ಭತ್ತದ ನಾಡಲ್ಲಿ ಪುನೀತ್ ಹುಟ್ಟು ಹಬ್ಬದ ನಡುವೆ, ಅದ್ದೂರಿ ಜೆಮ್ಸ್ ಚಿತ್ರ ವೀಕ್ಷಣೆ.
ಸಿಂಧನೂರು : ಇಂದು ರಾಜ್ಯಾದ್ಯಂತ ಜೇಮ್ಸ್ ಚಿತ್ರ ಬಿಡುಗಡೆಗೊಂಡಿದ್ದು,ಭತ್ತದ ನಾಡು ಸಿಂಧನೂರುನಲ್ಲಿ ಸಹ ಅವರ ಅಭಿಮಾನಿಗಳು ದಿವಂಗತ ಪುನೀತ್ ರಾಜ್ಕುಮಾರ್ ಜನ್ಮದಿನದ ಸಂಭ್ರಮವನ್ನು ಕೇಕ್ ಕತ್ತರಿಸುವ ಮೂಲಕ ಮತ್ತು ವಿವಿಧೆಡೆ ಅನ್ನಸಂತರ್ಪಣೆ ಮಾಡುವ ಮೂಲಕ ಆಚರಿಸಿದರು. ನಗರದ ಮಂಜುನಾಥಚಿತ್ರಮಂದಿರದಲ್ಲಿ ನೂರಾರು ಕಟಾಟಗಳನ್ನು ನಿಲ್ಲಿಸಿ ಹೂವಿನಿಂದ ಅಲಂಕಾರ ಮಾಡಿ ಸಿಂಗರಿಸಿ ಅಪ್ಪು ಪ್ರೀತಿಯನ್ನು ಮೆರೆದಿದ್ದಾರೆ.
ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ : ಕನ್ನಡದ ಕೊಟ್ಯಾಧಿಪತಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ ಹುಟ್ಟುಹಬ್ಬದ ನಿಮಿತ್ಯ ಎಲ್ಲಾ ಅಭಿಮಾನಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಯಾಯಿತು. ತಮ್ಮ ನೆಚ್ಚಿನ ನಟ ಪುನೀತ್ ರಾಜ್ಕುಮಾರ್ ಅಗಲಿಕೆಯ ನೊವಿನ ನಡುವೆಯೂ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ.ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಈ ವೇಳೆ ಅಭಿಮಾನಿಗಳು ಅಪ್ಪು ಅಭಿನಯದ ಚಿತ್ರ ಜೇಮ್ಸ್ ಪ್ರದರ್ಶನ ಹಿನ್ನೆಲೆಯಲ್ಲಿ ನಗರದ ಮಂಜುನಾಥ ಚಿತ್ರಮಂದಿರದಲ್ಲಿ 40ಅಡಿ ಕಟೌಟಗಳಿಗೆ ಹೂವಿನ ಹಾರದ ಮೂಲಕ ಅಲಂಕರಿಸಲಾಗಿದೆ. ಗಾಂಧಿ ವೃತ್ತದಿಂದ ಹಿರೆಹಳ್ಳದವರೆಗೆ, ನಗರದ ಪ್ರಮುಖ ವೃತ್ತಗಳಲ್ಲಿ ಪುನೀತ್ ಅಭಿನಯಿಸಿದ ಎಲ್ಲಾ ಚಿತ್ರದ ಕಟೌಟಗಳನ್ನುದಾರಿಯುದ್ದಕ್ಕೂ ನೋಡುಗರಿಗೆ ಹಬ್ಬದ ವಾತವರಣವೇ ಸೃಷ್ಟಿಯಾಯಿತು. ಪುನೀತ ರಾಜಕುಮಾರ ಪೋಟೋಗೆ ಹೂವಿನಿಂದ ಅಲಂಕಾರ ಮಾಡಿ ಅಭಿಮಾನಿಗಳು ತಮ್ಮ ಪ್ರೀತಿಯನ್ನು ಮೆರೆದಿದ್ದಾರೆ. ಇಂದು ಬೆಳಗಿನ ಜಾವ 9 ಗಂಟೆಯಿಂದ ಮೊದಲ ಶೋ ಆರಂಭವಾಗಿದೆ.ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಫಸ್ಟ್ ಡೇ ಫಸ್ಟ್ ಶೋ ನೋಡಲು ಚಿತ್ರಮಂದಿರದಲ್ಲಿ ಸೇರಿದ್ದಾರೆ. ಮುಂಜಾಗ್ರತೆಯಾಗಿ 15 ಜನ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು.ಟಿಕೇಟ್ ತೆಗೆದುಕೊಳ್ಳುವ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗಿದ್ದರಿಂದ ಪೋಲಿಸರು ಚದುರಿಸಿದರು. ಈ ದಿನ ಮೊದಲ ಶೋ ಇರೋದ್ರಿಂದ ಎಲ್ಲಾ ಶೋಗಳು ಹೌಸ್ ಫುಲ್ ಆಗಿದ್ದು ಕಂಡುಬಂತು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
