ವಿಜಯನಗರ ಜಿಲ್ಲೆ ಕೂಡ್ಲಿಗಿ.
ಕರ್ನಾಟಕ ರಾಜ್ಯ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಕ್ಯಾಲೆಂಡರ್ ಬಿಡುಗಡೆ ಸಮಾರಂಭ.
ಪಟ್ಟಣದ ಪ್ರವಾಸಿ ಮಂದಿರದಲ್ಲಿಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ ವಿಜಯನಗರ ಜಿಲ್ಲಾ ಘಟಕದಿಂದದಿಂದ ಕೂಡ್ಲಿಗಿ ತಾಲೂಕು ಮುಸ್ಲಿಂ ನೌಕರರ ಸಹಕಾರ ದೊಂದಿಗೆ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಕಾನಮಡುಗು ದಾಸೋಹ ಮಠದ ಶ್ರೀ ಐ ಮುಡಿ ಶರಣಾರ್ಯರು ಕ್ಯಾಲೆಂಡರ್ ಬಿಡುಗಡೆ ಮಾಡಿ ಉದ್ಘಾಟನೆ ಮಾಡಿದರು.
ಈ ಕಾರ್ಯಕ್ರಮ ಕುರಿತು ವಾಸ್ತವಿಕವಾಗಿ ಮುಸ್ಲಿಂ ನೌಕರರ ಸಂಘದ ಕಾನೂನು ಸಲಹೆಗಾರ ರಾದಶ್ರೀ, ಎಲ್. ಬಶೀರ್ ಅಹಮ್ಮದ್, ರವರು ಮಾತನಾಡಿ ಬಡ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಶಿಕ್ಷಣ ದ ವಿವಿಧ ಸೌಲಭ್ಯಗಳು ಸ್ಪರ್ಧಾತ್ಮಕ.ಪರೀಕ್ಷೆಗಳು ಇನ್ನೂ ಅನೇಕ ರೀತಿಯಲ್ಲಿ ಬಡವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡುವ ಸಲುವಾಗಿಸಂಘಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು. ಸಂಘದ ಜಿಲ್ಲಾ ಅಧ್ಯಕ್ಷರಾದ ಎಂ. ಖಾಸಿಂಸಾಬ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಂಘದ ಜಿಲ್ಲಾ ಖಜಾಂಚಿ ಶರೀಫ್ ರವರು ಮಾತನಾಡಿ ಸಂಘದಲ್ಲಿ ಒಳ್ಳೆಯ ವಿವಿಧ ಉದ್ದೇಶಗಳ, ಹಲವಾರು ರೀತಿಯ ಕಾರ್ಯಕ್ರಮಗಳನ್ನು. ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಕೆಲವು ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳುವ ಉದ್ದೇಶವಾಗಿದೆ. ಬಡ ವಿದ್ಯಾರ್ಥಿಗಳಿಗೆ ನಿರ್ಗತಿಕರಿಗೆ ಅನೇಕ ರೀತಿಯ ಸೌಲಭ್ಯಗಳನ್ನು ಒದಗಿಸುವ ಕುರಿತು ಮಾತನಾಡಿದರು.
ಜಿಲ್ಲಾ ಸಂಘದ ಅಧ್ಯಕ್ಷರಾದ ಎಂ ಕಾಶಿ ಮಲ್ಲಿ ಸರ್. ತಾಲೂಕಾಧ್ಯಕ್ಷ ಕಲಂದರ್ ಸರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು, ಉದ್ಘಾಟನೆ ಕಾನಮಡುಗು ದಾಸೋಹ ಮಠದ ಶ್ರೀ.ಐ.ಮುಡಿ ಶರಣಾರ್ಯರು ನೆರವೇರಿಸಿದರು. ಪ್ರಾಸ್ತವಿಕ. ಎಲ್.ವಕೀಲರಾದ ಬಶೀರ್ ಅಹಮದ್. ನಿರೂಪಣೆ ರಫೀಕ್ ಸರ್ ಗುಡೆಕೋಟೆ. ಸ್ವಾಗತ ಮತ್ತು ವಂದನಾರ್ಪಣೆ ಚಿಕ್ಕಜೋಗಿಹಳ್ಳಿ ಹೈದರ್. ನೆರವೇರಿಸಿದರು. ಹಾಗೂ ಈ ಕಾರ್ಯಕ್ರಮದಲ್ಲಿ ಕಾನಾಮಡಗು ಟಿಸಿಎಚ್ ಕಾಲೇಜಿನ ನಿವೃತ್ತ ಉಪನ್ಯಾಸಕರಾದಸಿದ್ದಾಪುರ ಗ್ರಾಮದ ಶರಣಪ್ಪನವರು. ಬಿ ಆರ್ ಪಿ ತಳವಾರ ಶರಣಪ್ಪ. ಶ್ರೀ ಜಮೀರ್ ಅಹಮದ್ ಬಿ ಆರ್ ಪಿ ಸಂಪನ್ಮೂಲ ಅಧಿಕಾರಿ. ಕಾನಹೊಸಹಳ್ಳಿ ಜಿಲನ್ ಭಾಷಾ ಶಿಕ್ಷಕರು. ಸನ ಉಲ್ಲ ಶಿಕ್ಷಕರು. ಚಿಕ್ಕಜೋಗಿಹಳ್ಳಿ ಗ್ರಾಮದ ಕೇಸರಿ ರಾಮಣ್ಣ. ಕಾನಹೊಸಹಳ್ಳಿ ರಾಮದಾಸ್. ಸೇರಿದಂತೆ ಜಿಲ್ಲಾ ಹಾಗೂ ತಾಲೂಕು. ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು…

ವರದಿ.ಡಿ.ಎಂ.ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
