;

ಸಂಜೀವಿನಿ ಮಾಸಿಕ ಸಂತೆ ಪ್ರದರ್ಶನ ಮತ್ತು ವಸ್ತು ಮಾರಾಟ…!!!

ಸಂಜೀವಿನಿ ಮಾಸಿಕ ಸಂತೆ ಪ್ರದರ್ಶನ ಮತ್ತು ವಸ್ತು ಮಾರಾಟ.

ಸಿಂಧನೂರು: ಮಾ 22
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಜಿಲ್ಲಾ ಪಂಚಾಯತ್ ತಾಲೂಕ ಪಂಚಾಯತ್ ಗ್ರಾಮ ಪಂಚಾಯಿತಿ ಪಗಡದಿನ್ನಿ ಸಹಯೋಗದಲ್ಲಿ ಪಗಡದಿನ್ನಿ ಕ್ಯಾಂಪಿನಲ್ಲಿ ಮಹಿಳಾ ಗುಂಪಿನ ಸದಸ್ಯರು ತಾವು ತಯಾರಿಸಿದ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನಕ್ಕಾಗಿ ಮಾಸಿಕ ಸಂತೆಯನ್ನು ಆಯೋಜಿಸಿದ್ದು ಮಹಿಳಾ ಸದಸ್ಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಸಂಜೀವಿನಿ ಮಾಸಿಕ ಸಂತೆ ಪ್ರದರ್ಶನ ಮತ್ತು ವಸ್ತು ಮಾರಾಟ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ತಸಲಿಂ ರವರು ಉದ್ಘಾಟನೆಯನ್ನು ನೆರವೇರಿಸಿದರು.

ಮಹಿಳಾ ಸಂಘಗಳಿಂದ ಉತ್ಪನ್ನಗಳನ್ನು ಖರೀದಿಸುವ ಮೂಲಕ ಗುಂಪಿನ ಮಹಿಳೆಯರಿಗೆ ಬೆಂಬಲ ನೀಡಿ ಸ್ವಾವಲಂಬಿ ಜೀವನ ನಡೆಸಲು ವಸ್ತುಗಳನ್ನು ಖರೀದಿ ಮಾಡಿ ಮತ್ತು ಮದುವೆಯ ಯಾವುದೇ ಕಾರ್ಯಕ್ರಮಗಳಿಗೆ ಮಹಿಳೆಯರು ತಯಾರಿಸಿದ ವಸ್ತುಗಳನ್ನು ಖರೀದಿಸಿ.

ಮಹಿಳೆಯರು ಸ್ವಸಹಾಯ ಗುಂಪುಗಳಿಗೆ ಬ್ಯಾಂಕ್ ಗಳಿಂದ ಕಡಿಮೆ ಬಡ್ಡಿ ಧರದಲ್ಲಿ ಸಾಲ ಪಡೆದುಕೊಂಡು ಸ್ವ ಉದ್ಯೋಗ ಮಾಡುತ್ತದೆವೆ. ಮಾರುಕಟ್ಟೆಯ ಸೌಲಭ್ಯ ಎದುರಾಗುತ್ತಿದ್ದು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಿಂದಾಗಿ ಸೌಲಭ್ಯಗಳು ದೊರೆತಿದೆ.ಇದು ಉತ್ತಮ ಯೋಜನೆಯನ್ನು ಜಾರಿಗೆ ತಂದಿದೆ ಇದರಿಂದ ಮಹಿಳೆಯರು ಸ್ವಾವಲಂಬಿಯಾಗಿ ಜೀವನ ಸಾಗಿಸಲು ಹೆಚ್ಚೆಚ್ಚು ಉತ್ಪನ್ನಗಳ ತಯಾರಿಸಿ ಮಳಿಗೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆಂದು ಮಹಿಳಾ ಗುಂಪಿನ ಸದಸ್ಯ ತಿಳಿಸಿದರು.

ನಂತರ ಈ ಕಾರ್ಯಕ್ರಮದ ವ್ಯವಸ್ಥಾಪಕ ವೀರಭದ್ರಗೌಡ ಮಾತನಾಡಿ ಮಾಸಿಕ ಸಂತೆಯಲ್ಲಿ ಎನ್ ಆರ್ ಎಮ್ ಅಡಿಯಲ್ಲಿ 976 ಮಹಿಳಾ ಸಂಘ ನೊಂದಿಣಿ ಯಾಗಿದ್ದು ಸಮುದಾಯದ ಬಂಡಾಯ ನಿಧಿ ಸಾಲ ಸೌಲಭ್ಯಗಳ ವ್ಯವಸ್ಥೆ ಮಾಡಿ ಕೊಡಲಾಗಿದೆ.
ಸ್ವಂತ ಉದ್ಯಮಿ ಮಾಡುವ ಮಹಿಳೆಯರಿಗೆ ಒಂದು ಮಾರುಕಟ್ಟೆಯ ವ್ಯವಸ್ಥೆ ಮಾಡುವ ಸಲುವಾಗಿ ಇದೇ ತರಹದ ಮಾಸಿಕ ಸಂತೆ ಮಾಡಿ ಈ ಉತ್ಪನ್ನಗಳು ನಮ್ಮ ಇಲಾಖೆಯ ವತಿಯಿಂದ ಅಮೆಜಾನ್ ನೊಂದಿಗೆ ಕೂಡ ಸಹಬಾಗುತ್ವವನ್ನು ಹೊಂದಿದೆ ಜೊತೆಗೆ ಸಂತೆ ಕೌಶಲ್ಯ ಆ್ಯಪ್ ಮೂಲಕ ಅದರಲ್ಲೂ ಸಹ ಈ ಉತ್ಪನ್ನಗಳ ಅಪಲೋಡ ಮಾಡಬಹುದು. ಆನ್‌ಲೈನ್ ನಲ್ಲಿ ಮಾರಾಟ ವಾಗುತ್ತೆ ಸ್ಥಳಿಯ ವಾಗಿ ಮಾರುಕಟ್ಟೆಯ ಸೌಲಭ್ಯ ಸಿಗಲೆಂದು ಈ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿಲಾಗಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಹಾಗೂ 11 ಪಂಚಾಯಿತಿ ,45 ಕ್ಕೂ ಅಧಿಕ ಗುಂಪುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪಗಡದಿನ್ನಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಓಂಕಾರೇಶ್ವರಿ,ಉಪಾಧ್ಯಕ್ಷರಾದ ವೆಂಕೋಬ,ಸದಸ್ಯರಾದ ನಾಗಪ್ಪ,ಹುಲಿಗೇಮ್ಮ,ಕೆ.ಸತ್ಯನಾರಾಯಣ ,ಕೆ.ಅಮರೇಶ,ಹಾಗೂ ಎನ್ ಆರ್ ಎಮ್ ಸಿಬ್ಬಂದಿಗಳಾದ
ಮೌನೇಶ ವಲಯ ಮೆಲ್ವೀವಿಚಾರಕರು,ಶರಣಬಸವ ಕಂಪ್ಯೂಟರ್ ಆಫರೇಟರ್,ಸೇರಿದಂತೆ ಅನೇಕ ಉಪಸ್ಥಿತರಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;