;

ಎಂಟು ಸಾವಿರ ಮೆಂಬರ್ ಶಿಪ್ ಇದ್ದಾಗಲೂ 270 ಓಟು ಮಾತ್ರ ಬಂದಿದ್ದು ಯಾಕೆ ? – ಸೋಮನಗೌಡ ಬಾದರ್ಲಿ…!!!

ತಾಲೂಕಿನಲ್ಲಿ ಎಂಟು ಸಾವಿರ ಮೆಂಬರ್ ಶಿಪ್ ಇದ್ದಾಗಲೂ 270 ಓಟು ಮಾತ್ರ ಬಂದಿದ್ದು ಯಾಕೆ ? – ಸೋಮನಗೌಡ ಬಾದರ್ಲಿ

ಸಿಂಧನೂರು : ಬಸನಗೌಡ ಬಾದರ್ಲಿಯವರು ರಾಜ್ಯಧ್ಯಕ್ಷರಾಗಲೂ ನೀವೂ ಕಾರಣ ಇರಬಹುದು. ಆದರೆ ತಾಲೂಕಿನಲ್ಲಿ ಎಂಟು ಸಾವಿರ ಮೆಂಬರ್ ಶಿಪ್ ಇದ್ದಾಗಲೂ 270 ಓಟು ಮಾತ್ರ ಬಂದಿದ್ದು ಯಾಕೆ ? ಎಂದು ಸೋಮನಗೌಡ ಬಾದರ್ಲಿ ಪ್ರಶ್ನಿಸಿದರು.

ಇಂದು ನಗರದ ತಾಲೂಕು ಕಾಂಗ್ರೆಸ್ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹಂಪನಗೌಡ ಬಾದರ್ಲಿ ಬಗ್ಗೆ ಮಾತನಾಡುವ ಯೋಗ್ಯತೆ ಬಸನಗೌಡ ಬಾದರ್ಲಿಯವರಿಗೆ ಇಲ್ಲಾ ಎಂಬ ಪಂಪನಗೌಡ ಬಾದರ್ಲಿ ಹೇಳಿಕೆಗೆ ನಗರದ ತಾಲೂಕು ಕಾಂಗ್ರೆಸ್ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಸೋಮನಗೌಡ ಬಾದರ್ಲಿ ತಿರುಗೇಟು ನೀಡಿದರು.

ಹಂಪನಗೌಡ ಬಾದರ್ಲಿ ಹೆಸರು ಪ್ರಸ್ತಾಪ ಮಾಡಲು ಕಳೆದ ವಾರದ ಹಿಂದೆ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಬೋಗಸ್ ಮಾಡುತ್ತಿದ್ದಾರೆ ಎಂದು ಬನ್ನಿಗೌಡ ಮತ್ತು ಅವರ ಸಹಚರರ ಮೇಲೆ ನಿಮ್ಮ ಬೆಂಬಲಿಗರು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿ ಬಲವಂತವಾಗಿ ಅವರಿಂದ ತಪ್ಪು ಹೇಳಿಕೆ ಪಡೆದು ವಿಡಿಯೋ ಮಾಡಲು ಸ್ವತಃ ಹಂಪನಗೌಡರೇ ಪೋನನಲ್ಲಿ ಹೇಳಿದ್ದಾರೆ ಎನ್ನಲಾದ ಪ್ರತ್ಯಕ್ಷದರ್ಶಿ ಬನ್ನಿಗೌಡ ನೋಡಿದ್ದರಿಂದ ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದಿವಿ. ಬಾಬುಗೌಡ ಅವರು ಒಂದೊಂದು ವಿಡಿಯೋ ಕಳಿಸಿದಾಗಲೆಲ್ಲ ಇದು ಸರಿಯಿಲ್ಲ ಬೇರೆ ರೀತಿಯ ಹೇಳಿಕೆ ಕೊಡಿಸು ಎಂದು 13 ವಿಡಿಯೋಗಳನ್ನು ಮಾಡಿಸಿದ್ದರಿಂದ ಅವರ ಹೆಸರನ್ನು ಪ್ರಸ್ತಾಪ ಮಾಡಬೇಕಾಯಿತು.ಹಿರಿಯರಿಗೆ ಯಾವ ರೀತಿ ಗೌರವ ಕೊಡಬೇಕೆಂದು ನಮ್ಮ ತಂದೆ ತಾಯಿಗಳು ಕಲಿಸಿದ್ದಾರೆ. ಹಂಪನಗೌಡರ ಬಗ್ಗೆ ನಮಗೂ ವಯಕ್ತಿಕವಾಗಿ ಗೌರವವಿದೆ. ತಾವೂ ಹಿರಿಯರು , ತಮ್ಮ ಬೆಂಬಲಿಗರು ಹೇಳಿದ ಹಾಗೆ ತಪ್ಪು ಮಾಡಿದ್ದರೆ, ಆ ಹುಡುಗರನ್ನು ವಾಪಸ್ಸು ಕಳಿಸಬಹುದಿತ್ತು. ಕುಡಿದ ಅಮಲಿನಲ್ಲಿ ಅವರ ಮೇಲೆ ಹಲ್ಲೆ ಮಾಡುವ ಅವಶ್ಯಕತೆ ಏನಿತ್ತು. ತಡೆಯಲು ಬಂದ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಿರಿ, ಆದರೂ ಸುಮ್ಮನಾದೆ. ನಾನು ನಿಮ್ಮತರ ವರ್ತಿಸಿ ಒಂದು ವೇಳೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಕಾರ್ಯಕರ್ತರಾಗಲಿ ನಮಗಾಗಲಿ ಹಲ್ಯೆಯಾಗಿ ಸಾವು ಸಂಭವಿಸಿದರೆ ಯಾರು ಹೊಣೆ ? ಪಕ್ಷದ ಆಂತರಿಕ ವಿಚಾರವನ್ನು ಪಕ್ಷದ ಒಳಗಡೆ ಹಿರಿಯರ ಜೊತೆ ಚರ್ಚೆ ಮಾಡುವುದು ಬಿಟ್ಟು ಪತ್ರಿಕಾಗೋಷ್ಠಿ ಕರೆದು ಬಹಿರಂಗೊಳಿಸಿದ್ದಿರಿ.

ಬಸನಗೌಡ ಬಾದರ್ಲಿಯವರು ರಾಜ್ಯಧ್ಯಕ್ಷರಾದ ಮೇಲೆ ಬೇರೆ ಜಿಲ್ಲೆಯವರು ರಾಜ್ಯಧ್ಯಕ್ಷರ ತವರಲ್ಲಿಯೇ ಅವರಿಗೆ ಓಟು ಹಾಕಿಲ್ಲ ಎಂದು ದೊಡ್ಡ ಸುದ್ದಿಯಾಯಿತು. ಇದಕ್ಕೆ ಕಾರಣ ಯಾರು ? ತಾವೂ ಬೆಳೆಯಲು ನಮ್ಮ ಹಿರಿಯರ ಪರಿಶ್ರಮ ಮತ್ತು ತನುಮನಧನದಿಂದ ಬೆಳೆದಿದ್ದಿರಿ ಎಂಬುದು ನಿಮ್ಮ ಗಮನಕ್ಕೆ ಇರಲಿ ಗುಂಡಾ ಸಂಸ್ಕೃತಿ ಯಾರು ಮಾಡುತ್ತಾರೆ ಎಂದು ತಾಲೂಕಿನ ಜನತೆಗೆ ಗೊತ್ತಾಗಿದೆ. ನಾವು ಯಾವ ಸಮುದಾಯಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿಲ್ಲ. ಲೇ ಎಂದು ಅವರು ಮಾತನಾಡಿದ ಮೇಲೆ ಲೇ ಮಗನೇ ಮಾತನಾಡಿದ್ದಾರೆ ಎಂದು ಆಡಿಯೋವನ್ನು ಪತ್ರಿಕಾಗೋಷ್ಠಿ ತೋರಿಸಿದರು. ಹೀಗೆ ಮುಂದುವರೆದು ನಮ್ಮ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಯಾದರೆ ಹಂಪನಗೌಡ ಬಾದರ್ಲಿಯವರೆ ನೇರ ಹೊಣೆಗಾರರು ಎಂದರು.

ವೆಂಕಟೇಶ ರಾಘಲಪರ್ವಿ ಮಾತನಾಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸದಸ್ಯತ್ವ ಆಗಲೇಬೇಕು, ತಾಲೂಕು ಸಮಿತಿಗೆ ಅಧಿಕಾರವಿಲ್ಲ ಎಂದಾದರೆ ಕೆಪಿಸಿಸಿ ದೂರು ನೀಡಬೇಕು, ರಾಜ್ಯ ಘಟಕ ಅಧ್ಯಕ್ಷರಿಗೆ ಪ್ರಶ್ನೆ ಮಾಡಿ, ತಾಲೂಕು ಸಮಿತಿಗೆ ಅಲ್ಲಾ. ಕೆಪಿಸಿಸಿ ಕಾರ್ಯಧ್ಯಕ್ಷರಾದ ಈಶ್ವರ ಖಂಡ್ರೆ ಆದೇಶ ರದ್ದು ಮಾಡಿದ್ದು ನಿಜ ಅದು ಎರಡೂ ವರ್ಷಗಳ ಹಿಂದೆ ಮಾಡಿದ್ದು ಆ ಆದೇಶದ ನಂತರ ನೀವೂ ಕೂಡ ಕಾರ್ಮಿಕ ಘಟಕ ರಚನೆಮಾಡಿದ್ದಿರಿ ನಾವು ಕೂಡಾ ಅನೇಕ ಘಟಕಗಳನ್ನು ರಚನೆ ಮಾಡಿದ್ದೇವೆ . ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಪ್ರತಿಯೊಬ್ಬರಿಗೂ ರಾಜಕೀಯ ಹಕ್ಕನ್ನು ಚಲಾಯಿಸಲು ಅಧಿಕಾರವಿದೆ, ಅದನ್ನುಮೊಟಕುಗೊಳಿಸುವುದು ಸರಿಯಲ್ಲ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಮಾಡುವುದು ನಮ್ಮಲ್ಲೆರ ಕರ್ತವ್ಯ ಎಂದರು. ಈ ಸಂದರ್ಭದಲ್ಲಿ ಚನ್ನಬಸವ, ಅಮರೇಶ ಗಿರಿಜಾಲಿ, ಯುವರಾಜ್ ಖಾಜಾಹುಸೇನ್ ರೌಡಕುಂದಾ ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend