ಗ್ರಾಮ ಪಂಚಾಯತಿ ಸದಸ್ಯ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಬೇಕು !! ಕಡೆಮನಿ ಪ್ರಶಾಂತ…!!!

ಗ್ರಾಮ ಪಂಚಾಯತಿ ಸದಸ್ಯ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಬೇಕು !! ಕಡೆಮನಿ ಪ್ರಶಾಂತ

ಹೂವಿನ ಹಡಗಲಿ||
ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ನಂದಿಹಳ್ಳಿ ಗ್ರಾಮ ಪಂಚಾಯತಿಯ ಹುಗಲೂರು ಗ್ರಾಮದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ನಾಲ್ಕು ನೂರು ಮತಗಳಿವೆ. ಪಂಚಾಯತಿಯ ನಾಲ್ಕು ಸದಸ್ಯ ಸ್ಥಾನ ಇದ್ದರೂ ಇದುವರೆಗೂ ಒಮ್ಮೆಯೂ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಸಿಕ್ಕಿಲ್ಲ!! ಹಾಗಾಗಿ ಈ ಬಾರಿಯ ಗ್ರಾಮ ಪಂಚಾಯತಿ ಸದಸ್ಯರ ಮೀಸಲಾತಿ ವರ್ಗಿಕರಣದ ಸಮಯದಲ್ಲಿ ಹುಗಲೂರು ಗ್ರಾಮವನ್ನು ಪರಿಗಣಿಸಬೇಕು ಎಂದೂ ವಾಲ್ಮೀಕಿ ಮಹಾಸಭಾ ಗ್ರಾಮ ಘಟಕದ ಅಧ್ಯಕ್ಷರಾದ ಕಡೆಮನಿ ಪ್ರಶಾಂತ ಅವರು ಆಗ್ರಹಿಸಿದ್ದಾರೆ.!!
ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪ ಅವರಿಗೆ ಪತ್ರ ಮೂಲಕ ತಿಳಿಸಿದ್ದಾರೆ.

ನಂದಿಹಳ್ಳಿ ಗ್ರಾಮ ಪಂಚಾಯತಿಗೆ ಸೇರಿದ ಮುದೇನೂರು ಮತ್ತು ನಂದಿಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಜನಸಂಖ್ಯೆ ಅತ್ಯಂತ ಕಡಿಮೆ ಇದೆ ಆದರೆ ಅಲ್ಲಿ ಸದಸ್ಯ ಸ್ಥಾನಕ್ಕೆ ಮೀಸಲಾತಿ ಇದೆ. ಹುಗಲೂರು ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚಾಗಿದೆ ಈ ಬಾರಿಯ ಮೀಸಲಾತಿ ವರ್ಗೀಕರಣದಲ್ಲಿ ಈ ಮನವಿಯನ್ನ ಪರಿಗಣಿಸಿ ಮೀಸಲಾತಿಯನ್ನ ನೀಡ.ಸಾಮಾಜಿಕ ನ್ಯಾಯವನ್ನ ನೀಡಬೇಕು, ಇಲ್ಲದಿದ್ದರೆ ಪರಿಶಿಷ್ಟ ಪಂಗಡದ ಎಲ್ಲಾ ಮತದಾರರದು ಮತದಾನವನ್ನು ಬಹಿಷ್ಕಾರಿಸಿ ಧರಣಿ ಮಾಡುವುದಾಗಿ ಹೇಳಿದ್ದಾರೆ!!

ವರದಿ: ಅಜಯ.ಚ
ಹೂವಿನ ಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend