;

ದಾವಣಗೆರೆ ಜಿಲ್ಲೆಯ ಸರ್ಕಾರಿ ನೌಕರರ ಭವನದಲ್ಲಿ ಮಹಿಳಾ ದಿನಾಚರಣೆ ಜರುಗಿತ್ತು…!!!

ದಾವಣಗೆರೆ ಜಿಲ್ಲೆಯ ಸರ್ಕಾರಿ ನೌಕರರ ಭವನದಲ್ಲಿ ಮಹಿಳಾ ದಿನಾಚರಣೆ ಜರುಗಿತ್ತು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಜಿಲ್ಲಾ ಅಭಿಯಾನ ಘಟಕ ಜಿಲ್ಲಾ ಪಂಚಾಯತ್ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಶ್ರೀ ಮಹಾಂತೇಶ ಬೀಳಗಿ ಬಾ ಅ ಸೆ ಮಾನ್ಯ ಜಿಲ್ಲಾಧಿಕಾರಿಗಳು ದಾವಣಗೆರೆ ಇವರು
ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಸಂಜೀವಿನಿ ಯೋಜನೆಯಲ್ಲಿ ಪ್ರತಿ ತಾಲ್ಲೂಕಿನಿಂದ ಒಬ್ಬರಂತೆ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಮುಖ್ಯ ಪುಸ್ತಕ ಬರಹಗಾರರು ರಮ್ಯಾ ಶ್ರೀ ಲೀಲಾವತಿ , ನೇತ್ರಾವತಿ ,ಮಂಜುಳಾ ಕೆ , ಜ್ಯೋತಿ ,ಸವಿತಾ, ಹಾಗೆ ಸ್ಥಳಿಯ ಸಂಪನ್ಮೂಲ ವ್ಯಕ್ತಿಗಳಾದ ನಾಗಮ್ಮ ,ಸುಲೋಚನಮ್ಮ ಎಂ, ಮಂಗಳ ,ಚಂದ್ರಕಲಾ ,ಮತ್ತು ಡಿಜಿ ಪೆ ಸಖಿಯರಾದ ಅಮೃತ ಪಾಟೀಲ್. ನೇತ್ರಾವತಿ ಬಿ ,ಶಿಲ್ಪ ಕೆ . ಶೈಲಜಾ, ರಂಜಿತಾ, ಸ್ವಾತಿ, ಆತ್ಮನಿರ್ಭಾರ್ ಸಂಘಟನಾ ಪುರಸ್ಕಾರಕ್ಕೆ ದಾವಣಗೆರೆ ಜಿಲ್ಲೆಯಿಂದ ಆಯ್ಕೆಯಾದ ಹರಿಹರ ತಾಲೂಕಿನ ನವಚೇತನ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ ಕಾರ್ಯಕಾರಿ ಸಮಿತಿಯ ಸದಸ್ಯರುಗಳಿಗೆ ಒಕ್ಕೂಟದ ಪರವಾಗಿ ಜಿಲ್ಲಾ ಅಭಿಯಾನ ಘಟಕ ಜಿಲ್ಲಾ ಪಂಚಾಯಿತಿ ದಾವಣಗೆರೆ .ಪ್ರಶಸ್ತಿ ನೀಡಲಾಯಿತು ಶ್ರೀ ಮಹಾಂತೇಶ್ ಬಾ ಆ ಸೆ ಮಾನ್ಯ ಜಿಲ್ಲಾಧಿಕಾರಿಗಳು ದಾವಣಗೆರೆ ಮತ್ತು ಶ್ರೀ ಸಿ ಟಿ ರಿಷ್ಯಂತ್ ಬಾ ಪೋ ಸೆ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು.ಹಾಗು ಸಂಜೀವಿನಿ ಯೋಜನಾ ನಿರ್ದೇಶಕರು ಜಗದಿಶ್ .ಎಸ್ .ಬೋಜರಾಜ್ ಎನ್.ಎಮ್.ಇವರ ನೆತೃತ್ವದಲ್ಲಿ ಪ್ರಶಸ್ತಿ ಪುರಸ್ಕಾರ ನೀಡಿ ಸನ್ಮಾನಿಸಿದರು
ತಾಲೂಕ ಸಂಯೋಜಕರು ಮತ್ತುಎಲ್ಲಾ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಹಾಗು ಸಂಜೀವಿನಿ ಒಕ್ಕೂಟದ ಸ್ವ ಸಹಾಯ ಸಂಘದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು..

ವರದಿ. ರೇಖಾ, ಆರ್, ಲಿಂಗಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;