;

ಕೊಟ್ಟ ಮಾತು ಉಳಿಸಿಕೊಂಡ ಮಹಾಲಿಂಗಪುರ ಪುರಸಭೆ ಅಧ್ಯಕ್ಷ್ಯ ಸ್ನೇಹಲ ಶಿವಾನಂದ ಅಂಗಡಿ…!!!

ಕೊಟ್ಟ ಮಾತು ಉಳಿಸಿಕೊಂಡ ಮಹಾಲಿಂಗಪುರ ಪುರಸಭೆ ಅಧ್ಯಕ್ಷ್ಯ ಸ್ನೇಹಲ ಶಿವಾನಂದ ಅಂಗಡಿ.

 

ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆ ಕಳೆದ ಹದಿನೈದು ತಿಂಗಳ ಹಿಂದೆ ರಾಷ್ಟ್ರ ಮಟ್ಟದ ಸುದ್ದಿಯಾಗಿತ್ತು ಕಾರಣ ಪಟ್ಟಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರು ತುಂಬಾ ಪೈಪೋಟಿಯಿಂದ ಅಧ್ಯಕ್ಷ ಗದ್ದುಗೆ ಹಿಡಿಯಲು ಕಸರತ್ತು ನಡೆಸಿದ್ದವು ಅದರಂತೆ ಬಿಜೆಪಿ ಪಕ್ಷದ ಮೂವರು ಗೋದಾವರಿ ವಿರೂಪಾಕ್ಷ ಬಾಟ,
ಚಾಂದನಿ ನಾಗೇಶ ನಾಯಕ,
ಸವಿತಾ ಚನ್ನಬಸು ಹುರಕಡ್ಲಿ ಈ ಮೂವರು ಸದಸ್ಯರು ಕಾಂಗ್ರೆಸ್ ಬೆಂಬಲ ಪಡೆದು ಅಧಿಕಾರ ಹಿಡಿಯಲು ಬಿಜೆಪಿ ತೊರೆದು ಕಾಂಗ್ರೆಸ್ ಬೆಂಬಲ ಪಡೆದಿದ್ದವು ಈ ಮೂವರ ನಡುವಳಿಕೆಯಿಂದ ಸ್ವತಃ ಶಾಸಕರೆ ಭಾಗಿಯಾಗಿ ಪುರಸಭೆ ಅಧಿಕಾರ ಕಾಂಗ್ರೆಸ್ ಪಕ್ಷಕ್ಕೆ ಹೋಗಲು ಬಿಡಲಾರದೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಎರಡು ಪಕ್ಷದವರ ಗದ್ದಲಕ್ಕೆ ಕಾರಣವಾಗಿ ಅದರಲ್ಲಿ ಮೂವರ ಸದಸ್ಯರನ್ನು ಬಹುಮತ ಸಾಧಿಸಲು ಬಿಡಲಾರದೆ ಏಳೆದಾಟ ನೂಕಾಟ ಮಾಡಿದ್ದ ಎರಡು ಪಕ್ಷದ ಮುಖಂಡರು. ಈ ಹಗ್ಗ ಜಗ್ಗಾಟ ಕೂಡ ಶಾಸಕರ ಸಮ್ಮುಖದಲ್ಲಿ ನಡೆದ ಘಟನೆಯಾಗಿತ್ತು ಈ ಘಟನೆ ಸಿಐಡಿ ಅಂಗಳಕ್ಕೂ ಹೋಗಿದೆ. ಕಡೆಗು ಬಿಜೆಪಿಯಿಂದ ಸ್ನೇಹಲ ಶಿವಾನಂದ ಅಂಗಡಿಯವರಿಗೆ ಟಾಸ್ಕ್ ಮಾಡುವ ಮೂಲಕ ಅಧ್ಯಕ್ಷ ಗದ್ದುಗೆ ಪಡೆದುಕೊಂಡಿದ್ದರು ಅದರಂತೆ ಹದಿನೈದು ತಿಂಗಳು ಅಧಿಕಾರ ವಹಿಸಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಇಂದು ಅವರ ಸ್ಥಾನಕ್ಕೆ ಕಾರಣಾಂತರಗಳಿಂದ ಜಮಖಂಡಿ ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಇನ್ನು ಈ ಸ್ಥಾನಕ್ಕೆ ಯಾರು ಋಣವಿದೆ ಮತ್ತೆ ಯಾರ ಕೈ ಸೇರಲಿದೆ ಅಧ್ಯಕ್ಷ ಹುದ್ದೆ ಎಂದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.

ವರದ.ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;