ಜನಸಾಮಾನ್ಯರ ಗಮನ ಸೆಳೆದ ಕಾನೂನು ಅರಿವು-ನೆರವು ಕಾರ್ಯಕ್ರಮ.
ಲಿಂಗಸೂಗೂರು: ಮಾ.18 ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕು ಸುಕ್ಷೇತ್ರ ಗುರುಗುಂಟ ಅಮರೇಶ್ವರ ದೇವಸ್ಥಾನವು ಒಂದು ಐತಿಹಾಸಿಕ ಸ್ಥಳ ವಾಗಿದೆ.
ಜಾತ್ರಾಮಹೋತ್ಸವದ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು ಹೋಳಿಹುಣ್ಣಿಮೆ ಮುಂಚೆ ಒಂದು ವಾರದಿಂದ ನಡೆದುಕೊಂಡು ಬರುತ್ತವೆ. ಹುಣ್ಣಿಮೆ ದಿನ ಶುಕ್ರವಾರದಂದು ಮಹಾರಥೋತ್ಸವದ ಮೂಲಕ ಆರಂಭಗೊಳ್ಳುವ ಜಾತ್ರೆ ಯುಗಾದಿ ಪಾಡ್ಯಕ್ಕೆ ಅಂತ್ಯಗೊಳ್ಳುವುದು ವಾಡಿಕೆ.
ಗುರಗುಂಟಾ ಅಮರೇಶ್ವರ ಜಾತ್ರಾ ಮಹೋತ್ಸವ ,ರಥೋತ್ಸವ ಕಾರ್ಯಕ್ರಮದ ಅಂಗವಾಗಿ ಉಟಕನೂರು ಬಸಲಿಂಗ ತಾತ ಶಿಕ್ಷಣ ಟ್ರಸ್ಟ್, ಶ್ರೀ ಮತಿ ಬಸಮ್ಮ ಗುರುಲಿಂಗಪ್ಪ ಕಾನೂನು ಮಹಾವಿದ್ಯಾಲಯದ ವತಿಯಿಂದ 5 ದಿನದಳ ವರೆಗೆ ಕಾನೂನು ಅರಿವು ನೇರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹೋಳಿ ಹುಣ್ಣಿಮೆ ದಿನ ನಡೆಯುವ ಜಾತ್ರಾಮಹೋತ್ಸವದಲ್ಲಿ ಉತ್ತರ ಕರ್ನಾಟಕ ಸೇರಿದಂತೆ ತುಮಕೂರು, ಬೆಂಗಳೂರು, ಮೈಸೂರು, ಮಹಾರಾಷ್ಟ್ರದ ಸೊಲ್ಲಾಪೂರ, ಪುನಾ, ಮುಂಬೈ. ಆಂಧ್ರ ಪ್ರದೇಶದ ಕರ್ನೂಲ್, ಮಹಿಬೂಬನಗರ, ಆದೋನಿ, ಹೈದರಬಾದ್ ಪ್ರದೇಶಗಳಿಂದ ಭಕ್ತರು ಬರುತ್ತಾರೆ.
ಜಾತ್ರೆಗೆ ಬಂದಂತಹ ಸಾರ್ವಜನಿಕ ಕಾನೂನಿನ ಅರಿವು ಮೂಡಿಸುವ ಅದರ ಬಗ್ಗೆ ಕುರಿತು ಕಾನೂನು ವಿದ್ಯಾರ್ಥಿಗಳಿಂದ ಸಂವಿಧಾನ ,ಮಹಿಳೆಯರ ಮೇಲಿನ ದೌರ್ಜನ್ಯ ,ದತ್ತಕ,ಐಪಿಸಿ,ಹಲ್ಲೆ ಮತ್ತು ಪ್ರಹಾರ,ಮೂಲಭೂತ ಕರ್ತವ್ಯ ,ಹಕ್ಕುಗಳು ,ಸುಲಿಗೆ ಮತ್ತು ದರೋಡೆ ,ಜಾಮೀನು ಮುಖ್ಯಾಂಶಗಳು ,ಜನತಾ ಅಧಾಲತ್ ಹಾಗೂ ಕಾನೂನಿನ ವಿಧಿ ವಿಧಾನಗಳ ಅಧಿನಿಯಮಗಳನ್ನು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಕಾನೂನಿನ ವಿಧ್ಯಾರ್ಥಿಗಳು ತಮ್ಮದೇ ಆದ ಶೈಲಿಯಲ್ಲಿ ಒಬ್ಬರಾಗಿ ಒಂದೂಂದು ವಿಷಯದ ಕುರಿತು ಸಾರ್ವಜನಿಕರಿಗೆ ಸವಿಸ್ತಾರವಾಗಿ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಪ್ರತಿವರ್ಷ ಹೋಳಿ ಹುಣ್ಣಿಮೆಯಂದು ಅಮರೇಶ್ವರ ಮಹಾ ರಥೋತ್ಸವ ಜಾತ್ರೆ ಜರುಗುತ್ತದೆ.ಈ ಜಾತ್ರೆಗೆ ಬಿಜಾಪುರ, ಗುಲ್ಬರ್ಗಾ, ಬಾಗಲಕೋಟೆ ,ಬೆಳಗಾವಿ ,ಬೀದರ್, ರಾಯಚೂರು, ಕೊಪ್ಪಳ ಸೇರಿ ಹೊರರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ, ಈ ಹಿನ್ನೆಲೆಯಲ್ಲಿ ಕಾನೂನು ಸಲಹೆ ನೀಡುವುದು ನಮ್ಮ ಕಾನೂನು
ಮಹಾವಿದ್ಯಾಲಯದಿಂದ ಸತತವಾಗಿ ಐದು ದಿನಗಳ ಕಾಲ ಕಾನೂನು ವಿದ್ಯಾರ್ಥಿಯಿಂದ ಯಶಸ್ವಿಗೊಳಿಸಿದ ರಿಂದ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂಜೀವಕುಮಾರ ಕಂದಗಲ್ ಅವರು ತುಂಬಾ ಹರ್ಷವ್ಯಕ್ತಪಡಿಸಿದ್ದರು.
ನಂತರ ಮಾತನಾಡಿದ ಅವರು ಜನಸಾಮಾನ್ಯರಿಗೆ ಕಾನೂನಿನ ಬಗ್ಗೆ ತಿಳಿಸುವುದರ ಜೊತೆಗೆ ವಿಧ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಸಿದ್ದತೆಗೆ ಅನುಕೂಲವಾಗುತ್ತದೆ.ಕಳೆದ ಎರಡೂ ಮೂರು ವರ್ಷಗಳಿಂದ ಕಾನೂನಿನ ತಿಳುವಳಿಕೆಯನ್ನು ಜನತೆಗೆ ಅರಿವು ಮೂಡಿಸುವಂತ ತುಂಬಾ ಒಳ್ಳೆಯ ಕಾರ್ಯವಾಗಿದೆ.ಪ್ರತಿವರ್ಷ ದಂತೆ ಈ ವರ್ಷ ಕೂಡ ಕಾರ್ಯಕ್ರಮ ಹಮ್ಮಿಕೊಂಡ ಇದನ್ನು ಮುಂದಿನ ಪ್ರತಿವರ್ಷವೂ ನೆರವೇರಿಸಿಕೊಂಡು ಹೋಗುವಂತೆ ಈ ಸಂದರ್ಭದಲ್ಲಿ ತಿಳಿಸಿದರು .
ಮೊದಲನೇ ದಿನದ ವಿಧ್ಯಾರ್ಥಿಗಳಿಂದ ಜಾಗೃತಿ ಮೂಡಿಸುವಲ್ಲಿ ಈ ಜಾತ್ರೆಯಲ್ಲಿ ತುಂಬಾ ಅಭೂತಪೂರ್ವ ಯಶಸ್ಸು ಸಿಕ್ಕ ಹಿನ್ನೆಲೆಯಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಜನಸಾಮಾನ್ಯರ ಬೆಂಬಲವ್ಯಕ್ತಪಡಿಸಿದ್ದಾರೆ.ಅದೇ ರೀತಿಯಾಗಿ ನಮ್ಮ ಸಂಸ್ಥೆಯ ಆಡಳಿತಾಧಿಕಾರಿಗಳು ಸಂತೋಷ್ ಕುಮಾರ್ ಕಂದಗಲ್ ಅವರ ಸಲಹೆ ಮಾರ್ಗದರ್ಶನ ಮೇರೆಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾನೂನು
ಮಹಾವಿದ್ಯಾಲಯದ ಪ್ರಾಚಾರ್ಯರಾದ
ಚಂದ್ರಶೇಖರ್ ಉನಕುಂಟಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಉಪನ್ಯಾಸಕ ವರ್ಗ,ಕಾನೂನು ಹಳೆಯ ವಿಧ್ಯಾರ್ಥಿ ಉಳಿದ ಎಲ್ಲಾ ವಿಧ್ಯಾರ್ಥಿಗಳಾದ ಅನಿಲಕುಮಾರ,ದುರುಗಪ್ಪ,ಗಣೇಶ್ ,ಲಚಮಪ್ಪ ,ವೀರೇಶ ಹೂಗಾರ ,ವೆಂಕಟೇಶ್ ಕ್ಷತ್ರಿಯ ,ವೆಂಕಟೇಶ್ ಗ್ರಂಥಪಾಲಕ ದರ್ಶನ , ವಿಧ್ಯಾರ್ಥಿನಿಯರು ಹಾಗೂ ಸಾರ್ವಜನಿಕ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು…..

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
