;

ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಒಕ್ಕೂಟ ವತಿಯಿಂದ ಮಹಿಳಾ ದಿನಾಚರಣೆ ಆಚರಣೆ…!!!

ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಒಕ್ಕೂಟ ವತಿಯಿಂದ ಮಹಿಳಾ ದಿನಾಚರಣೆ ಆಚರಣೆ.

ಸಿಂಧನೂರು: ಇಂದು ತಾಲೂಕಿನ 30 ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಒಕ್ಕೂಟಗಳಲ್ಲಿ ಈ ತಿಂಗಳಲ್ಲಿ ಹಂತ ಹಂತವಾಗಿ ಮಹಿಳಾ ದಿನಾಚರಣೆಯನ್ನು ವಿಭಿನ್ನ ಹಾಗೂ ವಿಶೇಷವಾಗಿ ಆಚರಿಸಲಾಗುವುದು ಎಂದು ವೀರಭದ್ರಗೌಡ ಗಚ್ಚಿನಮನಿ ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕರು (NRLM) ತಿಳಿಸಿದರು.

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಕೌಶಲ್ಯ ಅಭಿವೃದ್ಧಿ ಉದ್ಯಮ ಶೀಲತೆ ಜೀವನೋಪಾಯ ಇಲಾಖೆ ತಾಲೂಕು ಪಂಚಾಯತ್ ಸಿಂಧನೂರು, ಜಿಲ್ಲಾ ಪಂಚಾಯತ್ ರಾಯಚೂರು ವತಿಯಿಂದ ಹೊಸಬೆಳಕು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ) ಕಲಮಂಗಿ, ಪಗಡದಿನ್ನಿ ರಾಮತ್ನಾಳ ಪಂಚಾಯತ್ ಮಟ್ಟದ ಒಕ್ಕೂಟಗಳಲ್ಲಿ ಇಂದು ಮಹಿಳಾ ದಿನಾಚರಣೆ ಆಚರಣೆಗೆ ಚಾಲನೆ ನೀಡಲಾಯಿತು.

ಮಹಿಳೆಯರು ಶಕ್ತಿಯುತ, ಪ್ರತಿದಿನ ಮಹಿಳೆಯರ ಅಸ್ತಿತ್ವವನ್ನು ಪ್ರೋತ್ಸಾಹಿಸುವ ಸಾವಿರಾರು ವಿವಿಧ ಚಟುವಟಿಕೆಗಳು ನಡೆಯುತ್ತವೆ ಜೀವನದ ಎಲ್ಲಾ ಅಂಶಗಳಲ್ಲಿ ಮಹಿಳೆಯರ ಸಾಧನೆಗಳನ್ನು ಆಚರಿಸಲು ವಿಶೇಷ ದಿನವು ನಿಜವಾಗಿಯೂ ಅವಶ್ಯಕವಾಗಿದೆ. ಅವರು ಮಹಿಳಾ ಗುಂಪಿನ ಸದಸ್ಯೆರ, ಶಿಕ್ಷಕಿ ,ಗೃಹಿಣಿ, ಅರ್ಥಶಾಸ್ತ್ರಜ್ಞ, ಇಂಜಿನಿಯರ್ ಅಥವಾ ಪ್ರವರ್ತಕರಾಗಿರಲಿ, ಮಹಿಳೆಯರು ತಮ್ಮ ಅಪರಿಮಿತ ಶಕ್ತಿ, ನಿರ್ಣಯ ಮತ್ತು ನಂಬಿಕೆಯಿಂದ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುತ್ತಿದ್ದಾರೆ. ಪಿತೃಪ್ರಭುತ್ವದ ಸಂಕೋಲೆಗಳನ್ನು ಛಿದ್ರಗೊಳಿಸುವಷ್ಟು ಶಕ್ತಿಯೊಂದಿಗೆ, ಮಹಿಳೆಯರು ಪ್ರತಿದಿನ ಸಾಮಾಜಿಕ ಅಡೆತಡೆಗಳನ್ನು ಮೀರಿ ಬೆಳೆಯುತ್ತಿದ್ದಾರೆ. ಈ ಅಂತರಾಷ್ಟ್ರೀಯ ಮಹಿಳಾ ದಿನದಂದು, ನಾವು ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಆಚರಿಸುತ್ತೇವೆ ಹಾಗೂ ವಿವಿಧ ಚಟುವಟಿಕೆಗಳನ್ನು ಆಡಿಸುವ ಮೂಲಕ ಅವರಿಗೆ ಸಂವಹನ ಕೌಶಲ್ಯ ಸಮಸ್ಯೆ ಪರಿಹಾರ ತಂಡ ಕಟ್ಟುವುದು ಸ್ವನಿರ್ವಹಣೆ ಬಗ್ಗೆ ಚಟುವಟಿಕೆಯ ಮೂಲಕ ತಿಳಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದರು….

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;