ಸಂಭ್ರಮದ ಹೋಳಿಕಾಮನ ಹಬ್ಬ
ನಮ್ಮ ಸನಾತನ ಹಬ್ಬ ಆಚರಣೆಗಳಲ್ಲಿ ಸಂತೋಷ ಸಂಭ್ರಮದ ಜೊತೆ ಜೊತೆಯಲಿ ಆಧ್ಯಾತ್ಮಿಕತೆ ವೈಜ್ಞಾನಿಕತೆ ಸೇರಿಕೊಂಡಿರುತ್ತವೆ ಈ ಹಬ್ಬವನ್ನು ಭಾರತದೆಲ್ಲಡೇ ಆಚರಿಸುತ್ತಾರೆ. ಎಲ್ಲೆಲ್ಲೂ ಬಣ್ಣಗಳ ಚಿತ್ತಾರ . ಮನೆ-ಮನಗಳಲ್ಲಿ ಸಡಗರ ನೋವು ಕಷ್ಟಗಳನ್ನು ಮರೆತು ಖುಷಿಯಿಂದ ಕಳೆಯುವ ಕ್ಷಣ ಹಾಗೂ ಎಲ್ಲರಲ್ಲಿ ಆನಂದ ತರುವಂತಹ ಹಬ್ಬ ಹೋಳಿ ಕಾಮನಹಬ್ಬ ಈ ಹಬ್ಬವು ತನ್ನದೇ ಆದ ವಿಶೇಷತೆಯಿಂದ ಎಲ್ಲರನ್ನೂ ಸೆಳೆದಿದೆ ಹಿಂದೂಗಳ ದೊಡ್ಡ ಹಬ್ಬಗಳ ಪಟ್ಟಿಯಲ್ಲಿ ಈ ಹಬ್ಬವೂ ಸೇರಿಕೊಂಡಿದೆ.
ಜಾತಿಮತಗಳ ಭೇದವಿಲ್ಲದೆ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುವಂತಹ ಹಬ್ಬವಾಗಿದೆ
ಈ ಹಬ್ಬದ ಮೂಲಕ ಮುಂಬರುವ ಹೊಸ ವರ್ಷವನ್ನು ಅಂದರೆ ಯುಗಾದಿ ಹಬ್ಬವನ್ನು ಸ್ವಾಗತಿಸುವ ಮಹತ್ವಪೂರ್ಣವಾದ ಹಬ್ಬವಾಗಿದೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಸಂಭ್ರಮದಿಂದ ಆಚರಿಸುವ ಊರಿನ ಮುಖ್ಯವಾದ ಸ್ಥಳದಲ್ಲಿ “ರತಿಕಾಮರ” ಪ್ರತಿಮೆಯನ್ನು ಇಟ್ಟು ಶೃಂಗರಿಸಿ ಮಂಗಳ ವಾದ್ಯಗಳ ಮೂಳಗಿಸಿ ಬಣ್ಣದ ನೀರು ಸಗಣಿಯ ಗಂಜಲ ಗಳು ಕೂಡ ಎರಚುತ್ತಾರೆ . ಹೋಳಿ ಹಬ್ಬದ ಸಮಯದಲ್ಲಿ ಹೋಳಿ ಕಾಮನ ದಹನವನ್ನು ಆಚರಿಸಲಾಗುತ್ತದೆ ಇದು ಹಲವು ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ ಮತ್ತು ಕುಟುಂಬದಲ್ಲಿ ಶಾಂತಿಯನ್ನ ತರುತ್ತದೆ ಎನ್ನುವ ನಂಬಿಕೆಯಿದೆ ಈ ಹಬ್ಬವನ್ನು
ಏಕೆ ಆಚರಿಸಬೇಕು ? ಎಂಬ ಪ್ರಶ್ನೆಗೆ ಮಹತ್ವದ ಕಾರಣವಿದೆ ಪುರಾಣಗಳಲ್ಲಿ ಇದರ ಉಲ್ಲೇಖವನ್ನು ನೋಡಬಹುದು ಹಾಗೂ ಮಹಾಭಾರತದಲ್ಲಿ ಶ್ರೀಕೃಷ್ಣ ನು ಗೋಪಿಕೆಯರ ಜೊತೆಯಲ್ಲಿ ಹಾಗೂ ದ್ವಾರಕೆಯಲ್ಲಿ ಈ ಹಬ್ಬಚರಣೆಇತ್ತು ಎಂಬ ಉಲ್ಲೇಖವಿದೆ
“ಪುರಾಣಗಳಲ್ಲಿ ಹೋಳಿ ಹಬ್ಬದ ಮಹತ್ವ”
ಪೂವ೯ಕಾಲದಲ್ಲಿ ತಾರಕಸುರನೆಂಬ ರಾಕ್ಷಸನಿದ್ದನು.ಅವನು ತನಗೆ ಸಾವುಬರಬಾರದೆಂದು ಬ್ರಹ್ಮಕುರಿತು ತಪಸ್ಸು ಮಾಡಿ ವರಪಡೆದಿದ್ದನು.ಯಾರಿಂದಲೂ ಸಾವು ಬರಬಾರದು ಶಿವನಿಂದ ಜನಿಸಿದ ಏಳುದಿನದ ಶಿಶುವಿನಿಂದ ಸಾವಾಗಲಿ ಎಂಬ ವರಪಡೆದ ತಾರಕಾಸುರ ಮದೋನ್ಮತ್ತನಾಗಿ ದೇವತೆಗಳನೆಲ್ಲ ಪೀಡಿಸಲು ಪ್ರಾರಂಭಿಸಿದನು.
ಶಿವನು ದಕ್ಷಯಜ್ಞದಲ್ಲಿ ದಾಕ್ಷಾಯಿಣಿಯನ್ನು ಕಳೆದು ಕೊಂಡಿದ್ದರಿಂದ ಶಿವ ಶಕ್ತಿ ಯಿಲ್ಲದೆ ಮಗು ಜನಿಸಲಾರದು ಎಂಬ ಉದ್ದೇಶದಿಂದ ಆ ವರ ಪಡೆದಿದ್ದನು.ಶಿವನು ವಿರಾಗಿಯಾಗಿ ತಪಸ್ಸುನಲ್ಲಿದ್ದನು ಅವನನ್ನು ಎಚ್ಚರಿಸಲು ಯಾರಿಂದಲೂ ಸಾಧ್ಯವಾಗದಿರುವಾಗ ಕಾಮನು (ಮನ್ಮಥನು ಬ್ರಹ್ಮ ಮಾನಸ ಪುತ್ರ) ಈ ಕೆಲಸಕ್ಕೆ ಸನ್ನದ್ಧನಾದನು, ಇತ್ತ ಪಾರ್ವತಿ ಗಿರಿರಾಜನ ಮಗಳಾಗಿ ಜನ್ಮವೆತ್ತಿ ದ್ದಳು.ಶಿವನನ್ನೇ ಗಂಡನಾಗಿ ಪಡೆಯಲು ಕಠಿಣ ತಪಸ್ಸುಪ್ರಾರಂಭಿಸಿದಳು ಅವರಿಬ್ಬರನ್ನು ಒಂದು ಮಾಡಲು ದೇವತೆಗಳು ಕಾಮನನ್ನು ಪ್ರೇರಿಪಿಸಿದಾಗ ಅವನು ಶಿವನಿಗೆ ತನ್ನ ಪುಷ್ಪ ಬಾಣವನ್ನು ಬಿಟ್ಟಾಗ ಶಿವನ ತಪೋಭಂಗವಾದ್ದರಿಂದ ಶಿವನು ತ್ರೀನೇತ್ರದಿಂದ ಕಾಮನನ್ನು ದಹಿಸಿದನು .ಆಗ ಕಾಮನ ಸತಿ ರತಿಯು ಶಿವನನ್ನು ಮೋರೆಹೊಕ್ಕಾಗ ಕರುಣಾಕರ ಆಕೆಗೆ ನಿನ್ನ ಪತಿಗೆ ನಿನಗೆ ಮಾತ್ರ ಶಾರೀರಿಕವಾಗಿ ಕಾಣುವನು .ಉಳಿದವರಿಗೆ ಅರೂಪವಾಗಿ ಕಾಣುವನು ಎಂದು ವರವಿತ್ತನು.
ಲೋಕ ಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದ (ಅರೂಪ)ನಾದ
ನಂತರ ಶಿವ ಪಾರ್ವತಿ ಮದುವೆ ಸಂಭ್ರಮ ನಂತರ ಜನಿಸಿದ ಷಣ್ಮುಖ ನಿಂದ ತಾರಾಕಾಸುರನ ವಧೆಯಾಗುತ್ತದೆ
ಕಾಮರತಿಯರ ಈ ಸಾಹಸದಿಂದ ಲೋಕಕಲ್ಯಾಣವಾಗುತ್ತದೆ. ಅದೇದಿನವೆ ಪಾಲ್ಗಣಮಾಸದ ಶುದ್ಧ ಪೂರ್ಣಿಮೆಯ ಹೋಳಿ ಹುಣ್ಣಿಮೆ ಆ ದಿನವನ್ನೆ ಹೋಳಿ ಕಾಮನ ಹಬ್ಭವೆಂದು ಆಚರಿಸುತ್ತೇವೆ.
ಬಣ್ಣ ಪ್ರೀತಿ ಮತ್ತು ಸ್ನೇಹದ ಸಂಕೇತವಾಗಿದೆ.ಇಂತಹ ಪವಿತ್ರ ಮೌಲ್ಯಗಳ ವಿಕಾಸವನ್ನು ನಮ್ಮಲ್ಲಿ ಮತ್ತಷ್ಟು ಜಾಗೃತಿಯನ್ನು ಮಾಡುವ ಮಹತ್ವದ ಹಬ್ಬವಾಗಿದೆ. ಹಿಂದಿನ ಕಷ್ಟಕಾರ್ಪಣ್ಯಗಳನ್ನು ಮರೆತು ಮುಂದಿನ ದಿನಮಾನಗಳಲ್ಲಿ ಖುಷಿಯಿಂದ ವಿಶ್ವಾಸದಿಂದ ಕಳೆಯೋಣ ಬದುಕಿನ ಸವಾಲುಗಳನ್ನು ಮೆಟ್ಟಿನಿಂತು ಜಯಿಸೋಣ ಬದುಕಿನ ತುಂಬಾ ಪ್ರೀತಿ ಸ್ನೇಹ ತುಂಬಿರಲಿ ಎಂದು ಸಂದೇಶ ಸಾರುವ ಹಾಗೂ ನಮ್ಮಲ್ಲಿ ಹುಟ್ಟುವ ದ್ವೇಷ ಅಸೂಯೆಗಳನ್ನು ಸುಟ್ಟಹಾಕಿ ಜಾತಿ ತಾರತಮ್ಯ ಹೊಡೆದೊಡಿಸಿ ಒಂದಾಗಿ ಎಲ್ಲರೊಡನೆ ಅರಿತು ಬೆರೆತು ಬಾಳುವುದೇ ಈ ಹಬ್ಬದ ಮಹತ್ವದ ಸಂದೇಶವಾಗಿದೆ…
ಜಿ.ಬಿ.ವಿನಯರಾಜ್ಆಚಾರ್ಯ(ಕನಾ೯ಟ ಭೂಷಣ ರಾಜ್ಯ ಪ್ರಶಸ್ತಿ ವಿಜೇತರು)
ಹೂವಿನಹಡಗಲಿ ತಾಲೂಕು ವಿಜಯನಗರ ಜಿಲ್ಲೆ ಇಟ್ಟಿಗಿ…

ವರದಿ.ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
