ಶಾಲಾ ಮಕ್ಕಳಿಂದ ಬೀದಿ ನಾಟಕ ಮುಖಾಂತರ ಸಂಚಾರಿ ನಿಯಮಗಳ ಕುರಿತು ಜನ ಜಾಗೃತಿ…!!!

ಶಾಲಾ ಮಕ್ಕಳಿಂದ ಬೀದಿ ನಾಟಕ ಮುಖಾಂತರ ಸಂಚಾರಿ ನಿಯಮಗಳ ಕುರಿತು ಜನ ಜಾಗೃತಿ

ಮಹಾಲಿಂಗಪುರ: ಸ್ಥಳೀಯ ಪೋಲೀಸ ಠಾಣೆಯ ಠಾಣಾಧಿಕಾರಿಗಳಾದ ವಿಜಯಕುಮಾರ ಕಾಂಬಳೆ ಜೋತೆ ರಸ್ತೆ ಸಂಚಾರ ನಿಯಮಗಳ ಚರ್ಚಿಸಿ ನಂತರ ನಗರದ ಜನಜಂಗುಳಿ ಮತ್ತು ವಾಹನ ದಟ್ಟನೆ ಇರುವ ಬಸವೇಶ್ವರ ವೃತ್ತದಲ್ಲಿ ಢಫಳಾಪುರ ವಿಧ್ಯಾವಿಹಾರ ಶಾಲಾ ಮಕ್ಕಳಿಂದ ಸಂಚಾರಿ ನಿಯಮಗಳ ಜನ ಜಾಗೃತಿ ಮಾಡಲಾಯಿತು.


ಇಂದಿನ ವಾಹನಗಳ ಸಂಚಾರ ದಟ್ಟನೆ ನಡುವೆ ಸಂಚಾರ ಸಂಕೇತಗಳನ್ನು ಮರೆತು ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸಿ ಪ್ರಯಾಣಿಸುವ ಪ್ರಯಾಣಿಕರಗೆ ಬೀದಿ ನಾಟಕ ಮಾಡುವ ಮುಖಾಂತರ ಸಂಚಾರ ಸಂಕೇತ ನಿಯಮಗಳು ಇರುವ ಬಿತ್ತಿ ಪತ್ರಗಳ ಹಂಚುವ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಕ್ಕಳು ಅತೀ ತೀಕ್ಷ್ಣವಾಗಿ ಮನಮುಟ್ಟುವ ಹಾಗೆ ರಸ್ತೆ ನಿಯಮ ಪಾಲನೆ ಮಾಡುವುದಕ್ಕಾಗಿ ಜನರಿಗೆ ಜಾಗೃತಿಯನ್ನು ಮಾಡಿದರು.


ಇದೆ ಸಂದರ್ಭ ದಲ್ಲಿ ಪೋಲೀಸ ಠಾಣೆಯ ಎ ಎಸ್ ಐ ಹೀರೆಕುರಬರ,ಮಮದಾಪೂರ ಮತ್ತು ಪೋಲೀಸ ಸಿಬ್ಬಂದಿ ಎಚ್ ಸಿ ಘಾಟಗೆ,
ಬೇಳಕೊಡ್,ಪಿ ಸಿ ತಳವಾರ ಹಾಗೂ ಶಾಲೆಯ ಪ್ರಾಂಶುಪಾಲರಾದ ರಾಜಕುಮಾರ ಉಪ ಪ್ರಾಂಶುಪಾಲರಾದ ಜಪರ್ ಯರಗಟ್ಟಿ ಶಾಲಾ ಸಿಬ್ಬಂದಿ ರಾಚಯ್ಯ ಹೀರೆಮಠ,ಅಶೋಕ ಪವಾರ,ಪ್ರಶಾಂತ ಬುಡರಕಟ್ಟಿ,ವಿರಯ್ಯ ಹೀರೆಮಠ,ಬಸವರಾಜ ಅಂಬಿ ಉಪಸ್ಥಿತರಿದ್ದರು.

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend