;

ಎಂ.ಗೋನಾಳ್‍ದಲ್ಲಿ ಇಂದ್ರಧನುಷ್ ಲಸಿಕೆ ಅಭಿಯಾನಕ್ಕೆ ಚಾಲನೆ…!!!

ಎಂ.ಗೋನಾಳ್‍ದಲ್ಲಿ ಇಂದ್ರಧನುಷ್ ಲಸಿಕೆ ಅಭಿಯಾನ 4.0ಗೆ ಚಾಲನೆ
ಮಾರಕ ರೋಗಗಳ ವಿರುದ್ಧ ಮಕ್ಕಳಿಗೆ ಕಾಲಕಾಲಕ್ಕೆ ನೀಡುವ ಲಸಿಕೆ ತಪ್ಪದೇ ಕೊಡಿಸಿ:ಡಿಎಚ್‍ಒ ಡಾ.ಜನಾರ್ಧನ್
ಬಳ್ಳಾರಿ: ಬಾಲ್ಯಾವಧಿಯಲ್ಲಿ ಕಂಡುಬರುವ ಮಾರಕ ರೋಗಗಳ ವಿರುದ್ದ ಮಕ್ಕಳಿಗೆ ಕಾಲಕಾಲಕ್ಕೆ ನೀಡುವ ಲಸಿಕೆಗಳನ್ನು ತಪ್ಪದೇ ಕೊಡಿಸುವ ಮೂಲಕ ಮಕ್ಕಳ ಬಾಲ್ಯವನ್ನು ಸುಂದರವಾಗಿಸಲು ಪಾಲಕರು ಕೈಜೊಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಹೆಚ್.ಎಲ್ ಜನಾರ್ಧನ ಹೇಳಿದರು.
ಜಿಲ್ಲಾಡಳಿತ,ಜಿಲ್ಲಾ ಪಂಚಾಯತ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಎಂ.ಗೋನಾಳ ಗ್ರಾಪಂ ಸಂಯುಕ್ತ ಆಶ್ರಯದಲ್ಲಿ ಬಳ್ಳಾರಿ ತಾಲೂಕಿನ ಎಂ. ಗೋನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಇಂದ್ರಧನುμï ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 9807 ಮಕ್ಕಳಿಗೆ ಹಾಗೂ 2485 ಗರ್ಭಿಣಿ ಮಹಿಳೆಯರಿಗೆ ಒಟ್ಟು 706 ಲಸಿಕಾ ಅಧಿವೇಶನಗಳ ಮೂಲಕ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಮಾ.13ರವರೆಗೆ ಲಸಿಕೆ ಹಾಕಲಾಗುತ್ತಿದ್ದು,ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.


ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಆರ್.ಅನಿಲ್ ಕುಮಾರ್ ಅವರು ಮಾತನಾಡಿ, ಗರ್ಭಿಣಿಯರಿಗೆ ಟಿಡಿ ಲಸಿಕೆ, 2ವರ್ಷದೊಳಗಿನ ಮಕ್ಕಳಿಗೆ ಬಿ.ಸಿ.ಜಿ, ಪೋಲಿಯೋ, ದಡಾರ ರುಬೆಲ್ಲಾ, ಜೆ.ಇ.ಲಸಿಕೆ ಹಾಗೂ ಡಿಪಿಟಿ, ಹೈಪಟೀಟಿಸ್ ಬಿ, ಇನ್‍ಪ್ಲೂಯೆಂಜ್-ಬಿ ಸೇರಿರುವ ಪೆಂಟಾವೆಲೆಂಟ್ ರೋಟಾ ವೈರಸ್, ನ್ಯುಮೋಕೊಕಲ್ ಲಸಿಕೆ ಹಾಗೂ ವಿಟಮಿನ್ ಎ ಅನ್ನಾಂಗ ದ್ರಾವಣ, 5 ರಿಂದ 6ವರ್ಷದೊಳಗಿನ ಮಕ್ಕಳಿಗೆ ಡಿಪಿಟಿ ಬೂಸ್ಟರ್ ಲಸಿಕೆಗಳನ್ನು ನೀಡಲಾಗುವುದು. ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಆಧ್ಯಕರಾದ ಗೋಂವಿಂದಮ್ಮ, ಉಪಾಧ್ಯಕ್ಷರಾದ ಸರೋಜಮ್ಮ, ಎಸ್.ಎಮ್.ಒ ಡಾ.ಅರ್.ಎಸ್ ಶ್ರೀಧರ್, ತಾಲೂಕಾ ಆರೋಗ್ಯ ಅಧಿಕಾರಿ ಡಾ.ಮೋಹನಕುಮಾರಿ, ವೈಧ್ಯಾಧಿಕಾರಿಗಳಾದ ಡಾ.ತರುಣ, ಡಾ.ಸಂತೋಷ, ಪಂಚಾಯತ ಸದಸ್ಯರಾದ ಲತಾ, ಪಾರ್ವತಿ, ಮಂಜುನಾಥ, ವೀರಭದ್ರಗೌಡ, ನಾಗರಾಜ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಎಸ್.ಬಿ.ಸಿ.ಸಿ ವಿಭಾಗೀಯ ಸಂಯೋಜಕರಾದ ಮಂಜುನಾಥ್ ಬೆಸ್ತರ, ಡಿಎನ್‍ಓ ಗಿರೀಶ ಸೇರಿದಂತೆ ಸಿಬ್ಬಂದಿಯವರಾದ ಶೇಖ್ ಮಹ್ಮದ್, ನಾಗರಾಜ, ಮುತ್ಯಾಲಮ್ಮ, ಭಾರತಿ, ಅಂಬುಜಾ, ಅನೀತಾ, ಸರೋಜ, ವೀಣಾ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ತಾಯಂದಿರು ಹಾಜರಿದ್ದರು..

 

ವರದಿ. ವಿರೇಶ್ ಹಳೇಕೋಟೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;