ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಮದ್ಯ ಮಾರಾಟ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರುತ್ತಿದ್ದು, ಮದ್ಯ ಪ್ರಿಯರಿಗೆ ನುಂಗಲಾರದ ತುತ್ತು…!!!

ಹೊಸಪೇಟೆ ( ವಿಜಯನಗರ ): ಬಳ್ಳಾರಿ, ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಮಾರಾಟ ದರಕ್ಕಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರುತ್ತಿದ್ದು, ಮದ್ಯ ಪ್ರಿಯರಿಗೆ ನುಂಗಲಾರದ ತುತ್ತಾಗಿದೆ.

ಬಳ್ಳಾರಿ ರೇಂಜ್‌ ಒಂದು ಮತ್ತು ಎರಡು, ಹೊಸಪೇಟೆ ರೇಂಜ್‌ ಒಂದು ಮತ್ತು ಎರಡು ಹಾಗೂ ಸಿರುಗುಪ್ಪ, ಹಗರಿ ಬೊಮ್ಮನಹಳ್ಳಿ, ಹೂವಿನ ಹಡಗಲಿ, ಕೂಡ್ಲಿಗಿಯ ರಾಷ್ಟ್ರಿಯ ಹೆದ್ದಾರಿಗೆ ಹೊಂದಿಕೊಂಡಿರುವ ಹಲವಾರು ಹಳ್ಳಿಗಳಲ್ಲಿ ರಸ್ತೆ ಬದಿಯಲ್ಲಿ ಇರುವ ಮತ್ತು ಎಗ್ ರೈಸ್ ಮತ್ತು ಟೀ ಮಾಡುವ ಅಂಗಡಿಗಳಲ್ಲಿ ಅತೀ ಹೆಚ್ಚಾಗಿ ಮದ್ಯ ಸಿಗುತ್ತದೆ ಮತ್ತು ಹಲವಾರು ಭಾರಿ ಸಂಬಂಧ ಪಟ್ಟ ಬಿಟ್ ಪೊಲೀಸ್ ಠಾಣೆಗಳು ಮತ್ತು ಅಬಕಾರಿ ಅಧಿಕಾರಿಗಳು ರೈಡ್ ಮಾಡಿದರು ಯಾವುದೇ ಕ್ರಮವನ್ನು ತೆಗೆದುಕೊಳ್ಳುವುದೇ ಇರುವುದು ಸಾರ್ವಜನಿಕರಿಗೆ, ಕುರುಡು ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿರುವ  ಪೊಲೀಸ್ ಆಡಳಿತ ವ್ಯವಸ್ಥೆ ಎನ್ನುವ ಒಂದು ಆಣೆಪಟ್ಟೆಗೆ ಹೆಸರಾಗಿದೆ ಎಂಬುವಂತಾಗಿದೆ ಎಂದರು ತಪ್ಪಾಗಲಾರದು  ಮತ್ತು,ಹರಪನ ಹಳ್ಳಿ ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 280ಕ್ಕೂ ಹೆಚ್ಚು ಮದ್ಯದ ಅಂಗಡಿಗಳು ಹಾಗೂ ಬಾರ್‌ಗಳಿದ್ದು, ಗ್ರಾಹಕರು ದುಬಾರಿ ಬೆಲೆ ತೆತ್ತು ಮದ್ಯ ಕುಡಿಯುವ ಸ್ಥಿತಿ ನಿರ್ಮಾಣವಾಗಿದೆ.

ಹೆಚ್ಚಿನ ದರಕ್ಕೆ ಮದ್ಯ: ನಗರ ಮಾತ್ರವಲ್ಲದೇ ಅವಳಿ ಜಿಲ್ಲೆಯ ತಾಲೂಕುಗಳ ನಗರ, ಹೋಬಳಿಗಳ ಮದ್ಯದ ಅಂಗಡಿಗಳಲ್ಲಿ ಮದ್ಯ ಬಾಟಲಿಗಳ ಮೇಲೆ ದರ ನಮೂದಾಗಿದ್ದರೂ ಆಯಾ ಬ್ರಾಂಡ್‌ಗೆ ತಕ್ಕಂತೆ 5 ರೂ.ಗಳಿಂದ 40 ರೂ.ಗಳಿಗಿಂತಲೂ ಹೆಚ್ಚಿಗೆ ಹಣ ಪಡೆಯಲಾಗುತ್ತಿದ್ದು, ಮದ್ಯದ ಅಂಗಡಿಗಳ ಮೇಲೆ ಕ್ರಮ ಯಾವಾಗ ಎಂಬ ಪ್ರಶ್ನೆಗಳು ಮೇಲೆದ್ದಿವೆ.

ಹೆಚ್ಚು ಮಾರಾಟವಾಗುವ ಮದ್ಯ: ಒರಿಜಿನಲ್‌ ಚಾಯ್ಸ್, ಹೈವರ್ಡ್ಸ್, ರಾಜಾ ವಿಕ್ಸಿ 180 ಎಂಎಲ್‌ಗೆ 70.27 ರೂ., 90 ಎಂಎಲ್‌ಗೆ 35.13 ರೂ. ಬೆಲೆ ಇದೆ. ಇದಕ್ಕೆ 5 ರೂ. ಗಳಿಂದ 10 ರೂ. ಗೂ ಹೆಚ್ಚಿನ ಬೆಲೆಗೆ ಮಾರಾಟವಾದರೆ, ಒಟಿ, 8ಪಿಎಂ, 86.75 ರೂ., ಬ್ಯಾಗ್ ಪೈಪರ್‌ (ಬಿಪಿ), ಎಂಸಿ ರಮ್‌ 106.23 ರೂ. ಎಂಸಿ ವಿಕ್ಸಿ 198.25 ರೂ. ಬೆಲೆ ಇದ್ದರೆ 10 ರಿಂದ 20 ರೂ. ಹೆಚ್ಚಿನ ಬೆಲೆಗೆ ಮಾರುತ್ತಾರೆ. ಕಿಂಗ್‌ ಫಿಷರ್‌, ನಾಕೌಟ್‌, ಬಿರಾ ಬಿಯರ್‌ 150 ರೂ., ಟುಬಗೋಗೆ 155 ರೂ., ಬಡ್ವೇಜರ್‌ 190 ರೂ.ಗಳಿವೆ. ಇವುಗಳಿಗೆ 20 ರೂ.ನಿಂದ 40 ರೂ.ವರೆಗೆ ಹೆಚ್ಚಿನ ಬೆಲೆಗೆ ಮಾರುತ್ತಾರೆ. ಇತರೆ ಮದ್ಯ ಬಾಟಲಿಗಳನ್ನು ಆಯಾ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಲಾಗುತ್ತಿದೆ.
ಗ್ರಾಹಕರಿಗೆ ದಬಾವಣೆ: ಮಾರುಕಟ್ಟೆಯಲ್ಲಿ ರಾಜಾರೋಷವಾಗಿ ಮದ್ಯವನ್ನು ನಿಗದಿಗಿಂತ ಹೆಚ್ಚು ಬೆಲೆಗೆ ಮಾರುತ್ತಿದ್ದರೂ ಅಬಕಾರಿ ಇಲಾಖೆ ಕ್ರಮಕ್ಕೆ ಮುಂದಾಗಿಲ್ಲ. ಇಷ್ಟೊಂದು ಬೆಲೆನಾ ಎಂದು ಕೇಳಿದರೆ ಬೇಕಿದ್ದರೆ ತಗೊಳ್ಳಿ, ಇಲ್ಲವೆಂದರೆ ಬಿಡಿ, ದೂರು ಕೋಡೋದಾದ್ರೆ ಕೊಡಿ ಎಂದು ಮದ್ಯ ಮಾರಾಟಗಾರರು ಗ್ರಾಹಕರಿಗೆ ದಬಾಯಿಸುತ್ತಿದ್ದಾರೆ ಎನ್ನಲಾಗಿದೆ.

ಮಾಮೂಲಿ: ಮದ್ಯದ ಅಂಗಡಿಗಳಲ್ಲಿ ಸರಕಾರ ವಿಧಿಸಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಲಾಗುತ್ತಿದ್ದು, ಕ್ರಮಕ್ಕೆ ಅಬಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮದ್ಯದ ಅಂಗಡಿ, ಬಾರ್‌ಗಳ ಮಾಲೀಕರ ಮೇಲೆ ಸೂಕ್ತ ಕ್ರಮವಾಗದೇ ಇರುವುದರಿಂದ ಹೆಚ್ಚಿನ ಬೆಲೆಗೆ ಮದ್ಯ ಮಾರುವುದು ನಿರಂತರವಾಗಿ ಮುಂದುವರಿದಿದೆ.

‘ಮದ್ಯದ ಅಂಗಡಿಗಳಲ್ಲಿ ಎಂಆರ್‌ಪಿ ಬೆಲೆಗಿಂತ ಹೆಚ್ಚಿನ ಬೆಲೆ ತಗೋಳ್ತಾರೆ. ಪ್ರಶ್ನೆ ಮಾಡಿದರೆ ನಾವು ಕೋಡೋದೆ ಇಷ್ಟಕ್ಕೆ, ಯಾರಿಗಾದ್ರೂ ಹೇಳಿ ಕೊಳ್ಳಿ, ದೂರಾದ್ರು ಕೊಡಿ, ಮನವಿನಾದ್ರು ಕೊಡಿ, ನಾವು ಇದೇ ಬೆಲೆಗೆ ಮಾರೋದು ಎಂದು ಗ್ರಾಹಕರಿಗೆ ಸಮಜಾಯಿಷಿ ಉತ್ತರ ನೀಡುವುದು ನಡೆದಿದೆ. ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕು’ ಎಂದು ಹೊಸಪೇಟೆಯ ಹಾಗೂ  ಜಿಲ್ಲೆಯ ಹಲವಾರು ತಾಲೋಕು ಹಾಗೂ ಹೋಬಳಿ ಮತ್ತು,ಮದ್ಯ ಮಾರಾಟ ಮಾಡುವ ಹಲವಾರು ಗ್ರಾಮಗಳ ಸಾರ್ವಜನಿಕರು,ರಾಷ್ಟ್ರೀಯ ಹೆದ್ದಾರಿಯ ಹಲವು ಪೆಟ್ಟಿಗೆ ಅಂಗಡಿಗಳಲ್ಲಿ ಏನು ಸಿಗುವುದೋ ಗೊತ್ತಿಲ್ಲ ಮದ್ಯ ಮಾತ್ರ ಸಿಗುವುದು ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮವನ್ನು ವಹಿಸಬೇಕು ಎಂದು ನೋವುಂಡ ಸಾರ್ವಜನಿಕರು ಅಸಮಾಧಾನ ತೋಡಿ ಕೊಂಡಿದ್ಧಾರೆ…

ಎಚ್ಚರಿಕೆ ಕನ್ನಡ ನ್ಯೂಸ್ ವರದಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend