ಕರ್ನಾಟಕ ಸರ್ಕಾರ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟೆ ಹಾಗೂ ಶ್ರೀ ಗಾನಯೋಗಿ ಪಂಚಾಕ್ಷರಿ ಸಂಗೀತ ಸಾಂಸ್ಕೃತಿಕ ಜಾನಪದ ಕಲಾವಿದರ ಸಂಘ (ರಿ)ಜಿಲ್ಲಾ ಸಮಿತಿ ಬಾಗಲಕೋಟೆ ಇವರ ಸಹಯೋಗದಲ್ಲಿ ಜಿಲ್ಲಾಮಟ್ಟದ ಸುಗಮಸಂಗೀತ -ಜನಪದ ವೈಭವ ಕಾರ್ಯಕ್ರಮವು ರವಿವಾರ ದಿನಾಂಕ 20/03/2022 ರಂದು ಸಾಯಂಕಾಲ 7:00 ಗಂಟೆಗೆ ಮಹಾಕವಿ ರನ್ನನ ಜನ್ಮಸ್ಥಳವಾದ ರನ್ನಬೆಳಗಲಿ ಯಲ್ಲಿ ವಿಜೃಂಭಣೆಯಿಂದ ಜರುಗಿತು.ಈ ಕಾರ್ಯಕ್ರಮವನ್ನು ಕವಿ ಚಕ್ರವರ್ತಿ ರನ್ನ, ದೀನದಲಿತರ ಬಾಳಿಗೆ ಆಸರೆಯಾಗಿದ್ದ ಡಾ.ಪುಟ್ಟರಾಜ ಗವಾಯಿಗಳ ಹಾಗೂ ಯುವಕರ ಸ್ಪೂರ್ತಿ ಕರುನಾಡಿನ ಹೆಮ್ಮೆಯ ನಟ ಡಾ. ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರು ಜೊತೆಗೆ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ವೇದಿಕೆಯ ದಿವ್ಯಸಾನಿಧ್ಯ ವಹಿಸಿಕೊಂಡ ತ್ರಿವಿಧಿ ದಾಸೋಹಿ, ಪರಮಪೂಜ್ಯ ಶ್ರೀ ಸದ್ಗುರು ಅಭಿನವ ಗುರುಲಿಂಗಜಂಗಮ ಮಹಾಸ್ವಾಮಿಜಿಗಳು ಕಕಮರಿ ಮಠ ತಾಲೂಕ ಅಥಣಿ, ಶ್ರೀಗಳು ವಿವಿಧ ಕಲಾವಿದರ ಸಂಘಟನೆಗಳು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ರಿಂದ ಕಲಾವಿದನಿಗೆ ಗೌರವ ಸೂಚಿಸುವುದರ ಜೊತೆಗೆ ಆತನಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲು ಸಾಧ್ಯವಾಗುತ್ತದೆ, ಮಹಾಕವಿ ರನ್ನನ ಜನ್ಮಸ್ಥಳವಾದ ಈ ಊರು ಕಲಾವಿದರಿಂದ ಸದಾಕಾಲ ಬೆಳಗುತ್ತಿದೆ, ಈ ಕಾರ್ಯಕ್ರಮದ ಆಯೋಜನೆ ಮಾಡಿದ ಸಂಘಟನೆಗೆ ಅಭಿನಂದನೆಗಳನ್ನು ಸಲ್ಲಿಸಿದರು…

ವರದಿ. ಶಂಕರ್ ಬಾಗಲಕೋಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
