ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಕಾನ ಹೊಸಹಳ್ಳಿ.
ಆಕಸ್ಮಿಕ ಬೆಂಕಿಗೆ ಸುಟ್ಟುಹೋದ ಮೇವಿನ ಬಣವೆಗೆ ಗಳು.
ಕಾನಹೊಸಹಳ್ಳಿ ಹೋಬಳಿ ವ್ಯಾಪ್ತಿಗೆ ಸೇರಿದ ಜುಮ್ಮೋಬನಹಳ್ಳಿ ಗ್ರಾಮದ ನಾಗರಾಜ ಎಂಬುವರು ದನಕರುಗಳಿಗೆ ಕಣದಲ್ಲಿ ಶೇಖರಣೆ ಮಾಡಿದ ಮೇವಿನ ಬಣಗಳಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸುಮಾರು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ದನಕರುಗಳ ಮೇವು ಸುಟ್ಟು ಭಸ್ಮವಾಗಿದೆ ಎಂದು ತಿಳಿದುಬಂದಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಜುಮ್ಮೋಬನಹಳ್ಳಿ ಗ್ರಾಮಸ್ಥರು ಬೆಂಕಿಯನ್ನು ನಂದಿಸಲು ಹರಸಾಹಸ ಪಡಲಾಯಿತು. ನಂತರ ಅಗ್ನಿಶಾಮಕದಳ ಗ್ರಾಮಕ್ಕೆ ಆಗಮಿಸಿ ಬಿದ್ದ ಬೆಂಕಿಯನ್ನು ನಂದಿಸಿದರು. ಆದರೂ ಕೂಡ ಸುಮಾರು ಮೇವಿನ ಬಣವೆಗಳು ಸುಟ್ಟು ಭಸ್ಮವಾಗಿವೆ. ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
