;

ಮಹಿಳೆಯರು ರಾಜಕೀಯದಲ್ಲಿ ಸಮಾನವಾಗಿ ಬೆಳೆಸುವ ಪ್ರಾಮಾಣಿಕ ಪ್ರಯತ್ನ – ಬಸನಗೌಡ ಬಾದರ್ಲಿ…!!!

ಮಹಿಳೆಯರು ರಾಜಕೀಯದಲ್ಲಿ ಸಮಾನವಾಗಿ ಬೆಳೆಸುವ ಪ್ರಾಮಾಣಿಕ ಪ್ರಯತ್ನ – ಬಸನಗೌಡ ಬಾದರ್ಲಿ .

ಸಿಂಧನೂರು : ಮಹಿಳೆಯರು ರಾಜಕೀಯದಲ್ಲಿ ಪುರುಷರಿಗೆ ಸಮಾನವಾಗಿ ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮಾಜಿ ಯುವ ಕಾಂಗ್ರೆಸ್ ರಾಜ್ಯಧ್ಯಕ್ಷ ಬಸನಗೌಡ ಬಾದರ್ಲಿ ತಿಳಿಸಿದರು.

ಇಂದು ನಗರದ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ತಾಲೂಕು ನಗರ ಮತ್ತು ಗ್ರಾಮೀಣ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ “ನಮ್ಮೂರ ಮಾತೆಯರಿಗೆ ಒಂದು ಸಲಾಂ”ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದಲ್ಲಿ ಅನೇಕ ಮಹಿಳೆಯರ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ದೇಶಕ್ಕೆ ಕೊಡುಗೆ ನೀಡಿದವರಲ್ಲಿ ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಕೂಡಾ ಒಬ್ಬರು.ನಂತರ ದೇಶದಲ್ಲಿ ಸೋನಿಯಗಾಂದಿ ಯವರಿಗೆ ಪ್ರಧಾನಿಯಾಗಲೂ ಅವಕಾಶ ಬಂದಿದ್ದರೂ ತಿರಸ್ಕರಿಸಿ ಅರ್ಥಶಾಸ್ತ್ರಜ್ನ ಮನಮೋಹನ ಸಿಂಗ ಅವರಿಗೆ ಅವಕಾಶ ನೀಡಿದರು. ಸ್ವಾತಂತ್ರ್ಯಕ್ಕಾಗಿ ಗಾಂಧಿ ಕುಟುಂಬ ಪ್ರಾಣವನ್ನು ಅರ್ಪಿಸಿದ್ದಾರೆ.ಕೊರೋನಾ ಸಂಕಷ್ಟದ ಸಮಯದಲ್ಲಿ ಅತಿ ಹೆಚ್ಚು ಮಹಿಳೆಯರ ಪಾತ್ರ ದೊಡ್ಡದು. ಬಡವರಿಗೆ, ಕೂಲಿ ಕಾರ್ಮಿಕರಿಗೆ ಮಹಿಳೆರಿಗಾಗಿ ನಮ್ಮ ಸೇವೆ ನಿರಂತರವಾಗಿರುತ್ತದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕೆಲವರು ನಮ್ಮ ಏಳಿಗೆಯನ್ನು ಸಹಿಸದೇ ನಮ್ಮ ಮೇಲೆ ಇಲ್ಲಸಲ್ಲದ ಅಪಾದನೆಗಳನ್ನು ಮಾಡುತ್ತಿದ್ದಾರೆ. ಯಾರು ಕಿವಿಗೊಡಬೇಡಿ, ಇತ್ತದಕ್ಕೆಲ್ಲಾ ನಾನು ಹೇರುವುದಿಲ್ಲ.ನಿಮ್ಮಗಳ ಸಹಕಾರ,ಕಾರ್ಯಕರ್ತರ ಬಲ ನನ್ನ ಮೇಲೆ ಇರುವವರಿಗೂ ಯಾರು ಏನು ಮಾಡಲು ಸಾಧ್ಯವಿಲ್ಲ. ನಿಮಗೆ ಯಾವುದೇ ರೀತಿಯ ತೊಂದರೆ ಅಥವಾ ಸಮಸ್ಯೆ ಇದ್ದರೆ ನನ್ನ ಮನೆ ಬಾಗಿಲು ಯಾವಾಗಲೂ ತೆರೆದಿರುತ್ತದೆ. ಎಂದು ಮುಖ್ಯ ಅತಿಥಿಯಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಂತರ ಮಾತನಾಡಿದ ರಮಾದೇವಿ ಶಂಭೋಜಿ ಸಾರ್ವತ್ರಿಕ ಮತದಾನದ ಹಕ್ಕು ಮತ್ತು ಮಹಿಳೆಯರ ಹೆರಿಗೆ ಭತ್ಯೆ ಮತ್ತು ಇತರೆ ಸೌಕರ್ಯಗಳಿಗಾಗಿ ಕ್ಲಾರಾ ಜೆಟ್‌ಕಿನ್ ಸಾವಿರಾರು ಮಹಿಳೆಯರ ಸಮ್ಮೇಳನದಲ್ಲಿ ಮಾರ್ಚ್ 8 ನ್ನು ಮಹಿಳಾ ದಿನವನ್ನಾಗಿ ಆಚರಿಸಬೇಕೆಂದು 1911ರಲ್ಲಿ ನಿರ್ಣಯ ಮಂಡಿಸಿದರು.ಮಹಿಳೆಯರು ಅನಾಧಿಕಾಲದಿಂದಲೂ ಶೋಷಣೆಗೆ ಒಳಗಾಗಿದ್ದಳು, ವೇದಗಳ ಕಾಲದಲ್ಲಿ ಸಮಾನತೆ ಇರಲಿಲ್ಲ, ಪುರುಷನಿಗಿಂತ ಕಡಿಮೆ ವೇತನವಿತ್ತು.ಮನು ಹೇಳಿದ ಹಾಗೇ ನ ಸ್ತ್ರೀ ಸ್ವಾತಂತ್ರ್ಯ ಅಂದರೆ ಸ್ತ್ರೀ ಬಾಲ್ಯದಲ್ಲಿ ತಂದೆಯ ಆಶ್ರಯದಲ್ಲಿ, ಯವ್ವನದಲ್ಲಿ ಗಂಡನ ಆಶ್ರಯದಲ್ಲಿ ಮುಪ್ಪಿನ ವ್ಯವಸ್ಥೆಯಲ್ಲಿ ಮಗನ ಆಶ್ರಯದಲ್ಲಿ ಇರುತ್ತಾಳೆ. ಅದಕ್ಕಾಗಿ ಸ್ತ್ರೀ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ, ಪುರುಷನು ಮಹಿಳೆಯ ಆರೈಕೆ ಇಲ್ಲದೆ ಬೆಳೆಯಲು ಸಾಧ್ಯವಿದೆ ಎಂದು ಮನು ಹೇಳಿದ್ದ.ಆದರೆ ಇಂದು ಬದಲಾಗಿದೆ ಪುರುಷ ಬಾಲ್ಯದಲ್ಲಿ ತಾಯಿಯ ಆಶ್ರಯದಲ್ಲಿ ,ಯೌವನದಲ್ಲಿ ಹೆಂಡತಿಯ ಆರೈಕೆಯಲ್ಲಿ, ಮುಪ್ಪಿನ ವ್ಯವಸ್ಥೆಯಲ್ಲಿ ಸೊಸೆಯ ಆರೈಕೆಯಲ್ಲಿ ಬದುಕುತಿದ್ದಾನೆ ಎಂದು ಹೇಳಬಹುದು.ಡಾ.ಬಿ.ಆರ್.ಅಂಬೇಡ್ಕರ ರವರು ದೇಶಕ್ಕೆ ಸಂವಿಧಾನವನ್ನು ರಚಿಸಿ, ಮಹಿಳೆಯರಿಗೆ ಸಮಾನ ಹಕ್ಕನ್ನು, ಮತದಾನದ ಹಕ್ಕನ್ನು ತಂದು ಕೊಟ್ಟು ವಿಶ್ವಕ್ಕೆ ಪ್ರಖ್ಯಾತಿ ಪಡೆಯಲು ಮಹಿಳೆಯರ ಪಾತ್ರ ದೊಡ್ಡದು. ಮೊದಲು ಅತ್ತೆಯಾಗಿ ಮೀರಾಬಾಯಿ, ತಾಯಿಯಾಗಿ ಬೀಮಬಾಯಿ, ಹೆಂಡತಿಯಾಗಿ ರಮಾಬಾಯಿ. ಹೀಗೆ ಒಬ್ಬ ಪುರುಷನ ಬೆಳವಣಿಗೆ ಹಿಂದೆ ಒಬ್ಬ ಮಹಿಳೆ ಇದ್ದೆ ಇರುತ್ತಾರೆ.ಒಬ್ಬ ಉತ್ತಮ ವ್ಯಕ್ತಿಯನ್ನಾಗಿ ಮಾಡಲು, ತಾಯಿ, ಹೆಂಡತಿ, ಮಗಳು, ಸೊಸೆಯಾಗಿ ಯಾವುದೋ ಒಂದು ರೂಪದಲ್ಲಿ ಕಾರಣಳಾಗಿರುತ್ತಾರೆ. ಪುರುಷರು ಮಹಿಳೆಯರ ಭಾವನೆಗಳನ್ನು ಅರ್ಥಮಾಡಿಕೊಂಡು ಮಹಿಳೆಗೆ ಸ್ವಾತಂತ್ರ್ಯ ನೀಡಬೇಕು. ಮಹಿಳೆಯರು ತಮ್ಮ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಿ ,ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಎಂದು ರಮಾದೇವಿ ಶಂಭೋಜಿ ಮಹಿಳೆಯರಿಗೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅನ್ನಪೂರ್ಣ ಕಾಂಗ್ರೆಸ್ ಮಹಿಳಾ ಘಟಕ ಅಧ್ಯಕ್ಷರುರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯುವ ಮಹಿಳಾ ಮಣಿಯರಿಂದ ದಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾಲಾರ್ಪಣೆ ಮಾಡಿದರು.

ಕಾರ್ಯಕ್ರಮದ ಸನ್ಮಾನಿತರು : ರಮಾದೇವಿ ಶಂಭೋಜಿ, ಬ್ರಹ್ಮಕುಮಾರಿ, ಮಧುಶ್ರೀ ದೇವಪ್ಪ ಚನ್ನಳ್ಳಿ, ಗೀತಾ ಕುಲಕರ್ಣಿ.

ಈ ಸಂದರ್ಭದಲ್ಲಿ ಸೋಮನಗೌಡ ಬಾದರ್ಲಿ, ಶಿವಕುಮಾರ ಜವಳಿ, ಎಚ್.ಎಂ ಬಡಿಗೇರ, ಶರಣಯ್ಯಸ್ವಾಮಿ, ಸಂಗೀತ ಸಾರಂಗಮಠ, ಖಾಜಾಹುಸೇನ ರೌಡಕುಂದಾ, ಮಲ್ಲಯ್ಯ ಗೋನವಾರ, ಅಮರೇಶ ಗಿರಿಜಾಲಿ, ನಿರುಪಾದಿ ಗೋಮರ್ಸಿ , ಶಂಕರಗೌಡ,ಇಂದುಮತಿ , ಮಹಾನಂದಿ , ಅನ್ನಮ್ಮ, ಅಂಬಮ್ಮ, ಮಲ್ಲಮ್ಮ, ಸಬೀನಾ ಇನ್ನೂ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ಅದ್ದೂರಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend