ಗುಂಡಾಗಿರಿ ಮಾಡಿಲ್ಲ ,ಇನ್ನೂ ಮುಂದೆ ಮಾಡಿತೋರಿಸುವತ್ತಿವಿ – ಬಾಬುಗೌಡ ಬಾದರ್ಲಿ.
ಸಿಂಧನೂರು : ಮಾಜಿ ಶಾಸಕ ಹಂಪನಗೌಡ ಬಾದರ್ಲಿಯವರ ಬಗ್ಗೆ ಅಗೌರವವಾಗಿ ಮಾತನಾಡೊದು ಸರಿಯಲ್ಲ ಇನ್ನೂ ಮುಂದೆ ಇದು ಅವರಿಗೆ ಎಚ್ಚರಿಕೆಯ ಗಂಟೆ ಎಂದು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅದ್ಯಕ್ಷರಾದ ಪಂಪನಗೌಡ ಬಾದರ್ಲಿ ಬಸನಗೌಡ ಬಾದರ್ಲಿ ಹೇಳಿಕೆಗೆ ತಿರುಗೇಟು ನೀಡಿದರು.
ಇಂದು ತಮ್ಮ ನಿವಾಸದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಪಕ್ಷದ ಸಿದ್ದಾಂತಗಳನ್ನು ಗಾಳಿಗೆ ತೂರಿ ತಾಲೂಕು ಸಮಿತಿ ರಚಿಸಿಕೊಂಡು ಕಾರ್ಯಕರ್ತರಿಗೆ ಇಲ್ಲದ ಆಸೆ ತೋರಿಸಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದೀರಿ.ಇಡಿ ರಾಜ್ಯದಲ್ಲಿ ಎಲ್ಲಿಯೂ ತಾಲೂಕು ಕಾಂಗ್ರೆಸ್ ಸಮಿತಿ ಇಲ್ಲಾ ಅದುಏನಾದರೂ ಇದ್ದಲ್ಲಿ ನಿಯಮ ಬಾಹಿರ ಕೆ.ಪಿ.ಸಿ.ಸಿ ನಿಯಮಗಳನ್ನು ಗಾಳಿಗೆ ತೂರಿ ವಿವಿಧ ಸಮಿತಿಗಳನ್ನು ತನಗಿಚ್ಛೆ ಬಂದಂತೆ ರಚನೆ ಮಾಡಿದ್ದಾರೆ ಇವುಗಳನ್ನು ಮುಂದಿನ ಆದೇಶದವರೆಗೆ ತಡೆ ಹಿಡಿಯಲಾಗಿದೆಂದು ಕೆ.ಪಿ.ಸಿ.ಸಿ ಕಾರ್ಯಾದ್ಯಕ್ಷರಾದ ಈಶ್ವರ ಖಂಡ್ರೆ ಆದೇಶ ಹೊರಡಿಸಿದ್ದಾರೆ ನಿಯಮಾನುಸಾರ ಬ್ಲಾಕ್ ಮತ್ತು ನಗರ ಸಮಿತಿಯ ಶಿಫಾರಸ್ಸುನಿಂದ ಮಾತ್ರ ಸಾಧ್ಯ. ಹಂಪನಗೌಡ ಬಾದರ್ಲಿ ರಾಜ್ಯ ನಾಯಕರು ಅವರ ಬಗ್ಗೆ ಮಾತನಾಡುತ್ತಿರುವದು ತನ್ನ ವಯಸ್ಸಿಗೆ ಮೀರಿದ ಮಾತು ಮತ್ತು ಪಕ್ಷದ ಯಾವುದೇ ಕಾರ್ಯಕ್ರಮ ಗಳನ್ನು ಮಾಡಿದರೂ ಅದು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಡಿಯಲ್ಲಿ ಮಾಡಬೇಕು ಮತ್ತು ಯಾವುದೇ ಉತ್ತರ ,ಹೇಳಿಕೆ ಕೊಡೊದಿದ್ದರೆ ಹಂಪನಗೌಡರೆ ಕೊಡಬೇಕು ಹಿಂಬಾಲಕರು ಕೊಡಬಾರದೆನ್ನುವದಕ್ಕೆ ಅವರು ಮಾಜಿ ಶಾಸಕರು ,ನಾನು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಅದಕ್ಕಾಗಿ ನಾನೇ ಪತ್ರಿಕಾಗೋಷ್ಠಿ ನಡೆಸುತ್ತೆವೆ ಮತ್ತು ರಾಜ್ಯ ಯುವ ಕಾಂಗ್ರೆಸ್ ಅದ್ಯಕ್ಷರಾಗುವ ಸಂಧರ್ಭದಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ ನಮ್ಮ ಕಾರ್ಯಕರ್ತರು ಹಂಪನಗೌಡರ ಮಾರ್ಗದರ್ಶನದಲ್ಲಿ ಹೋಗಿ ಚುನಾವಣೆ ಮಾಡಿರುವುದು ಬಸನಗೌಡ ಬಾದರ್ಲಿ ಮರೆತಿದ್ದಾನೆಂದು ಪಂಪನಗೌಡ ಬಾದರ್ಲಿ ಉತ್ತರಿಸಿದರು.
ಮಾಜಿ ಶಾಸಕರ ಬಗ್ಗೆ ಮಾತನಾಡುವದಕ್ಕೆ ಯಾವುದೇ ನೈತಿಕತೆ ಇಲ್ಲ, ಈ ಕೂಡಲೇ ಕ್ಷಮೆ ಕೇಳಬೇಕು ಮತ್ತು ತಾವು ಫೆಕ್ ಸದಸ್ಯತ್ವ ಮಾಡಿರುವುದರ ಬಗ್ಗೆ ತಿಳಿಸಿರುವದಕ್ಕೆ ನಮ್ಮ ತಾಲೂಕಿನ ಅಮರಾಪುರು ಗ್ರಾಮದಲ್ಲಿ ಫೆಕ್ ಸದಸ್ಯತ್ವ ಮಾಡುತ್ತಿದ್ದಾರೆಂದು ಸುಳ್ಳು ಆರೋಪ ಮಾಡಿದ್ದಾರೆಂದು ನಗರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಖಾಜಿ ಮಲ್ಲಿಕ್ ಮಾತನಾಡಿದರು.
ದೊಡ್ಡವರನ್ನು ತೆಗಳಿ ನೀನು ದೊಡ್ಡವನಾಗುತ್ತಿಯಾ ಎಂದು ಕೊಂಡರೆ ಅದು ನಿನ್ನ ಮೂರ್ಖತನ, ಅವರ ಬಗ್ಗೆ ಸಣ್ಣದಾಗಿ ಮಾತನಾಡಿದಷ್ಟು ನೀನು ರಾಜಕೀಯವಾಗಿ ಹಿಂದೆ ಹೋಗುತ್ತಿಯಾ,ನೀನು ಒಂದು ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ದೆಮಾಡಿ ತೋರಿಸು. ಹಂಪನಗೌಡ ಬಾದರ್ಲಿಯವರ ಬಗ್ಗೆ ಇದೇ ರೀತಿ ಹಗುರವಾಗಿ ಮಾತನಾಡುತ್ತಾ ಹೋದರೆ ಮುಂದೊಂದು ದಿನ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನಗರಸಭೆ ಸದಸ್ಯರಾದ ಶೇಖರಪ್ಪ ಗಿಣಿವಾರ ಮಾತನಾಡಿದರು.
ನೀವು ರಾಯಚೂರಿಗೆ ಪಾದಯಾತ್ರೆ ಹಮ್ಮಿಕೊಂಡಾಗ ನಮ್ಮ ಸಹಾಯ ಸಹಕಾರ ಇದೆ. ಅದನ್ನು ಮರೆತು ಬಿಟ್ಟಿದ್ದಿರಾ ?ಲೇ ಮಗನೆ ಎಂದು ಗಾಂಧಿನಗರದ ಆಂಧ್ರರಡ್ಡಿ ಸಮಾಜದ ವ್ಯಕ್ತಿಗಳಿಗೆ ಮಾತನಾಡಿದ್ದಿರಿ ಇದು ನಿಮ್ಮ ಸಂಸ್ಕೃತಿನಾ ? ನಾವು ನಿಮಗೆ ಹುಟ್ಟಿದ್ದಿವಾ ? ನಮಗೆ ಮಾತನಾಡಿದ ಹಾಗೇ ಬೇರೆ ಸಮಾಜದ ವ್ಯಕ್ತಿಗಳಿಗೆ ಈ ರೀತಿಯಲ್ಲಿ ಸಂಬೋದನೆ ಮಾತನಾಡಿದ್ದರೆ ನಿಮ್ಮನ್ನು ಸುಮ್ಮನೆ ಬೀಡುತ್ತಿದ್ದರಾ ? ನಾವು ಸೌಮ್ಯ ಸ್ವಭಾವದವರು ,ಬೇರೆ ರಾಜ್ಯದಿಂದ ದುಡಿದು ತಿನ್ನೊಕೆ ಬಂದವರು ಎಂದು ಕೇವಲವಾಗಿ ನಮ್ಮ ಬಗ್ಗೆ ಹಗುರವಾಗಿ ಮಾತನಾಡಿದ್ದಿರಿ ಎಂದು ಬಸನಗೌಡ ಬಾದರ್ಲಿ ಯವರಿಗೆ ಪಗಡದಿನ್ನಿ ಕ್ಯಾಂಪ್ ಮುಖಂಡರಾದ ಚಿಟ್ಟೂರಿ ಶ್ರೀನಿವಾಸ ಪ್ರಶ್ನಿಸಿದರು.
ಗೂಂಡಾಗಿರಿ ಮಾಡುತ್ತಿದ್ದಿರಿ ಎಂದು ನಮ್ಮ ಮೇಲೆ ಆಪಾದನೆ ಮಾಡುತ್ತಿದ್ದೀರಿ ಆದರೆ ಇಷ್ಟು ದಿನ ಮಾಡಿಲ್ಲ ಇದೇ ಪರಿಸ್ಥಿತಿ ಮುಂದುವರೆದರೆ ಇನ್ನೂ ಮುಂದೆ ಗೂಂಡಾಗಿರಿ ಎನೆಂಬುದು ಮಾಡಿ ತೋರಿಸುತ್ತೆವೆಂದು ಮಾ.ಜಿ ಜಿ.ಪಂ ಸದಸ್ಯರಾದ ಬಾಬುಗೌಡ ಬಾದರ್ಲಿ ಮಾಜಿ ಯುವ ರಾಜ್ಯಧ್ಯಕ್ಷ ಬಸನಗೌಡ ಬಾದರ್ಲಿಗೆ ಎಚ್ಚರಿಕೆ ನೀಡಿದರು.
ಮಾಜಿ ಜಿ.ಪ ಸದಸ್ಯರಾದ ಬಸವರಾಜ ಹಿರೇಗೌಡ ಮಾತನಾಡುತ್ತಾ ಕೇವಲ ಕಾಂಗ್ರೆಸ್ ಪಕ್ಷ ಅಷ್ಟೇ ಅಲ್ಲದೆ ಹಂಪನಗೌಡರ ವ್ಯಕ್ತಿತ್ವ ಹಾಗೂ ಪಕ್ಷ ಮೆಚ್ಚಿ ನಾವು ಕಾಂಗ್ರೆಸ್ ಪಕ್ಷದಲ್ಲಿದ್ದೆವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅದ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ, ಮಾಜಿ ನಗರಸಭೆ ಅದ್ಯಕ್ಷರಾದ ಜಾಫರ್ ಅಲಿ ಜಾಹಗೀರದಾರ,ನಗರಸಭೆ ಸದಸ್ಯರಾದ ಮುನೀರಪಾಷಾ, ಹುಸೇನಭಾಷಾ ,ಆಲಂಭಾಷಾ ,ಮುಖಂಡರಾದಛತ್ರಪ್ಪ,ಸುರೇಶ ಜಾದವ್,ದತ್ತುರಾವ,ಕರಿಂಸಾಬ, ತಿಮ್ಮಯ್ಯಸುಕಾಲಪೇಟೆ , ಪ್ರಭುರಾಜ ,ನಾಗರಾಜ ಕವಿತಾಳ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು..
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
