ನಾಡಗೌಡರ ಅಭಿವೃದ್ಧಿ ಕಾರ್ಯ ಮೆಚ್ಚಿ ಯುವಕರು ಜೆಡಿಎಸ್ ಪಕ್ಷ ಸೇರ್ಪಡೆ…!!!

ನಾಡಗೌಡರ ಅಭಿವೃದ್ಧಿ ಕಾರ್ಯ ಮೆಚ್ಚಿ ಯುವಕರು ಜೆಡಿಎಸ್ ಪಕ್ಷ ಸೇರ್ಪಡೆ.

ಸಿಂಧನೂರು : ನಗರದ ಯುವ ಜೆಡಿಎಸ್ ತಾಲೂಕು ಕಛೇರಿಯಲ್ಲಿ ತಾಲೂಕು ಅಧ್ಯಕ್ಷರಾದ ಬಸವರಾಜ ನಾಡಗೌಡ ಅವರ ಅಧ್ಯಕ್ಷತೆಯಲ್ಲಿ ಮಹಾವೀರ ಜೈನ್ ಇವರ ನೇತೃತ್ವದಲ್ಲಿ ಇಂದು ನಗರದ ಇಪ್ಪತ್ತಕ್ಕೂ ಹೆಚ್ಚಿನ ಯುವಕರು ಶಾಸಕ ವೆಂಕಟರಾವ್ ನಾಡಗೌಡರ ಸರಳತೆ, ಅನೇಕ ಅಭಿವೃದ್ದಿ ಕಾರ್ಯಕ್ರಮಗಳನ್ನು ಮತ್ತು ಕ್ಷೇತ್ರದ ಮೇಲಿರುವ ಕಾಳಜಿಯನ್ನು ಮೆಚ್ಚಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.

ಶಾಸಕ ನಾಡಗೌಡ ರವರು ಸ್ಥಳೀಯವಾಗಿ ದಿನದ 24 ತಾಸಿನಲ್ಲಿ ಯಾವ ವೇಳೆಯಲ್ಲಿ ಪೋನ ಮಾಡಿದರು ಸಿಗುತ್ತಾರೆ, ಅತಿ ಹೆಚ್ಚು ಯುವಕರನ್ನು ಹಚ್ಚಿಕೊಳ್ಳುತ್ತಾರೆ. ಮೊದಲ ಬಾರಿಗೆ ಚುನಾವಣೆಗೆ ಸ್ಪರ್ದಿಸಿದಾಗ ಹಂಪನಗೌಡ ಮತ್ತು ಅವರ ಬೆಂಬಲಿಗರು ನಾಡಗೌಡರು ರಾಜಮನೆತನದಿಂದ ಬಂದವರು ಅವರು ಗೆದ್ದರೆ ಬೆಂಗಳೂರಿನಲ್ಲಿ ವಾಸಮಾಡುತ್ತಾರೆ ಜನಸಾಮಾನ್ಯರಿಗೆ ಸಿಗುವುದಿಲ್ಲ ಎಂದು ಸುಳ್ಳು ಅಪಪ್ರಚಾರ ಮಾಡಿದರು. ಆದರೆ ಕ್ಷೇತ್ರದಲ್ಲಿ ಹೆಚ್ಚಿನ ದಿನಗಳಲ್ಲಿ ಇಂದು ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು ತಂದಿದ್ದಾರೆ ಎಂದು ಯುವಕರಿಗೆ ಪಕ್ಷದ ಶಾಲು ಹಾಕಿ ಬರಮಾಡಿಕೊಂಡು ಜೆಡಿಎಸ್ ತಾಲೂಕು ಅಧ್ಯಕ್ಷರಾದ ಬಸವರಾಜ ನಾಡಗೌಡ ಮಾತನಾಡಿದರು.

ನಗರದ ವಿವಿಧ ವಾರ್ಡಿನ ಯುವಕರಾದ ಮುಜಾಹಿದ್, ನವೀನ್, ಶ್ರೀಕರ,ಕಿರಣ್, ಅಭಿಷೇಯ,ಶಾಹಿನ್ ಇನ್ನು ಇಪ್ಪತ್ತುಕ್ಕೂ ಅನೇಕರು ಪಕ್ಷ ಸೇರ್ಪಡೆಗೊಂಡರು.

ನಂತರ ಮಾತನಾಡಿದ ಎಂಡಿ. ನದಿಮುಲ್ಲಾ ಶಾಸಕರು ಅತಿ ಹೆಚ್ಚು ಶಿಕ್ಷಣಕ್ಕೆ ಒತ್ತುಕೊಡುವುದರಿಂದ ತಾಲೂಕಿನಲ್ಲಿ 400 ಕ್ಕೂ ಹೆಚ್ಚು ಶಾಲಾ ಕಾಲೇಜುಗಳ ಕೊಠಡಿಗಳುನಿರ್ಮಾಣವಾಗಿವೆ. ಜನಸಾಮಾನ್ಯರು ಯಾವುದೇ ಸಮಸ್ಯೆಗಳನ್ನು ತೆಗೆದುಕೊಂಡು ಬಂದರೆ ಯಾವ ಪಕ್ಷ, ಜಾತಿ ಯಾವುದು, ಧರ್ಮ ಯಾವುದೂ ಅಂತ ವಿಚಾರ ಮಾಡುವುದಿಲ್ಲ.ತುರ್ವಿಹಾಳ ಹತ್ತಿರ 259 ಎಕರೆ ಭೂಮಿಯನ್ನು ಖರೀದಿ ಮಾಡಿ ಕೆರೆ ನಿರ್ಮಾಣ ತಾಲೂಕಿನ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿದ್ದಾರೆ ಎಂದರು.

ಶಾಸಕ ವೆಂಕಟರಾವ್ ನಾಡಗೌಡ್ರು ಹೆಚ್ಚು ಯುವಕರನ್ನು ಬೆಳೆಸುವಂತಹ ಗುಣವುಳ್ಳವರು. ಅವರ ಮಾರ್ಗದರ್ಶನದಲ್ಲಿ ನಡೆದು ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಶಾಸಕರನ್ನಾಗಿ ಮಾಡಲು ನಾವೆಲ್ಲಾ ಯುವಕರು ಪಣತೊಡೋಣ ಎಂದು ಮಹಾವೀರ ಜೈನ್ ಮಾತನಾಡಿದರು.

ಈ ಸಂದರ್ಭದಲ್ಲಿ ಎಂ ಡಿ. ನದಿಮುಲ್ಲಾ, ಚಂದ್ರು ಮೈಲಾರ, ಅಜಯ್ ದಾಸರಿ, ಅಲ್ಲಮಪ್ರಭು, ಬಿ. ಹರೀಶ್, ಸೈಯದ್ ಆಸೀಪ್, ಮಂಜುನಾಥ, ಮಹಾವೀರ ಜೈನ್, ನಗರಸಭೆ ಸದಸ್ಯರು, ತಾಲೂಕು ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಗೂ ಪಕ್ಷದ ಮುಖಂಡರು ಭಾಗಿಯಾಗಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend