ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನ ಹತ್ಯೆ ಖಂಡಿಸಿ ಪ್ರತಿಭಟನೆ…!!!

ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನ ಹತ್ಯೆ ಖಂಡಿಸಿ ಪ್ರತಿಭಟನೆ

ಕಳೆದ ಮೂರ್ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹತ್ಯೆಗಳು ಆಗುತ್ತಿವೆ ಎಂದು ಕೇಳಿ ಬಂದಿರುವುದನ್ನು ಗಮನಿಸಿರಬಹುದು, ಅದೇ ರೀತಿ ನಿನ್ನೆಯ ದಿನ ಶಿವಮೊಗ್ಗ ನಗರದಲ್ಲಿ ಯವಕನ ಮೇಲೆ ಹಲ್ಲೆಯಾಗಿದೆ ಎಂದು ಆರೋಪವಾಗಿತ್ತು.
ಕಾರಣ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಬನಹಟ್ಟಿ ನಗರದಲ್ಲಿ ಶ್ರೀ ರಾಮ ಸೇನಾ ತಾಲ್ಲೂಕು ಘಟಕದಿಂದ ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತ ಹರ್ಷನ ಹತ್ಯೆವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ಇದೆ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು ಕಾರ್ಯಕರ್ತನ ಹತ್ಯೆ ಮಾಡಿದವರನ್ನು ತಕ್ಷಣ ಬಂಧಿಸಿ ಶಿಕ್ಷೆಗೊಳಿಪಡಿಸಬೇಕು ಮತ್ತು ಎಸ್ ಡಿ ಪಿ ಆಯ್, ಪಿ ಎಫ್ ಆಯ್, ಸಿ ಎಫ್ ಆಯ್ ನಿಷೇಧಿಸಿ ಹತ್ಯಗಿಡಾದ ಕಾರ್ಯಕರ್ತನ ಕುಟುಂಬಕ್ಕೆ ಇಪ್ಪತ್ತೈದು ಲಕ್ಷ ಪರಿಹಾರ ನಿಡಬೇಕು. ಹಿಂದೂ ಕಾರ್ಯಕರ್ತರ ಹಿಂದೂ ನಾಯಕರಿಗೆ ಮುಖಂಡರಿಗೆ ಸೂಕ್ತ ಭದ್ರತೆಯನ್ನು ನಿಡಬೇಕೆಂದು ಆಗ್ರಹಿಸಿ ಶ್ರೀ ರಾಮ ಸೇನಾ ರಬಕವಿ ಬನಹಟ್ಟಿ ತಾಲ್ಲೂಕು ಘಟಕದಿಂದ ಪ್ರತಿಭಟನೆ ಮೂಲಕ ರಬಕವಿ ಬನಹಟ್ಟಿ ತಾಲ್ಲೂಕು ತಹಸಿಲ್ದಾರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಹಿಂದೂ ಸಂಘಟನೆಯ ಕಾರ್ಯಕರ್ತರು ಹಿಂದೂ ಮುಖಂಡರು, ಸಂಘಟನೆಗಳ ನಾಯಕರು ಹಾಜರಿದ್ದರು.

ವರದಿ.ಬಸವರಾಜ ನಂದೆಪ್ಪನವರ
ರಬಕವಿ ಬನಹಟ್ಟಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend