ರಾಮತ್ನಾಳ, ರೋಡಲಾಬಂಡ ದಲಿತರ ಮೇಲಿನ ಮಾರಣಾಂತಿಕ ಹಲ್ಲೇ…!!!

ರಾಮತ್ನಾಳ, ರೋಡಲಾಬಂಡ ದಲಿತರ ಮೇಲಿನ ಮಾರಣಾಂತಿಕ ಹಲ್ಲ್ಯೆ .
ಜನಪ್ರತಿನಿಧಿಗಳು ರಾಜೀನಾಮೆ ನೀಡಲು ಒಕ್ಕೂಟದ ಒತ್ತಾಯ !

ಸಿಂಧನೂರು : ಮಾರ್ಚ್ 01ರಂದು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದುಗಲ್ ವ್ಯಾಪ್ತಿಯಲ್ಲಿ ಬರುವಂತ ರಾಮತ್ನಾಳ ಎಂಬ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಮೇಲ್ಜಾತಿಯ ಮೇಲ್ವರ್ಗದ ಸವರ್ಣೀಯರಿಂದ ಕೆಳಜಾತಿಯ ದಲಿತರಾದ ಅಸ್ಪೃಶ್ಯರಾದ ಮಾದಿಗ, ಚಲವಾದಿ ಕುಟುಂಬಗಳ ಓಣಿಗೆ ಮನೆಗೆ ನುಗ್ಗಿ ಸ್ತ್ರೀ ಪುರುಷರೆನ್ನದೆ ಮನಸೋ ಇಚ್ಚೆ ಥಳಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿ ರಕ್ತದೊಕುಳಿ ಹರಿಸಿದ ಸವರ್ಣಿಯರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಲು ಹಾಗೂ ಜನಪ್ರತಿನಿಧಿಗಳು ರಾಜೀನಾಮೆಯನ್ನು ನೀಡಲು ದಲಿತ-ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟದಿಂದ ಆಗ್ರಹಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ನಾಗರಿಕ ಸಮಾಜ ತಲೆತಗ್ಗಿಸುವಂತ ದೊಡ್ಡ ದುರಂತ ಜರುಗಿದೆ. ಈ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮೂಲಕ ಭಾರತದ ಸಂವಿಧಾನದ ತತ್ವ ಸಿದ್ಧಾಂತಗಳ ಅಡಿಯಲ್ಲಿ ಕಾನೂನುಗಳನ್ನು ರಚಿಸಿದ್ದರೂ ಕೂಡಾ ಉಲ್ಲಂಘನೆ ಮಾಡಿ ಈ ಜಾತಿ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಆಳುವ ಸರಕಾರಗಳು ಸಂವಿಧಾನ ವಿರೋಧಿ,ಪ್ರಜಾಪ್ರಭುತ್ವ ತಲೆಕೆಳಗಾಗಿದೆ. ಕಾರಣ ಇಂತಹ ವ್ಯವಸ್ಥೆಯನ್ನು ಕಾನೂನಾತ್ಮಕವಾಗಿ ನಿರ್ಬಂಧಕ್ಕೊಳಪಡಿಸಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳು,ತಹಶಿಲ್ದಾರರು,ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳ ಜವಾಬ್ದಾರಿಯಾಗಿದೆ.

ಪದೇಪದೇ ರಾಯಚೂರು ಜಿಲ್ಲೆಯಲ್ಲಿ ಕೆಳವರ್ಗ ಮತ್ತು ಅಸ್ಪೃಶ್ಯ ಜನಾಂಗಗಳ ಮೇಲೆ ಮೇಲ್ಜಾತಿ ಮೇಲ್ವರ್ಗದ ಬಲಿಷ್ಠರು ಮತ್ತು ರಾಜಕಾರಣಿಗಳಿಂದ ದೌರ್ಜನ್ಯ ದಬ್ಬಾಳಿಕೆ ಕೊಲೆ ಸುಲಿಗೆ ಅತ್ಯಾಚಾರ ನಿರಂತರ ನಡೆಯುತ್ತಿದ್ದರು ಈ ಭಾಗದ ಜನಪ್ರತಿನಿಧಿಗಳು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸ್ಥಳೀಯ ಶಾಸಕರು ಜನಸಾಮಾನ್ಯರಿಂದ ಮತವನ್ನು ಪಡೆದ ಗ್ರಾಮ ಪಂಚಾಯಿತಿಯಿಂದ ಹಿಡಿದು ರಾಜ್ಯವನ್ನಾಳುವ ಮುಖ್ಯಮಂತ್ರಿಗಳು ಇಂತಹ ಘಟನೆಗಳ ಬಗ್ಗೆ ಗಮನ ಹರಿಸದೇ ಇರುವುದು ನಾಚಿಕೆಗೇಡಿನ ಸಂಗತಿ.
ಆದ್ದರಿಂದಾಗಿ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಈ ಕೂಡಲೇ ರಾಮತ್ನಾಳ ಗ್ರಾಮಕ್ಕೆ ಭೇಟಿ ಕೊಟ್ಟು ದೌರ್ಜನ್ಯಕ್ಕೊಳಗಾದ ಅನ್ಯಾಯಕ್ಕೊಳಗಾದ ಕುಟುಂಬಗಳಿಗೆ ಧೈರ್ಯವನ್ನು ತುಂಬುವುದರ ಮುಖಾಂತರ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ವಿಧಿಸಿ ಅವರ ಮೇಲೆ ಕೇಸ್ ದಾಖಲಿಸಿ ಅಸ್ಪೃಶ್ಯರಿಗೆ ನ್ಯಾಯವನ್ನು ಒದಗಿಸಿಕೊಡಬೇಕೆಂದು ಒಕ್ಕೂಟದಿಂದ ಆಗ್ರಹಪಡಿಸಿದರು.

ಹಾಗೆಯೇ ಲಿಂಗಸೂಗೂರು ತಾಲೂಕಿನಲ್ಲಿ ಕಿಲಾರಹಟ್ಟಿ ಬೈಲಪ್ಪನ ಪ್ರಕರಣ, ನಿಲೋಗಲ್ ಸೈನಿಕನ ತಾಯಿ ಕೊಲೆ, ಈಗ ರಾಮತ್ನಾಳ ಮತ್ತು ರೋಡಲಬಂಡ ತವಗ, ಈ ಘಟನೆಯ ಹೊಣೆ ಹೊತ್ತು ಲಿಂಗಸೂಗೂರು ಶಾಸಕ ಡಿ.ಎಸ್.ಹೂಲಿಗೇರಿ, ಬಿಜೆಪಿ ಮಾಜಿ ಶಾಸಕ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಹಾಗೂ ವಿಧಾನಪರಿಷತ್ ಸದಸ್ಯರಾ ಶರಣಪ್ಪಗೌಡ ನೈತಿಕ ಹೊಣೆ ಹೊತ್ತು ರಾಜೀನಾಮೆಯನ್ನು ನೀಡಬೇಕೆಂದು ನಮ್ಮ ಒತ್ತಾಯವಾಗಿದೆ. ಇಲ್ಲದೆ ಹೋದರೆ ಮುಂದಿನ ದಿನಮಾನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಸಂಚಾಲಕ ಎಂ. ಗಂಗಾಧರ ಪತ್ರಿಕೆ ಹೇಳಿಕೆ ಮುಖಾಂತರ ಎಚ್ಚರಿಕೆ ನೀಡಿದರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend