಲಿ ಅನಾಹುತಗಳು ಸಂಭವಿಸಿದರೇ ಮೊದಲಿಗೆ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ;ನಂತರ ಆಸ್ಪತ್ರೆಗೆ ಸಾಗಿಸುವ ಮೂಲಕ ಅವರ ಜೀವವನ್ನು ಉಳಿಸಬಹುದು ಎಂದು ಬಳ್ಳಾರಿಯ ಡಿ.ಎ.ಆರ್‍ನ ಡಿವೈಎಸ್ಪಿ ಸರ್ದಾರ್ ಅವರು ತಿಳಿಸಿದರು.
ಭಾರತೀಯ ರೆಡ್ ಸಂಸ್ಥೆಯ ರಾಜ್ಯ ಶಾಖೆಯು 100 ವರ್ಷದ ಶತಮಾನೋತ್ಸವ ನಿಮಿತ್ತ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಮತ್ತು ಪೊಲೀಸ್ ಇಲಾಖೆ ಸಹಯೋಗದೊಂದಿಗೆ ನಗರದ ಡಿ.ಎ.ಆರ್ ಪೊಲೀಸ್ ಮೈದಾನದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಪ್ರಥಮ ಚಿಕಿತ್ಸೆ ವಿಶೇಷ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸಂಚಾರಿ ಪೊಲೀಸರು ದಿನನಿತ್ಯ ಟ್ರಾಫಿಕ್ ಮತ್ತು ವಾಹನಗಳ ಸುಗಮ ಸಂಚಾರ ನಿರ್ವಹಣೆಯ ಮಧ್ಯೆಯೇ ಇರುವಂತವರು;ತಾವು ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಅಪಘಾತಗಳುಂಟಾದಲ್ಲಿ ಮಾನವೀಯ ಉದ್ದೇಶದಿಂದ ಗಾಯಾಳುಗಳಿಗೆ ಮಾನವೀಯ ಉದ್ದೇಶದಿಂದ ಪ್ರಥಮ ಚಿಕಿತ್ಸೆ ನೀಡುವುದರ ಮೂಲಕ ಅವರ ಜೀವ ಉಳಿಸುವ ಕಾರ್ಯ ಮಾಡಬೇಕು ಎಂದರು.
ಪ್ರಥಮ ಚಿಕಿತ್ಸಾ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ತಿಳಿಸುವ ಪ್ರತಿಯೊಂದು ಅಂಶಗಳನ್ನು ಪೊಲೀಸ್ ಸಿಬ್ಬಂದಿ ಪಾಲಿಸುವಂತೆ ಅವರು ತಿಳಿಸಿದರು.
ರೆಡ್ ಕ್ರಾಸ್ ಸಂಸ್ಥೆಯ ಉಪಸಭಾಪತಿಗಳಾದ ಡಾ.ಎಸ್.ಜೆ.ವಿ ಮಹಿಪಾಲ್ ಅವರು ಪ್ರಥಮ ಚಿಕಿತ್ಸೆಯ ಉಪಯೋಗಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿಗಳಾದ ಎಂ.ಎ.ಷಕೀಬ್, ಡಿ.ಎ.ಆರ್‍ನ ಇನ್ಸಪೆಕ್ಟರ್ ಅಮೋಘ, ಸ್ವಯಂಸೇವಕರಾದ ನಿಸಾರ್ ಅಹಮದ್, ಮೆಹಬೂಬ್ ಬಾಷಾ, ಎಂ.ಐ.ನಿಸಾರ್ ಅಹಮದ್, ಎಜಾಜ್ ಅಹಮದ್ ಮತ್ತು ಸುಮಾರು 100 ಜನ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು…

 

ವರದಿ. ವಿರೇಶ್ ಹಳೇಕೋಟೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend