ಕೂಡ್ಲಿಗಿ:ಬೀದಿಬದಿ ವ್ಯಾಪರಿಗಳ ದಿನಾಚರಣೆ.
ಕರ್ನಾಟಕ ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಮಹಾಮಂಡಲ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಶಾಖೆಯಿಂದ,ಜಿಲ್ಲಾ ಕಮಿಟಿಯಿಂದ ಬೀದಿಬದಿ ವ್ಯಾಪಾರಿಗಳ ದಿನಾಚರಣೆಯನ್ನು ಪಟ್ಟಣದ ಶ್ರೀಕೊತ್ತಲಾಂಜನೇಯ ದೇವಸ್ಥಾನದ ಆವರಣದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಸುನೀಲ್ ರಾವ್,ಹಿರಿಯ ಪರ್ತಕರ್ತ ಸೇರಿದಂತೆ ಕೆಲ ಗಣ್ಯರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಗೌರವಾಧ್ಯಕ್ಷರು ವಿಕ್ಕಿ ವಹಿಸಿಕೊಂಡಿದ್ದರು, ಜಿಲ್ಲಾಧ್ಯಕ್ಷ ಸುನೀಲ್ ರಾವ್ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು. ಎಲ್ಲಾ ತಾಲೂಕುಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳು,ಪದಾಧಿಕಾರಿಗಳು ಸದಸ್ಯರು. ತಾಲೂಕು ಘಟಕಗಳ ಮಹಿಳಾ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿಗಳು ಭಾಗವಹಿಸಿದ್ದರು. ಹರಪನಹಳ್ಳಿ ತಾಲೂಕು ಅಧ್ಯಕ್ಷ ಜಂಗ್ಲಿ ಅಂಜಿನ್, ಕಾರ್ಯದರ್ಶಿ ರಾಜಣ್ಣ, ಉಪಾಧ್ಯಕ್ಷ ವೀರೇಶ್, ಕೊಟ್ಟೂರು ತಾಲೂಕು ಅಧ್ಯಕ್ಷರ ನೂರುಲ್ಲಾ, ಉಪಾಧ್ಯಕ್ಷ ನಾಗರಾಜ ಗೌಡ್ರು, ಕಾರ್ಯದರ್ಶಿಗಳು ಹುಲುಗಪ್ಪ, ಹೊಸಪೇಟೆ ತಾಲೂಕ ಅಧ್ಯಕ್ಷ ಬಶೀರ್, ಗೌರವಾಧ್ಯಕ್ಷ ದಸ್ತಗಿರಿ, ಕಾರ್ಯದರ್ಶಿ ರಾಜಪಕ್ಷಿ, ಹಗರಿಬೊಮ್ಮನಹಳ್ಳಿ ಅಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ರೋಷನ್, ಮರಯಮ್ಮನಹಳ್ಳಿ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಉಮೇಶ್, ಉಪಾಧ್ಯಕ್ಷ ಮಮ್ಮದ್ ಸಾಬ್, ಕೂಡ್ಲಿಗಿ ತಾಲೂಕು ಅಧ್ಯಕ್ಷ ಪಿ. ಓಬಳೇಶಪ್ಪ,ಉಪಾಧ್ಯಕ್ಷ ಜಗನಾಥ್, ಹಾಗೂ ಟಿವಿಸಿ ಸದಸ್ಯರುಗಳು ಮತ್ತು ಜಿಲ್ಲಾ ಕಮಿಟಿಯ ಉಪಾಧ್ಯಕ್ಷ ತಿಪ್ಪೇಸ್ವಾಮಿ,ಸಹಉಪಾಧ್ಯಕ್ಷ ಹನುಮಂತ ನಾಯಕ್, ಜಿಲ್ಲಾ ಸಂಘಟನೆ ಕಾರ್ಯದರ್ಶಿ ಅಶೋಕ, ಮಹಿಳಾ ಜಿಲ್ಲಾ ಕಮಿಟಿಯ ಅಧ್ಯಕ್ಷೆ ಡಿ.ಮಂಜುಳಾ, ಜಿಲ್ಲಾ ಉಪಾಧ್ಯಕ್ಷ ಈಶ್ವರಮ್ಮ, ವಿಜಯನಗರ ಜಿಲ್ಲೆಯ ಮಹಿಳಾ ಘಟಕದ ಎಲ್ಲಾ ಕಾರ್ಯದರ್ಶಿಗಳು ಮತ್ತು ಖಜಾಂಚಿ,ಎಲ್ಲಾ ಸದಸ್ಯರುಗಳು ಇದ್ದರು. ವಿಜಯನಗರ ಜಿಲ್ಲಾ ಎಲ್ಲಾ ತಾಲೂಕಿನ ಮಹಾಮಂಡಳದ ಪದಾಧಿಕಾರಿಗಳು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಪತ್ರಕರ್ತರನ್ನು ಹಾಗೂ ವಿವಿದ ಗಣ್ಯರನ್ನು ಸನ್ಮಾನಿಸಲಾಯಿತು.

ವರದಿ . ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
