;

ಉಕ್ರೇನ್ ದಿಂದ ಸುರಕ್ಷಿತವಾಗಿ ಮನೆಗೆ ವಾಪಸ್ಸಾದ ಮದಬಾವಿ ವಿದ್ಯಾರ್ಥಿ…!!!

ಉಕ್ರೇನ್ ದಿಂದ ಸುರಕ್ಷಿತವಾಗಿ ಮನೆಗೆ ವಾಪಸ್ಸಾದ ಮದಬಾವಿ ವಿದ್ಯಾರ್ಥಿ.

ಪ್ರಜ್ವಲ್ ಕುಮಾರ್ ಮಾನಿಂಗಪ್ಪ ತಿಮ್ಮಾಪುರ ವಿದೇಶಕ್ಕೆ MBBS ವಿದ್ಯಾಭ್ಯಾಸವನ್ನು ಮಾಡಲು ಹೋದ ವಿಧ್ಯಾರ್ಥಿ.
MBBS ಫೈನಲ್ ಇಯರ್ ಇನ್ನೇನು ವಿದ್ಯಾಭ್ಯಾಸ ಮುಗಿಯಲು ಬಂತು ಎನ್ನುವ ಸಂದರ್ಭದಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ದ ಶುರುವಾಗಿ ಭಾರತಕ್ಕೆ ಹಿಂದಿರುಗದೇ ಒದ್ದಾಡುವ ಪರಿಸ್ಥಿತಿ ಉಂಟಾಗಿತ್ತು. ಎಲ್ಲಾ ಸ್ವದೇಶಿ ನಾಗರೀಕರು ಒಂದೆಡೆ ಸೇರಿದಾಗ ಪ್ರಜ್ವಲ್ ಕುಮಾರ್ ಸೇರಿದಂತೆ ಇನ್ನೂ ಕರ್ನಾಟಕದ ಹಲವು ವಿದ್ಯಾರ್ಥಿಗಳು ಅವರ ಜೊತೆ ಇದ್ದರು. ಭಾರತೀಯ ನಾಗರಿಕರು ಮತ್ತು ಕರ್ನಾಟಕದ ವಿಧ್ಯಾರ್ಥಿಗಳೊಂದಿಗೆ ಸ್ಥಳೀಯ ರಬಕವಿ-ಬನಹಟ್ಟಿ ತಾಲ್ಲೂಕಿನ ಗ್ರಾಮ ಮತ್ತು ಪಟ್ಟಣಗಳ ವಿಧ್ಯಾರ್ಥಿಗಳು ಕೂಡಾ ಯುದ್ಧದಲ್ಲಿ ಸಿಲುಕಿದ್ದಾರೆ ಎಂದು ತಿಳಿದು ತಮ್ಮ ಕ್ಷೇತ್ರದ ಶಾಸಕರಾದ ಸಿದ್ದು ಸವದಿ ಹಾಗೂ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಫೋನ್ ಕರೆಯ ಮೂಲಕ ಸುದ್ದಿ ತಿಳಿಸಲಾಗಿತ್ತು. ಸುದ್ದಿ ತಿಳಿದ ಶಾಸಕರು ಮತ್ತು ಉಳಿದ ಅಧಿಕಾರಿಗಳು ತಮ್ಮ ಪ್ರಜೆಗಳನ್ನು ಸುರಕ್ಷಿತವಾಗಿ ಅವರವರ ಕುಟುಂಬದೊಂದಿಗೆ ಸೇರಲು ಅವಕಾಶ ಮಾಡಿಕೊಟ್ಟರು. 28 ಫೆಬ್ರುವರಿ 2022 ರಂದು ಉಕ್ರೇನ್ ಇಂದ ತೆರಳಿದ ವಿಧ್ಯಾರ್ಥಿ ನೆನ್ನೆಯ ದಿನ ಸುರಕ್ಷಿತವಾಗಿ ಮನೆಗೆ ವಾಪಸ್ಸಾದರು. ಸ್ಥಳಿಯರು ವಿಧ್ಯಾರ್ಥಿಯನ್ನು ಆತ್ಮೀಯವಾಗಿ ಬರಮಾಡಿಕೊಂಡರು ಮತ್ತು ಕೆಎಸ್ಆರ್ಟಿಸಿ ಸಂಸ್ಥೆಯವರು ಕೂಡ ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದರು..

ವರದಿ.ಬಸವರಾಜ ನಂದೆಪ್ಪನವರ
ಮದಬಾವಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;