;

ಪರೀಕ್ಷೆಯಲ್ಲಿ ಬರುವ ಪ್ರಶ್ನೆಗಳು. ವೈರಿ ಗಳಿದ್ದಂತೆ ವೈರಿಯನ್ನು ಮಣಿಸುವ ವಿದ್ಯಾರ್ಥಿಗಳ ಕಸರತ್ತು.!

ಪರೀಕ್ಷೆಯಲ್ಲಿ ಬರುವ ಪ್ರಶ್ನೆಗಳು. ವೈರಿ ಗಳಿದ್ದಂತೆ ವೈರಿಯನ್ನು ಮಣಿಸುವ ವಿದ್ಯಾರ್ಥಿಗಳ ಕಸರತ್ತು.!

ವಿಜಯ ನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ರಾಮಸಾಗರ ಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಶಾರದಾ ಪೂಜೆ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದ ಕುರಿತು ಶಾಲೆಯ ಮುಖ್ಯ ಶಿಕ್ಷಕರಾದ ಕರಿಬಸಪ್ಪ ಮಾತನಾಡಿ ಶಾರದಾಮಾತೆ ಅನುಗ್ರಹದಿಂದ ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ ನೀವು ಮುಂದೆ ವಿದ್ಯಾಭ್ಯಾಸ ಕೂಡ ಉತ್ತಮವಾಗಿ ಸಾಗಲಿ ಎಂದು ಶಾರದ ಮಾತೆಯಲ್ಲಿ ಪ್ರಾರ್ಥಿಸುತ್ತೇನೆ
ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜವಬ್ದಾರಿ ಶಿಕ್ಷಕ ಹಾಗೂ ಪಾಲಕರ ಮೇಲಿದೆ. ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ, ಇರುವ ಸಮಯವನ್ನು ವಿದ್ಯಾಭ್ಯಾಸಕ್ಕೆಂದು ಸಮರ್ಪಕವಾಗಿ ಬಳಸಿಕೊಳ್ಳಬೇಕು.

ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೇ ಆದ ಮೌಲ್ಯವಿದೆ. ದೇಶದ ಅಭಿವೃದ್ಧಿಗೆ ಉತ್ತಮ ಸೇವೆ ಹಾಗೂ ಪರಿಕಲ್ಪನೆ ಅವಶ್ಯ. ಭಾರತ ದೇಶದ ಉತ್ತಮ ನಾಗರೀಕರಾಗಬೇಕು . ಏನಾದರೂ ಒಂದು ಗುರಿ ಇಟ್ಟುಕೊಂಡು ಓದಿ ದೊಡ್ಡ ಮಟ್ಟಕ್ಕೆ ಬೆಳೆದು ನಿಮ್ಮ ತಂದೆ ತಾಯಿಗೆ ಒಳ್ಳೆಯ ಹೆಸರು ತರಬೇಕೆಂದು ತಿಳಿಸಿದರು. SDMC. ಅಧ್ಯಕ್ಷರಾದ ಜಿ ಟಿ ರಾಜಶೇಖರ್ ಮಾತನಾಡಿ ನಮಗೆ ಶಾರದಾಮಾತೆ ಒಳ್ಳೆಯದು ಮಾಡಲಿ ಎಂದು ನಾನು ಪ್ರಾರ್ಥಿಸುತ್ತೇನೆ
ಸಾಧನೆ ಮಾಡಬೇಕೆಂದರೆ ಛಲವೊಂದಿದ್ದರೆ ಸಾಕು. ಪರೀಕ್ಷೆಯಲ್ಲಿ ಬರುವ ಪ್ರಶ್ನೆಗಳು ವೈರಿಯಿದ್ದಂತೆ, ವೈರಿಯನ್ನು ಮಣಿಸುವುದೇ ವಿದ್ಯಾರ್ಥಿಗಳ ಕಸರತ್ತು. ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣವೊಂದೆ ದಾರಿದೀಪ ಎಂದು ಹೇಳಿದರು. ಇನ್ನು ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಕರಿಬಸಪ್ಪ.SDMC ಅಧ್ಯಕ್ಷರಾದ GT. ರಾಜಶೇಖರ್ ಶಾಲೆ ಶಿಕ್ಷಕರಾದ ಸುದರ್ಶನ್. . ಭೈರವ ಶೆಟ್ಟಿ. ನಿಜಗುಣಪ್ಪ. ರುಕ್ಮಿಣಿ ಬಾಯಿ .ಪವಿತ್ರ ಸಿದ್ದೇಶ್ .ಬಸವರಾಜ್. ಸ್ವಾಮಿ ಎಸ್ಡಿಎಂಸಿ ಸದಸ್ಯರು ಶಾಲೆಯ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..

ವರದಿ.ಡಿ.ಎಂ.ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;