;

ಹೆಣ್ಣಿನ ಜೀವನವೇ ಒಂದು ವಿಚಿತ್ರ ಒಂದು ಮನೆಯಲ್ಲಿ ಜನನ, ಇನ್ನೊಂದು ಮನೆಯಲ್ಲಿ ಜೀವನ – ಪಿಎಸ್ಐ ಸೌಮ್ಯ ಹಿರೇಮಠ…!!!

ಹೆಣ್ಣಿನ ಜೀವನವೇ ಒಂದು ವಿಚಿತ್ರ ಒಂದು ಮನೆಯಲ್ಲಿ ಜನನ, ಇನ್ನೊಂದು ಮನೆಯಲ್ಲಿ ಜೀವನ – ಪಿಎಸ್ಐ ಸೌಮ್ಯ ಹಿರೇಮಠ.

ಸಿಂಧನೂರು : ಹೆಣ್ಣಿನ ಜೀವನವೇ ಒಂದು ವಿಚಿತ್ರ ಒಂದು ಮನೆಯಲ್ಲಿ ಜನನ ಇನ್ನೊಂದು ಮನೆಯಲ್ಲಿ ಜೀವನ ಎನ್ನುವ ಚರಿತ್ರೆಯನ್ನು ಹೆಣ್ಣು ಕುಲ ಹೊಂದಿದೆ ಎಂದು ಕಾರುಣ್ಯ ನೆಲೆ ವೃದ್ಧಾಶ್ರಮದಲ್ಲಿ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಪಿಎಸ್ಐ ಸೌಮ್ಯ ಹಿರೇಮಠ ಮಾತನಾಡಿದರು.

ಆದರೆ ಕೆಲವೊಂದು ವಿಚಾರಗಳಲ್ಲಿ ಹೆಣ್ಣಿನಿಂದಲೂ ಸಹಿತ ಕೆಲವೊಂದು ತಪ್ಪುಗಳು ನಡೆದು ಹೋಗುತ್ತವೆ ಆದರೆ ಸಮಾಜ ನಮ್ಮನ್ನು ತಾಯಿ, ಅಕ್ಕ,ತಂಗಿಯಾಗಿ ಗುರುತಿಸುವ ಮೂಲಕ ಹೆಣ್ಣನ್ನು ವಿಶಿಷ್ಟವಾಗಿ ಪೂಜಿಸುತ್ತದೆ. ಇಂದು ಕಾರುಣ್ಯ ಆಶ್ರಮದಲ್ಲಿ ಸುಮಾರು ಜನ ಹಿರಿಯ ತಾಯಂದಿರು ಆಶ್ರಯ ಪಡೆದಿದ್ದಾರೆ ಅವರ ಸೇವೆ ಮಾಡುತ್ತಿರುವ ಚನ್ನಬಸಯ್ಯ ಸ್ವಾಮಿಯವರ ಕಾರ್ಯ ಶ್ಲಾಘನೀಯ ಇಂತಹ ಕಾರುಣ್ಯ ಆಶ್ರಮದ ಸೇವೆಗೆ ಮಹಿಳೆಯರು ಸದಾ ಸಿದ್ಧರಿರಬೇಕು ಎಂದರು.

ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ನಂತರ ಮಾತನಾಡಿದ ಖ್ಯಾತ ಸ್ತ್ರೀರೋಗ ತಜ್ಞರಾದ ಡಾ. ಅಭಿನೇತ್ರಿ ಪಾಟೀಲ್ ಸಮಾಜದಲ್ಲಿನ ಮಹಿಳೆಯರ ಪಾತ್ರ ಉನ್ನತವಾದದ್ದು ಇಂದು ಅದೇ ರೀತಿ ಪುರುಷರು ಕೂಡ ನಮ್ಮ ಬೆಳವಣಿಗೆಗೆ ಕಾರಣರಾಗುತ್ತಾರೆ. ಸಮಾನತೆಯ ಹಕ್ಕನ್ನು ಹೊಂದಿರುವ ಮಹಿಳೆಯರು ಕೂಡ ಸಮಾಜಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಇನ್ಫೋಸಿಸ್ ಸುಧಾಮೂರ್ತಿ ರವರ ಮಾರ್ಗದರ್ಶನ ಅವರ ಸಮಾಜ ಸೇವೆ, ಆದರ್ಶವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಇಂದು ನಾನು ಕಾರುಣ್ಯ ಆಶ್ರಮಕ್ಕೆ ಈ ಕಾರ್ಯಕ್ರಮಕ್ಕೆ ಆಗಮಿಸಿದಾಗ ಇಲ್ಲಿನ ಹಿರಿಯ ಜೀವಿಗಳ ಸೇವೆ ಮಾಡುತ್ತಿರುವ ಎಲ್ಲಾ ಸಿಬ್ಬಂದಿಗಳು ಪುಣ್ಯವಂತರು ಇಂತಹ ಸೇವೆಗೆ ನಮಗೂ ಅವಕಾಶ ಕಲ್ಪಿಸಿಕೊಟ್ಟಿರುವ ಶ್ರೀಮಠ ಸೇವಾ ಟ್ರಸ್ಟ್ ನ ಎಲ್ಲಾ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುತ್ತೇನೆ ಎಂದು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಕಾರುಣ್ಯ ಆಶ್ರಮದ ಗೌರವಾಧ್ಯಕ್ಷರಾದ ಶರಣು. ಪಾ.ಹಿರೇಮಠ, ಕಾರ್ಯಾಧ್ಯಕ್ಷರಾದ ವೀರೇಶ ಯಡಿಯೂರು ಮಠ, ಡಾ.ಶೃತಿ ಶ್ರೀನಿವಾಸ ವೈದ್ಯರು ತಾಲೂಕು ಸಾರ್ವಜನಿಕ ಆಸ್ಪತ್ರೆ, ಅನುಪಮಾ ಮುಖ್ಯೋಪಾಧ್ಯಾಯರು ಸ. ಪ್ರೌ. ಶಾಲೆ ಸುಕಾಲಪೇಟೆ, ಡಾ.ಮಾಳಪ್ಪ ಬರಸಿ ವೀರಗಂಗಾಧರ ಆಸ್ಪತ್ರೆ, ಡಾ. ನವೀನ್ ದಂತವೈದ್ಯರು ಹಾಗೂ ಅಧ್ಯಕ್ಷರು ಜೀವ ಸ್ಪಂದನ ಚಾರಿಟೇಬಲ್ ಟ್ರಸ್ಟ್, ಸಂತೋಷ್ ಅಂಗಡಿ ಅಧ್ಯಕ್ಷರು ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್, ಅಶೋಕ ನಲ್ಲ ಕಾರ್ಯದರ್ಶಿಗಳು ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್, ಚನ್ನ ವೀರನಗೌಡ ಸದಸ್ಯರು ಜೀವ ಸ್ಪಂದನ ಚಾರಿಟೇಬಲ್ ಟ್ರಸ್ಟ್ ,ಗೀತಾ ಶ್ರೀನಿವಾಸ, ಕಾರುಣ್ಯ ಆಶ್ರಮದ ಸಿಬ್ಬಂದಿಗಳಾದ ಚನ್ನಬಸವಸ್ವಾಮಿ, ಸುಜಾತ ಹಿರೇಮಠ, ಗೀತಾ ಕುಲಕರ್ಣಿ ಮಲ್ಲಮ್ಮ,ಸಂಗನಗೌಡ,ಇನ್ನೂ ಅನೇಕರು ಉಪಸ್ಥಿತರಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;