ಸಿಂಧನೂರು : ಹಂಪನಗೌಡ ಬಾದರ್ಲಿಯವರು ಗುಂಡಾ ಸಂಸ್ಕೃತಿಯಿಂದ ಅಧಿಕಾರಕ್ಕೆ ಬಂದವರು. ಅವರು ಪಕ್ಷದ ಆಂತರಿಕ ವಿಚಾರವನ್ನು ಪಕ್ಷದ ಒಳಗಡೆ ಮಾತನಾಡಬೇಕು. ಸುದ್ದಿಗೋಷ್ಟಿ ಮೂಲಕ ಬಹಿರಂಗಪಡಿಸಿದ್ದಾರೆ. ಇಂತಹವರನ್ನು ಪಕ್ಷ ವಿರೋದ ಚಟುವಟಿಕೆ ಆರೋಪದಡಿ ಕಾಂಗ್ರೆಸ್ ಪಕ್ಷದಿಂದಲೇ ಉಚ್ಚಾಟನೆ ಮಾಡಬೇಕು ಎಂದು ಮಾಜಿ ಯುವ ಕಾಂಗ್ರೆಸ್ ರಾಜ್ಯಧ್ಯಕ್ಷರಾದ ಬಸನಗೌಡ ಬಾದರ್ಲಿ ಆಗ್ರಹಪಡಿಸಿದರು.
ನಗರದ ತಾಲೂಕು ಕಾಂಗ್ರೆಸ್ ಕಛೇರಿಯಲ್ಲಿ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕೆಪಿಸಿಸಿ ಆದೇಶದ ಮೇರೆಗೆ ನಡೆಯುತ್ತಿರುವ ಸದಸ್ಯತ್ವ ನೋಂದಣಿ ಅಭಿಯಾನವನ್ನು ಸಿರುಗುಪ್ಪ ತಾಲೂಕು ಯುವ ಅಧ್ಯಕ್ಷರಾದ ಬನ್ನಿಗೌಡ ಸೇರಿದಂತೆ ಐದು ಜನ ತಾಲೂಕಿನ ಕಾರ್ಯಕರ್ತರನ್ನು ಕರೆದುಕೊಂಡು ಮಾಡುತ್ತಿದ್ದರು. ಆದರೆ ಬೋಗಸ್ ಮಾಡುತ್ತಿದ್ದಾರೆ ಎಂದು ಹಂಪನಗೌಡ ಹಿಂಬಾಲಕರು ಗುಂಡಾಗಿರಿಯಿಂದ ಕುಡಿದ ಮತ್ತಿನಲ್ಲಿ ಏಕಾಏಕಿ ಹಲ್ಲೆಮಾಡಿ ಅವರನ್ನು ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ಕೂಡಿಹಾಕಿ ಜೀವದ ಭಯ ತೊರಿಸಿ ಬಲವಂತವಾಗಿ ಅವರಿಂದ ತಪ್ಪು ಹೇಳಿಕೆ ಪಡೆದು ಸುದ್ದಿಗೋಷ್ಟಿ ನಡೆಸಿದ್ದಾರೆ. ನೀವು ಹೇಳಿದ ಹಾಗೇ ಸದಸ್ಯತ್ವ ಪೇಕ್ ಮಾಡುತ್ತಿದ್ದರೆ ಹೈಕಮಾಂಡ್ ಗಮನಕ್ಕೆ ತರಬೇಕಿತ್ತು.ಅಧಿಕಾರ ಅನುಭವಿಸಿದ ನಿಮಗೆ ಪಕ್ಷದ ನಿಯಮಗಳು ಗೊತ್ತಿಲ್ಲವೇ. 7 ಬಾರಿ ಚುನಾವಣೆಯಲ್ಲಿ ಸ್ಪರ್ಧೆಮಾಡಿ 4 ಬಾರಿ ಸೋತು 3 ಬಾರಿ ಜನರಿಂದ ಆಯ್ಕೆಯಾಗಿದ್ದಿರಿ. ನಿಮ್ಮ ಈ ಗೂಂಡಾ ವರ್ತನೆಯಿಂದ ಜನ ದೂರವಾಗುತ್ತಿದ್ದಾರೆ.2011ರಲ್ಲಿ ಮಸ್ಕಿಯ ಮಾಜಿ ಶಾಸಕ ಪ್ರತಾಪ್ ಗೌಡ ಅವರನ್ನು ಬಿಜೆಪಿಗೆ ಕಳಿಸಿದ್ದು ನೀವೇ. ಹಾಗೂ ಗಾಂಧಿನಗರದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಹಾಕದೆ, ಬಿಜೆಪಿ ಜೊತೆ ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಹಾಗೂ ಬೇರೆ ಬೇರೆ ರಾಜ್ಯದಿಂದ ಗೂಂಡಾಗಳನ್ನು ಕರೆಸಿ ಬೂತ್ ಮಟ್ಟದಲ್ಲಿ ರಿಗ್ ಮಾಡಿಸಿರುವುದು ತಾಲೂಕಿನ ಜನತೆಗೆ ಮರೆತಿಲ್ಲ.ತಾಲೂಕಿನ ಜನರು ನನ್ನನ್ನು ರಾಜ್ಯಮಟ್ಟಕ್ಕೆ ಬೆಳೆಸಿದ್ದಾರೆ. ಅವರ ಋಣ ತೀರಿಸಲು ಅವರ ಸಂಕಷ್ಟಕ್ಕೆ ಸ್ಪಂದಿಸಿ ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ. ನನ್ನ ಬೆಳವಣೆಗೆಯನ್ನು ಸಹಿಸದೇ ಆಪಾದನೆ ಮಾಡುತ್ತಿದ್ದೀರಿ. ನೀವು ಹೇಳಿದ ಹಾಗೆ ಪೇಕ್ ಎಂದು ರುಜುವಾತು ಮಾಡಿದರೆ ಕಾಂಗ್ರೆಸ್ ಪಕ್ಷದಿಂದ ನಿವೃತ್ತಿ ಯಾಗಲು ಸಿದ್ದ ಎಂದು ಬಸನಗೌಡ ಬಾದರ್ಲಿ ಸವಾಲೆಸದರು.
ತಿರುಗಿ ಬಿದ್ದ ಸಿರುಗುಪ್ಪ ತಾಲೂಕು ಯುವ ಅಧ್ಯಕ್ಷ ಬನ್ನಿಗೌಡ : ಕಳೆದ ಎರಡು ದಿನಗಳ ಹಿಂದೆ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ಹಂಪನಗೌಡ ಬಾದರ್ಲಿ ಆದೇಶದ ಮೇರೆಗೆ ಪಂಪನಗೌಡ ಬಾದರ್ಲಿಯವರ ನೇತ್ರತ್ವದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನ ನಕಲಿ ಮಾಡಿದ್ದಾಗಿ ಬಲವಂತವಾಗಿ ಹೇಳಿಕೆಯನ್ನು ಪಡೆದಿದ್ದಾರೆ. ಬಾಬುಗೌಡ ಬಾದರ್ಲಿ ಕುಡಿದ ಮತ್ತಿನಲ್ಲಿ ಅವರ ಜೊತೆ 30ಕ್ಕೂ ಹೆಚ್ಚು ಜನರೊಂದಿಗೆ ನನ್ನ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಕಾರಣ ನಾನು ಪತ್ರಿಕಾಗೋಷ್ಠಿಯಲ್ಲಿ ಸುಳ್ಳು ಹೇಳಿದ್ದೇನೆ. ನಾನು ವೀರಶೈವ ಸಮಾಜದಲ್ಲಿ ಹುಟ್ಟಿದ್ದೇನೆ, ಹಂಪನಗೌಡ ಬಾದರ್ಲಿ ವೀರಶೈವ ಸಮಾಜದಲ್ಲಿ ಹುಟ್ಟಿದ್ದಾರೆ. ಅವರಿಗೆ ದೇವರ ಮೇಲೆ ನಂಬಿಕೆ ಇದ್ದರೆ ಇಂದು ಶಿವರಾತ್ರಿ ದಿನದಂದು ವಳಬಳ್ಳಾರಿ ಚನ್ನಬಸವತಾತ ಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ ನಾಯಕ, ಶಿವಕುಮಾರ್ ಜವಳಿ,ಮೂಕಪ್ಪ ಸಾಹುಕಾರ, ನಿರುಪಾದಿಸ್ವಾಮಿ ಗೋಮರ್ಸಿ, ಚನ್ನಬಸವ ಗೋಮರ್ಸಿ, ಶರಣಯ್ಯ ಕೋಟೆ, ಖಾಜಾ ರೌಡಕುಂದಾ, ಅಮರೇಶ ಗಿರಿಜಾಲಿ ಇನ್ನೂ ಅನೇಕ ಉಪಸ್ಥಿತರಿದ್ದರು..

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
