ಸಿಂಧನೂರು :ಇಂದು ನಗರದ ತಿಡಿಗೋಳ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಕುರುಕುಂದಾ ಗ್ರಾಮದಿಂದ ದೂರದ ಹತ್ತಿಗುಡ್ಡಾ ಗ್ರಾಮಕ್ಕೆ ಉದ್ಯೋಗ ಖಾತ್ರಿಯೋಜನೆಯ ಅಡಿಯಲ್ಲಿ ಕೂಲಿ ಕೆಲಸಕ್ಕೆ ತೆರಳಿ ಹತ್ತಿಗುಡ್ಡಾ ಗ್ರಾಮದಿಂದ ಕೆಲಸ ಮುಗಿಸಿ ಮನೆಗೆ ಬರುವ ವೇಳೆಯಲ್ಲಿ ಟ್ರ್ಯಾಕ್ಟರ್ ನಿಂದ ಕೈ ಜಾರಿ ಬಿದ್ದು ಅವರ ಮೇಲೆ ಟ್ರ್ಯಾಕ್ಟರ್ ಹರಿದು ಹೋಗಿದ್ದು, ಚಿಕಿತ್ಸೆಗಾಗಿ ಅಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಮದ್ಯದಲ್ಲಿ ಶಿವಪ್ಪ ತಂದೆ ಕರಿಯಪ್ಪ ವಯಸ್ಸು 45 ಸಾವನಪ್ಪಿದ್ದಾನೆ. ತುರ್ವಿಹಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ..

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
