ದಲಿತ ಸೇನೆ,ಕರ್ನಾಟಕ ಸರ್ವ ಸಂಪಾದಕರ ಹಾಗೂ ಪತ್ರಕರ್ತರ ಸಂಘ ವತಿಯಿಂದ ಏ.29 ರಂದು ಉಚಿತ ಸಾಮೂಹಿಕ ವಿವಾಹ – ಬಿ. ಪಂಪಾಪತಿ.
ಸಿಂಧನೂರು : ದಲಿತ ಸೇನೆ ಮತ್ತು ಕರ್ನಾಟಕ ಸರ್ವ ಸಂಪಾದಕರ ಹಾಗೂ ಪತ್ರಕರ್ತರ ಸಂಘದ ವತಿಯಿಂದ ಮಹಾನ್ ವ್ಯಕ್ತಿಗಳ ಜನ್ಮದಿನದ ಅಂಗವಾಗಿ ಏಪ್ರಿಲ್ 29 ರಂದು 51 ಜೋಡಿ ಉಚಿತ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿದ್ದು ,ವಿವಾಹವಾಗುವ ಇಚ್ಛೆಯುಳ್ಳವರು ಹೆಸರುಗಳನ್ನು ನೊಂದಾಯಿಸಬೇಕೆಂದು ಕರ್ನಾಟಕ ಸರ್ವ ಸಂಪಾದಕರ ಹಾಗೂ ಪತ್ರಕರ್ತರ ಸಂಘದ ತಾಲೂಕು ಅದ್ಯಕ್ಷರಾದ ಪಂಪಾಪತಿ.ಬಿ. ಹೂವಿನಬಾವಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ಶಾಂತಿಯ ಪ್ರತೀಕ ಗೌತಮ ಬುದ್ದ ,ಜಗಜ್ಯೋತಿ ಬಸವಣ್ಣ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ,ಶ್ರೀ ಮಹರ್ಷಿ ವಾಲ್ಮೀಕಿ, ಭಕ್ತ ಕನಕದಾಸರು ಹಾಗೂ ರಾಜ ಋಷಿ ಭಗೀರಥ ,ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ಈ ಮಹಾನ್ ವ್ಯಕ್ತಿ ಗಳ ಜನ್ಮ ದಿನಾಚರಣೆ ಅಂಗವಾಗಿ ನಿರಂತರವಾಗಿ ಹತ್ತನೇ ವರ್ಷದ ಸಾಮೂಹಿಕ ವಿವಾಹಗಳನ್ನು ನಡೆಸುತ್ತಿದ್ದು ವಿವಾಹವಾಗಲು ಇಚ್ಛಿಸುವವರು ಏಪ್ರಿಲ್ 15 ರೊಳಗಾಗಿ ತಮ್ಮ ಹೆಸರುಗಳನ್ನು ನೊಂದಾಯಿಸಬೇಕು ಮತ್ತು ಸರ್ಕಾರದ ನಿಯಮಾನುಸಾರ ಬಾಲ್ಯ ವಿವಾಹಕ್ಕೆ ಅವಕಾಶವಿರುವುದಿಲ್ಲ ,ವಧು 18 ವರ್ಷ ಹಾಗೂ ವರ 21 ವರ್ಷ ವಯಸ್ಸು ದಾಟಿರಬೇಕು , ವಧು- ವರರ ಇಬ್ಬರ ಆಧಾರ ಕಾರ್ಡ ಕಡ್ಡಾಯ ,ಇತ್ತೀಚಿನ ಎರಡು ಭಾವಚಿತ್ರ ,ವಯಸ್ಸಿಗೆ ಸಂಬಂಧಿಸಿದಂತೆ ಶಾಲಾ ದೃಢೀಕರಣ ಅಥವಾ ಜಿಲ್ಲಾ ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರ ತರಬೇಕೆಂದು ತಿಳಿಸಿದರು.
ದಲಿತ ಸೇನೆ ಸತತವಾಗಿ ಒಂಬತ್ತು ವರ್ಷಗಳನ್ನು ಪೂರೈಸಿ ಹತ್ತನೇ ವರ್ಷದಲ್ಲಿ ಉಚಿತ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಂಡಿದ್ದು ವಿವಾಹ ವಾಗಲು ಇಚ್ಛಿಸುವವರು ತಮ್ಮ ಹೆಸರುಗಳನ್ನು ನೊಂದಾಯಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವದು ವರರಿಗೆ ಸರ್ಕಾರದಿಂದ ಐವತ್ತು ಸಾವಿರ ಪ್ರೋತ್ಸಾಹ ಧನವನ್ನು ಮಂಜೂರು ಮಾಡಿಸಿಕೊಡಲಾಗುವುದೆಂದು ಸಾರ್ವಜನಿಕರಲ್ಲಿ ದಲಿತ ಸೇನೆ ಜಿಲ್ಲಾದ್ಯಕ್ಷರು ಹಾಗೂ ಪ್ರಜಾಸೇನೆ ದಿನ ಪತ್ರಿಕೆ ಸಂಪಾದಕರು ಮತ್ತು ಕರ್ನಾಟಕ ಸರ್ವ ಸಂಪಾದಕರ ಹಾಗೂ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ ಬೊಮ್ಮನಾಳ ಮನವಿ ಮಾಡಿಕೊಂಡರು.
ಈ ಸಂಧರ್ಭದಲ್ಲಿ ಹನುಮಂತಪ್ಪ ಗೋಡಿಹಾಳ, ವಿರೇಶ ಹೊಸಳ್ಳಿ, ಬಿ.ಎ ಹಿರೇಮಠ, ವೆಂಕೋಬ ನಾಯಕ ,ಲಕ್ಷ್ಮಣ ಕುರುಕುಂದಾ ದುಗ್ಗಪ್ಪ ಮಲ್ಲಾಪುರ, ಪರಶುರಾಮ, ವಿರೇಶ ವಿರುಪಾಪುರ ,ಸುರಂಜನ್ ಕುಮಾರ ಬೈರಾಗಿ ಕಂಪ್ಯೂಟರ್ಸ್ ,ವಿರೇಶ ಚಿತ್ರಾಲಿ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
