;

ಕಾನಹೊಸಹಳ್ಳಿ ವಿದ್ಯಾನಿಕೇತನ ಶಾಲೆಯಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಸನ್ಮಾನ ಸಮಾರಂಭದ, ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಕಾನಹೊಸಹಳ್ಳಿ
ವಿದ್ಯಾನಿಕೇತನ ಶಾಲೆಯಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಪಟ್ಟಣದ ಆಶಾ ಕಾರ್ಯಕರ್ತೆಯರಿಗೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಸನ್ಮಾನ ಸಮಾರಂಭದ, ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಇದೇ ಸಂದರ್ಭದಲ್ಲಿ ಶರಣೇಶ್ವರ ವಿದ್ಯಾ ಸಂಸ್ಥೆ ಯ ಅದ್ಯಕ್ಷ ಕೆ,ಎಂ, ಶಶಿಧರ್ ಮಾತನಾಡಿ ಕೊರೋನ ಸಂಕಷ್ಟದ ಕಾಲದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಹಗಲಿರುಳೆನ್ನದೆ ಮನೆ ಮನೆಗೆ ತೆರಳಿ ಆರೋಗ್ಯ ಸೇವೆ ಕೊಟ್ಟವರೆಂದರೆ ಅದು ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯವರು ಇಂತವರಿಗೆ ಇಂದು ಅದರಲ್ಲೂ ವಿಶ್ವ ಮಹಿಳಾ ದಿನಾಚರಣೆ ಯಂದು ಸನ್ಮಾನ ಮಾಡಿ ಅಭಿನಂದಿಸುವ ಭಾಗ್ಯ ನಮಗೆ ಸಿಕ್ಕಿದೆ ಎಂದರು.ಇದೇ ಸಂದರ್ಭದಲ್ಲಿ ಹುಲಿಕೆರೆ ಯ ರೈತ ಮಹಿಳೆ ಸುಲೋಚನ ಸಜ್ಜನ್ ಕಾರ್ಯಕ್ರಮ ವನ್ನು ಉದ್ಗಾಟಿಸಿ ನಂತರ ಮಾತನಾಡಿ ಇಂದು ಯಾವ ಮಕ್ಕಳನ್ನು ನೀವು ಏನು ಆಗಬೇಕು ಅಂತ ಅಂದುಕೊಂಡಿರಿ ಅಂದರೆ ಸಾಕಷ್ಟು ವಿದ್ಯಾರ್ಥಿಗಳು ನಾನು ಡಾಕ್ಟರ್, ಇಂಜಿನಿಯರ್ ಆಗಬೇಕು ಅಂತ ಮುಂದೆ ಬರುತ್ತಿರುವ ಕಾಲದಲ್ಲಿ ನಾನು ರೈತ ಆಗಬೇಕು ಕೃಷಿ ಮಾಡಬೇಕು ಎನ್ನುವ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿರುವುದು ವಿಷಾದಕರ ಸಂಗತಿ ಎಂದರು ಇದೇ ಸಂದರ್ಭದಲ್ಲಿ ಮುಖ್ಯ ಅಥಿತಿಯಾಗಿ ಮಾಜಿ ಗ್ರಾಪಂ ಸದಸ್ಯೆ ಭಾರತಿ ಆರೋಗ್ಯ ಇಲಾಖೆಯ ಸುಪ್ರಿಯಾ, ಸವಿತಾ, ಹಾಗೂ ಆಶಾ ಕಾರ್ತಕರ್ತೆಯರಾದ ಮಂಜುಳ, ಚನ್ನಮ್ಮ, ಮಂಗಳ, ಸೀಮ, ಶಶಿಕಲಾ, ಕವಿತ, ಅನ್ನಪೂರ್ಣ,ಪುಷ್ಪವತಿ, ಇವರುಗಳಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಶುಂಪಾಲರಾದ ಸುದರ್ಶನ, ಹಾಗೂ ಉಪನ್ಯಾಸಕಿ ಹುಲಿಕೆರೆ ಸುಜಾತ, ಗಿರೀಶ್, ರಾಜನಾಯ್ಕ,ದಂಡೆಪ್ಪ, ಹಾಗೂ ಶಿಕ್ಷಕರಾದ, ಶಬರೀನ್,ಷಹನಾಜ್,ಸಜೀದ,ನೇತ್ರಾವತಿ, ಶಗುಪ್ತ, ಮಂಜುಳ,ಮಮತ,ಉಮಾ,ಆಶ,ಸುಷ್ಮಾ,ಶಿಲ್ಪ, ಅಜೀಜ್, ಮಂಜುನಾಥ,ತಿಪ್ಪೇಸ್ವಾಮಿ, ವಿಜಯಕುಮಾರ್ ಸೇರಿದಂತೆ ಇತರರಿದ್ದರು, ಮಕ್ಕಳೇ ಸ್ವಾಗತಿಸಿ,ನಿರೂಪಿಸಿ ಕಾರ್ಯಕ್ರಮ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;