;

ವಾಹನ ಚಲಾಯಿಸುವವರು ಕಡ್ಡಾಯವಾಗಿ ವಾಹನದ ನೊಂದಣಿ ಪತ್ರ, ಚಾಲನಾ ಪರವಾನಗಿ ಪತ್ರ ಹೊಂದಿರಬೇಕು – ವೆಂಕಟಪ್ಪನಾಯಕ…!!!

ವಾಹನ ಚಲಾಯಿಸುವವರು ಕಡ್ಡಾಯವಾಗಿ ವಾಹನದ ನೊಂದಣಿ ಪತ್ರ, ಚಾಲನಾ ಪರವಾನಗಿ ಪತ್ರ ಹೊಂದಿರಬೇಕು – ವೆಂಕಟಪ್ಪನಾಯಕ

ಸಿಂಧನೂರು. ವಾಹನಗಳನ್ನು ಚಲಾಯಿಸುವವರು ಕಡ್ಡಾಯವಾಗಿ ವಾಹನದ ನೊಂದಣಿ ಪತ್ರ ಚಾಲನಾ ಪರವಾನಗಿ ಪತ್ರ ಮತ್ತು ವಿಮೆ ಪತ್ರ ಸೇರಿದಂತೆ ವಾಹನದ ಎಲ್ಲ ದಾಖಲಾತಿಗಳು ಸರಿ ಇದ್ದಾಗ ಮಾತ್ರ ಆಟೋ ಒಡಿಸಬೇಕು ಇದರಿಂದ ಪ್ರಯಾಣಿಕರ, ಮತ್ತು ಚಾಲಕರ ನಂಬಿದ ಕುಟುಂಬ ಸುರಕ್ಷಿತವಾಗಿರಲು ಸಾಧ್ಯ ಎಂದು ಡಿವೈಎಸ್‌ಪಿ ವೆಂಕಟಪ್ಪ ನಾಯಕ ಹೇಳಿದರು.

ನಗರ ಪೊಲೀಸ್ ಠಾಣೆಯಲ್ಲಿ ಸಂಚಾರ ನಿಯಮಗಳ ಪಾಲನೆ ಸುರಕ್ಷತೆಯ ಚಾಲನೆ ಎಂಬ ಮಾಹಿತಿ ನೀಡಲು ಕರೆದ ಆಟೋ ಚಾಲಕರ ಸಭೆ ಉದ್ದೇಶಿಸಿ ಮಾತನಾಡಿದ ಅವರು ದಾಖಲಾತಿಗಳನ್ನು ಸಮರ್ಪಕವಾಗಿ ಇಟ್ಟುಕೊಂಡು, ರಸ್ತೆ ಸುರಕ್ಷಿತ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅತಿ ವೇಗದ ಚಾಲನೆ ಅಪಘಾತಕ್ಕೆ ಕಾರಣ ವೇಗವಾಗಿ ವಾಹನ ಚಲಾಯಿಸಬೇಡಿ ಎಂದು ಹೇಳಿದರು.

ಆಟೋ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು,ಶ್ರಮವಸ್ತ್ರ ತೆಗೆದುಕೊಳ್ಳಲು ತೊಂದರೆ ಇದ್ದರೆ ಅಂತವರು ನನಗೆ ತಿಳಿಸಿದರೆ ಉಚಿತ ಸಮವಸ್ತ್ರ ದೊರಕಿಸುವೆ.ಮದ್ಯಪಾನ ಮಾಡದೇ, ನಿರ್ಲಕ್ಷ್ಯದಿಂದ ವಾಹನಚಲಾಯಿಸದೆ,ಆಕಸ್ಮಿಕ ಅಪಘಾತವಾಗಿ ನಿಮ್ಮ ಮೇಲೆ ಪ್ರಕರಣ ದಾಖಲಾದರೆ ಕೋರ್ಟ್‌ನಲ್ಲಿ ನಿಮಗೆ ನಿಮ್ಮ ದಾಖಲಾತಿಗಳು ನೆರವಿಗೆ ಬರುತ್ತವೆ. ಹೊರತು ಬೇರೆ ಯಾರು ನಿಮ್ಮ ನೆರವಿಗೆ ಬರುವುದಿಲ್ಲ. ಲೈಸನ್ಸ್ ಇಲ್ಲದಿರುವ ಆಟೋ ಚಾಲಕರಿಗೆ ನಗರ ಠಾಣೆಗೆ ಆರ್‌ಟಿಒ ಅಧಿಕಾರಿ ಕರೆಸಿ ಪೊಲೀಸ್ ಇಲಾಖೆಯಿಂದ ಲೈಸನ್ಸ್ ಮಾಡಿಸಿಕೊಡಲಾಗುವುದು. ನಗರದಲ್ಲಿ ಅಪಘಾತಗಳು ಉಂಟಾದಾಗ ಯಾವ ಆಟೋ ಎನ್ನುವುದು ಪತ್ತೆ ಹಚ್ಚುವುದು ಕಷ್ಟವಾಗಿದೆ. ಹಾಗಾಗಿ ಪೊಲೀಸ್ ಇಲಾಖೆಯಿಂದ ನೂತನ ಯೋಜನೆ ಜಾರಿಗೆ ತಂದಿದ್ದು ಇನ್ನು ಮುಂದೆ ನಗರದ ಎಲ್ಲ ಆಟೋಗಳಿಗೆ ಚಾಲಕರ ಹೆಸರು ಹಾಗೂ ನಂಬರ್ ಮುದ್ರಿತ ಸ್ಪೀಕರ್‌ ಪೊಲೀಸರು ಅಂಟಿಸುತ್ತಾರೆ. ಅಪಘಾತ ಸಂಭವಿಸಿದಾಗ ಆಟೋ ಹಿಂದೆ ಬರೆದ ನಂಬರ್‌ ಹೇಳಿದರೆ ಸಾಕು ಆಟೋ ಪತ್ತೆ ಹಚ್ಚಲು ಸರಳವಾಗುವುದು.

ಆಟೋ ಚಾಲಕರು ಮದ್ಯಪಾನ ಮಾಡದೆ ಕಷ್ಟ ಪಟ್ಟು ದುಡಿದ ಹಣದಲ್ಲಿ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ. 18 ವರ್ಷದೊಳಗಿನ ಮಕ್ಕಳಿಗೆ ವಾಹನ ಚಲಾಯಿಸಲು ನೀಡಬಾರದು. ಒಂದು ವೇಳೆ ನೀಡಿದರೆ ವಾಹನ ಮಾಲೀಕರಿಗೆ ದಂಡ ವಿಧಿಸಲಾಗುವುದು ದ್ವಿಚಕ್ರ ವಾಹನ ಸವಾರರು ತ್ರಿಬಲ್ ರೈಡಿಂಗ್ ಮಾಡಬಾರದು ಪ್ರಯಾಣಿಕರ ವಾಹನಗಳಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವ ಬೇಡಿ.ಎಲ್ಲಿಯಾದರು ಅಹಿತಕರ ಘಟನೆ ನಡೆದಾಗ ಆಟೋ ಚಾಲಕರು ಪೊಲೀಸ್‌ರಿಗೆ ಮಾಹಿತಿ ನೀಡಬೇಕು ಪೊಲೀಸ್ ಇಲಾಖೆ ಜೊತೆ ಸಾರ್ವಜನಿಕರು ಆಟೋ ಚಾಲಕರು ಸಹಕರಿಸಿದಾಗ ಮಾತ್ರ ಕಾನೂನು ಬಾಹೀರ ಚಟುವಟಿಕೆಗಳನ್ನು ತಡೆಯಲು ಸಾಧ್ಯ ಎಂದರು.

ಸಿಪಿಐ ಉಮೇಶ ಕಾಂಬಳೆ, ನಗರ ಪೊಲೀಸ್ ಠಾಣೆಯ ಪಿಎಸ್‌ಐ ಸೌಮ್ಯ ಹಿರೇಮಠ , ಸಂಚಾರಿ ಪೊಲೀಸ್ ಠಾಣೆ ಪಿಎಸ್‌ಐ ಬಸವರಾಜ, ಗ್ರಾಮೀಣ ಠಾಣೆ ಪಿಎಸ್‌ಐ ಎರಿಯಪ್ಪ, ತುರುವಿಹಾಳ ಠಾಣೆ ಪಿಎಸ್‌ಐ ಚಂದ್ರಪ್ಪ, ಬಳಗಾನೂರು ಠಾಣೆ ಪಿಎಸ್‌ಐ ಶಂಕರಗೌಡ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು, ಬಸವರಾಜ ಹಳೇಮನೆ, ದೌವಲಸಾಬ ದೊಡ್ಡಮನಿ, ಆಟೋ ಚಾಲಕರು, ಸಂಘ-ಸಂಸ್ಥೆಗಳ ಮುಖಂಡರು ಸಭೆಯಲ್ಲಿ ಹಾಜರಿದ್ದು ಸಲಹೆ ಸೂಚನೆ ನೀಡಿದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend