;

ಗ್ರಾಮೀಣ ಸಂಸ್ಕೃತಿ ಬಿಂಬಿಸಿದ ಹಳ್ಳಿಮನೆ ಸಂಸ್ಕೃತಿ…!!!

ಗ್ರಾಮೀಣ ಸಂಸ್ಕೃತಿ ಬಿಂಬಿಸಿದ ಹಳ್ಳಿಮನೆ

ಸಿಂಧನೂರು : ಇಂದು ನಗರದ ಪಿಡಬ್ಲ್ಯೂಡಿ ಕ್ಯಾಂಪಿನ ಮೌಂಟೇಸರಿ ಪಬ್ಲಿಕ್ ಶಾಲೆಯಲ್ಲಿ ಒಂದನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಂದ “ವಿಶ್ವ ವಿಜ್ಞಾನ ದಿನಾಚರಣೆ” ಅಂಗವಾಗಿ ವಿಜ್ಞಾನಕ್ಕೆ ಸಂಬಂಧಿಸಿದ ಚಟುವಟಿಕೆಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು.

ಕಾಡು ಬೆಳೆಸಿ ನಾಡು ಉಳಿಸಿ ಎಂಬ ಶೀರ್ಷಿಕೆಯಡಿ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅರಣ್ಯ ಸಂಪತ್ತು ನಾಶವಾಗಿದೆ. ಕಾಂಕ್ರೀಟ್ ನಾಡಿಗಾಗಿ ನೈಸರ್ಗಿಕ ಸಂಪತ್ತು ಹಾಳು ಮಾಡಲಾಗುತ್ತಿದೆ,ಕಾಲಕ್ಕೆ ತಕ್ಕಂತೆ ಮಳೆಯಾಗುತ್ತಿಲ್ಲ ಇದರಿಂದ ಭೂಮಿಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ ,ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಈಗಲಾದರೂ ಸಸಿಗಳನ್ನು ನೆಡುವ ಮೂಲಕ ಕಾಡನ್ನು ಬೆಳೆಸಿ ನಾಡನ್ನು ಉಳಿಸಿ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂಬುದು ತೋರಿಸಿಕೊಟ್ಟರು.

ಹಳ್ಳಿಮನೆ : ವಿದ್ಯಾರ್ಥಿಗಳು ಗುಡಿಸಲು ತಯಾರು ಮಾಡಿ ನೋಡುಗರ ಗಮನ ಸೆಳೆದರು.
ಆಧುನಿಕ ಯುಗದಲ್ಲಿಗ್ರಾಮೀಣ ಸೊಗಡಿನ ಜೀವನದ ಶೈಲಿ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಗ್ರಾಮೀಣ ಸಂಸ್ಕೃತಿಯನ್ನು ಒಂದೆಡೆ ಕಣ್ಮುಂದೆ ತರುವ ವೇಷ ಭೂಷಣದೊಂದಿಗೆ, ಬಿಸುವಕಲ್ಲು, ಚಟ್ನಿ ರುಬ್ಬುವ ಕಲ್ಲು, ಮರದಲ್ಲಿ ಅಕ್ಕಿ ಅಸನುಮಾಡುವುದು ವಿದ್ಯಾರ್ಥಿಗಳು ಗಮನ ಸೆಳೆದರು. ವಿದ್ಯಾರ್ಥಿಗಳಿಂದ ಭಾರತೀಯ ಸಂಸ್ಕೃತಿಯ ಬಹುತ್ವದ ಹೆಜ್ಜೆ ಗುರುತು ಅನಾವರಣ ಮಾಡುವಂತಹ ವೈವಿಧ್ಯಮಯ ಉಡುಗೆ- ತೊಡುಗೆಗಳ ಹಳ್ಳಿಮನೆ ಕಾರ್ಯಕ್ರಮದಲ್ಲಿ ಗ್ರಾಮೀಣ ಬದುಕು, ಸಂಸ್ಕೃತಿ, ಆಚಾರ ವಿಚಾರ, ಉಡುಗೆ ತೊಡುಗೆಗಳ ಝಲಕ್‌ ಒಂದೆಡೆ ಸೃಷ್ಟಿಸಿದ್ದು ನೊಡುಗರಿಗೆ ಜಾತ್ರೆಯ ವಾತಾವರಣವೇ ನಿರ್ಮಾಣವಾಗಿತ್ತು.ಭಾರತೀಯ ಸಾಂಪ್ರದಾಯಿಕ ಉಡುಗೆ ತೊಡುಗೆಗಳಾದ ಪಂಚೆ, ಶರ್ಟ್‌, ಶಾಲು, ಹಾಗೂ ಯುವತಿಯರು ಬಣ್ಣ-ಬಣ್ಣದ ರೇಷ್ಮೆ ಸೀರೆ ತೊಟ್ಟಿದ್ದರು. ಶಾಲೆಯ ವಿದ್ಯಾರ್ಥಿಗಳು ಆಸಕ್ತಿಯಿಂದ ಅವುಗಳ ಮಾಹಿತಿಯನ್ನು ಮತ್ತು ಪ್ರಾಮುಖ್ಯತೆಯನ್ನು ಪೋಷಕರಿಗೆ ತಿಳಿಸಿದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;