;

ಇಟ್ಟಿಗಿ ಗ್ರಾಮ ಪಂಚಾಯತಿ ವತಿಯಿಂದ ” ದುಡಿಯೋಣ ಬಾ ವಿಶೇಷ ಅಭಿಯಾನ”, ಹಾಗೂ “ರೋಜ್ ಗಾರ್ ದಿವಸ್ ಆಚರಣೆ…!!!

*ಇಟ್ಟಿಗಿ ಗ್ರಾಮ ಪಂಚಾಯತಿ ವತಿಯಿಂದ ” ದುಡಿಯೋಣ ಬಾ ವಿಶೇಷ ಅಭಿಯಾನ”, ಹಾಗೂ “ರೋಜ್ ಗಾರ್ ದಿವಸ್ ಆಚರಣೆ”*

ವಿಜಯ ನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮ ಪಂಚಾಯತಿವತಿ ಯಿಂದ ನೆಡೆದ ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸರ್ಕಾರವು ಜಾರಿಗೆ ತಂದಿರುವ “ದುಡಿಯೋಣ ಬಾ ಅಭಿಯಾನ “ಎಂಬ ವಿಶೇಷ ಕಾರ್ಯಕ್ರಮ ದ ಬಗ್ಗೆ ಕೂಲಿಕಾರ್ಮಿಕರಿಗಾಗಿ ಜಾಗೃತಿ ಯನ್ನು ಮೂಡಿಸಲು ವಾರ್ಡ್ ಮಟ್ಟದಲ್ಲಿ ಇತ್ತೀಚಿಗೆ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನುದ್ದೇಶಿಸಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಉಮೇಶ್ ಜಾಹಾಗಿರ್ದಾರ್ ರವರು ಮಾತನಾಡುತ್ತ ಮಾರ್ಚ್ 15 ರಿಂದ ಜೂನ್ 15 ರವರೆಗೆ ದುಡಿಯುವ ಜನರಿಗಾಗಿ ಉದ್ಯೋಗ ಖಾತ್ರಿ ಕೆಲಸವನ್ನು ನಿರಂತರವಾಗಿ ಕೊಟ್ಟು ಅತಿ ಹೆಚ್ಚು ಮಾನವದಿನಗಳನ್ನು ಸೃಜನೆ ಮಾಡುವ ಉದ್ದೇಶದಿಂದ ಈ ಒಂದು ಅಭಿಯಾನವನ್ನು ಸರ್ಕಾರ ತಂದಿದೆ… ನಾವು ಹಿಂದಿನ ವರ್ಷ ಕೊಟ್ಟಂತೆಯೇ ಸದರಿ ವರ್ಷದಲ್ಲಿಯೂ ಸಹ ದುಡಿಯುವ ಕೈಗಳಿಗೆ ನಮ್ಮ ಗ್ರಾ.ಪಂ.ಯಿಂದ ಕೊಡುತ್ತೇವೆ. ಹಾಗೆಯೇ NMMS ಹಾಜರಾತಿ ಇರುವುದರಿಂದ ಬೆಳಿಗ್ಗೆ 8 ರಿಂದ 11 ಮತ್ತು 2 ರಿಂದ 5 ಗಂಟೆವರೆಗಿನ ಅವಧಿಯಲ್ಲಿ ಹಾಜರಾತಿಯನ್ನು ಮೊಬೈಲ್ ಮನಿಟಾರಿಂಗ್ ಸಿಸ್ಟಮ್ ನಲ್ಲಿ ಕೊಟ್ಟು ಹೋಗ ಬೇಕಾಗುವುದೆಂದು ತಿಳಿಸಿದರು. ಗ್ರಾ ಪಂ ಕ್ಲರ್ಕ್ ಕಂ ಡಿ ಇ ಓ ಹೆಚ್ ಪ್ರಕಾಶ್ ಮಾತನಾಡಿ ದುಡಿಯೋಣ ಬಾ ಅಭಿಯಾನ & e shrama ಕಾರ್ಡ್ ಬಗ್ಗೆ ಮಾಹಿತಿ ನೀಡಿದರು ಕಾಯಕ ಮಿತ್ರರಾದ ಶಾಂತಮ್ಮ, ರಾಯಭಾರಿ ಟಿಪ್ಪುಸುಲ್ತಾನ್ & ಕೂಲಿ ಕಾರ್ಮಿಕರು ಹಾಜರಿದ್ದರು. ಇದರಂತೆ ಮೊನ್ನೆ ಇಟ್ಟಿಗಿ ಪಂಚಾಯತಿ ವತಿಯಿಂದ ವಾರ್ಡ್ ಮಟ್ಟದ ನರೇಗಾ ರೋಜ್ ಗಾರ್ ದಿನಾಚರಣೆ & ದುಡಿಯೋಣ ಬಾ ಅಭಿಯಾನದ ಬಗ್ಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡು ಕಾಯಕ ಮಿತ್ರರಾದ ಶಾಂತಮ್ಮ & ದುಡಿಯೋಣ ಬಾ ಅಭಿಯಾನದ ರಾಯಭಾರಿ ಟಿಪ್ಪುಸುಲ್ತಾನ್ ರವರು ಉದ್ಯೋಗ ಖಾತ್ರಿ ಯೋಜನೆಯಡಿ ಅನುಷ್ಠಾನ ಗೊಳ್ಳುವಂತ ಸಮುದಾಯ & ಜಾಬ್ ಕಾರ್ಡ್ ಹೊಂದಿದವರು ವೈಯಕ್ತಿಕ ಕಾಮಗಾರಿಗಳಾದ ರೈತರ ಹೊಲಗಳಲ್ಲಿ ದಾಳಿಂಬೆ, dryagan ಫ್ರೂಟ್, ಬಾಳೆ, ಸಫೋಟ ಮುಂತಾದ ತೋಟಗಾರಿಕೆ ಬೆಳೆ ಬೆಳೆಯಬಹುದು ಇದಲ್ಲದೆ ಹೊಲದ ಬದು, ಕೃಷಿ ಹೊಂಡ, ಬೋರ್ ವೆಲ್ ರಿಚಾರ್ಜ್, ಎರೆಹುಳ ತೊಟ್ಟಿ, ದನದ ಕೊಟ್ಟಿಗೆ ನಿರ್ಮಾಣ ಹೀಗೆ ಒಂದು ಜಾಬ್ ಕಾರ್ಡ್ ಹೊಂದಿದ ಕುಟುಂಭವು 2,50,000ಲಕ್ಷ ರೂ ಗಳವರೆಗೆ ವೈಯಕ್ತಿಕ ಕಾಮಗಾರಿಗಳನ್ನು ತೆಗಿದು ಕೊಳ್ಳ ಬಹುದು ಎಂದು ತಿಳಿಸಿದರು…ಈ ಒಂದು ಕಾರ್ಯಕ್ರಮದಲ್ಲಿ ಗ್ರಾ ಪಂ ಸದಸ್ಯರಾದ ಎಚ್ ರವಿಯಪ್ಪ, ಸಿ ಪಾರ್ವತಮ್ಮಬೆಟ್ಟಪ್ಪ, ಮೇಟಿಯಾದ ಕೆ ಚಂದ್ರಪ್ಪ ಹಾಗೂ ಕೂಲಿ ಕಾರ್ಮಿಕರು ಪಾಲ್ಗೊಂಡಿದ್ದರು.

ವರದಿ- ಪ್ರಕಾಶ್ ಆಚಾರ್ ಇಟ್ಟಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;