ಕಾಂಗ್ರೆಸ್ ಕೆಪಿಸಿಸಿ ರಾಜ್ಯಧ್ಯಕ್ಷ ಡಿ ಕೆ ಶಿವುಕುಮಾರನ್ನು ಸ್ವಾಗತಿಸಿದ ಕೆ. ಕರಿಯಪ್ಪ.
ಸಿಂಧನೂರು : ರಾಜ್ಯದ ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ, ಯಾದಗಿರಿ, ರಾಯಚೂರು,ಬಳ್ಳಾರಿ,ಕೊಪ್ಪಳ ಜಿಲ್ಲೆಯಾದ್ಯಂತ ಮಾರ್ಚ್ 22 ರಿಂದ 24 ರವರೆಗೆ ಕೈಗೊಂಡಿರುವ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ ಪ್ರಗತಿ ಪರಿಶೀಲನಾ ಸಭೆಯ ಅಂಗವಾಗಿ ರಾಯಚೂರು ದಿಂದ ಕೊಪ್ಪಳಕ್ಕೆ ತೆರಳುತ್ತಿದ್ದ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ರಾಜ್ಯಧ್ಯಕ್ಷರಾದ ಡಿ.ಕೆ. ಶಿವುಕುಮಾರ ರವರನ್ನು ಸಿಂಧನೂರು ನಗರದ ಕನಕದಾಸ ವೃತ್ತದಲ್ಲಿ ಮಾಜಿ ಕೆಪಿಸಿಸಿ ಕಾರ್ಯದರ್ಶಿ ಕೆ. ಕರಿಯಪ್ಪ ನವರು ಸ್ವಾಗತಿಸಿ, ಸನ್ಮಾನಿಸಿ ಗೌರವಿಸಿದರು. ಅಧ್ಯಕ್ಷರಾದ ಡಿ. ಕೆ. ಶಿವಕುಮಾರ ಕನಕದಾಸ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಎನ್. ಎಸ್. ಭೋಸರಾಜ್, ಶಿವರಾಜ ತಂಗಡಗಿ, ಮಾಜಿ ಯುವ ಕಾಂಗ್ರೆಸ್ ರಾಜ್ಯಧ್ಯಕ್ಷರಾದ ಬಸನಗೌಡ ಬಾದರ್ಲಿ, ರಾಯಪ್ಪ ವಕೀಲರು, ಮಹಾದೇವಪ್ಪ, ಬಸವರಾಜ, ಅಮರೇಶಪ್ಪ ಮೈಲಾರಿ, ನಾಗರಾಜ ಬಾದರ್ಲಿ, ಬಾಗೋಡಿ ಹನುಮೇಶ, ಗನಿಸಾಬ, ವಿರುಪಣ್ಣ ಮಾಡಶಿರವಾರ,ಕೆ.ಕರಿಯಪ್ಪ ಅಭಿಮಾನಿ ಬಳಗದ ಪಧಾದಿಕಾರಿಗಳು ಇನ್ನೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
