ಮಾಜಿ ಸೈನಿಕರ ತಾಯಿಯ ಕೊಲೆಯ ಬಗ್ಗೆ ಮನೆಗೆ ಬೇಟೆ ನೀಡಿದ ಕಲ್ಯಾಣ ಕರ್ನಾಟಕ ಅರೆ ಸೇನೆ ಕ್ಷೇಮಾಭಿವೃದ್ಧಿ ಸಂಘಟನೆಯವರಿಗೆ ಸಿಂಧನೂರು ಗೆಳೆಯರ ಬಳಗದವರು…!!!

ಸಿಂಧನೂರು : ಇಂದು ನಗರದ ಪ್ರವಾಸಿ ಮಂದಿರಕ್ಕೆ ನಿಲೋಗಲ್ ಸೈನಿಕ ಅಮರೇಶ ತಾಯಿ ಕೊಲೆಯ ಕುರಿತು ಅವರ ಮನೆಗೆ ಭೇಟಿ ನೀಡಲು ಹೊರಟ ಕಲ್ಯಾಣ ಕರ್ನಾಟಕ ಅರೆ ಸೇನೆ ಕ್ಷೇಮಾಭಿವೃದ್ಧಿ ಸಂಘಟನೆಯವರಿಗೆ ಸಿಂಧನೂರು ಗೆಳೆಯರ ಬಳಗ ಸಂಘ ಮತ್ತು ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟ ಸಿಂಧನೂರು ವತಿಯಿಂದ ಕೊರಳಿಗೆ ಹೂವಿನ ಹಾರಗಳನ್ನು ಹಾಕುವುದರ ಮೂಲಕ ಅತ್ಯಂತ ಗೌರವದೊಂದಿಗೆ ಸ್ವಾಗತ ಮಾಡಿಕೊಳ್ಳಲಾಯಿತು.

ದಿ.14-2-2022 ರಂದು ಲಿಂಗಸೂಗೂರು ತಾಲೂಕು ನಿಲೋಗಲ್ ಗ್ರಾಮದ ಭಾರತದ ಸೈನಿಕ ಅಮರೇಶ ಅವರ ತಾಯಿ ಈರಮ್ಮಳ ಕೊಲೆಮಾಡಿದ ಆರೋಪಿ ಬಿಜೆಪಿಯ ಮುಖಂಡ ಶರಣಪ್ಪಗೌಡ ಹಾಗೂ 17 ಜನರ ವಿರುದ್ದ ಹಟ್ಟಿಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರಾಜಕೀಯ ಪ್ರಭಾವ ಬಳಸಿ ಶರಣಪ್ಪಗೌಡ ಹಾಗೂ ಪ್ರಮುಖ ಆರೋಪಿಗಳನ್ನು ಸರಕಾರ ಇದುವರೆಗೂ ಬಂಧಿಸಿರುವುದಿಲ್ಲ.ಭಾರತದ ಸೈನಿಕರನ್ನು ಹಗಲು ರಾತ್ರಿ ಬಣ್ಣಿಸುವವರು ತಾಯ್ನಾಡನ್ನು ಕಾಯುವ ಅಮರೇಶನ ತಾಯಿಯ ಸಾವಿಗೆ ನ್ಯಾಯ ಕೊಡಲು ತಯಾರಿಲ್ಲ. ಆದ್ದರಿಂದ,ಈ ಕೊಲೆಯನ್ನು ನಾವು ಉಗ್ರವಾಗಿ ಖಂಡಿಸಬೇಕಾಗಿದೆ.ಅಲ್ಲದೇ ಕೊಲೆಗಾರ ಶರಣಪ್ಪಗೌಡ ಬಸವರಾಜ ಬೆಂಚಮಟ್ಟಿ, ದೊಡ್ಡಪ್ಪ ಹಾಲಾಪೂರ ಮತ್ತಿತರರನ್ನು ಕೂಡಲೇ ಬಂಧಿಸುವಂತೆ ಸರಕಾರಕ್ಕೆ ಒತ್ತಾಯಿಸಬೇಕಾಗಿದೆ ಎಂದು ಕಲ್ಯಾಣ ಕರ್ನಾಟಕ ಮಾಜಿ,ಅರೆ ಸೇನೆ ಕ್ಷೇಮಾಭಿವೃದ್ಧಿ ಸಂಘಟನೆಯ ಗೌರವಾಧ್ಯಕ್ಷ ವಿರೂಪಾಕ್ಷಸ್ವಾಮಿ ಹಿರೇಮಠ, ಅಧ್ಯಕ್ಷರು ವೆಂಕಟೇಶರಾವ್, ಉಪಾಧ್ಯಕ್ಷ ಹನುಮಂತ ರೆಡ್ಡಿ,ಕಾರ್ಯದರ್ಶಿ ಪ್ರಹ್ಲಾದ ರೆಡ್ಡಿ ಹೇಳಿದರು.

ಸ್ವಾಗತ ಸಭೆಯಲ್ಲಿ ಹಾಜರಿದ್ದ ಗೆಳೆಯರ ಬಳಗ ಸಂಘದ ‌ ಕಾರ್ಯದರ್ಶಿವಿಜಯಕುಮಾರ್,ಹಾಗೂ ಬಳಗದ ಅಧ್ಯಕ್ಷರಾದ ಸೈಯದ್ ಬಂದೇನವಾಜ, ಮತ್ತು ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟದ ಸಂಚಾಲಕರಾದ ಎಂ.ಗಂಗಾಧರ, ಹನುಮಂತಪ್ಪ ಹಂಪನಾಳ, ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಂಪಯ್ಯ ಸಾಲಿಮಠ , ಹೆಚ್.ಎನ್.ಬಡಿಗೇರ, ರಾಮಣ್ಣ ಉಪನ್ಯಾಸಕರು, ಜಗ್ಗೇಶ ಬಿ.ಎಸ್ಪಿ, ನಿಲೋಗಲ್ ಕೊಲೆಯನ್ನು ಖಂಡಿಸಿ ಮಾತನಾಡಿದರು.

ಈ ಸಂಧರ್ಭದಲ್ಲಿ ಸಿಂಧನೂರು ಗೆಳೆಯರ ಬಳಗದ ಸಹ ಕಾರ್ಯದರ್ಶಿ ವೀರೇಶ್, ಸಾಮಾಜಿಕ ಜಾಲತಾಣದ ಮುಖ್ಯಸ್ಥ ಸುರಂಜನ್ ಕುಮಾರ್, ಅಂಬಣ್ಣ ವಿ9, ಹನುಮಂತ ಸುಕಾಲಪೇಟೆ , ಕಲ್ಯಾಣ ಕರ್ನಾಟಕ ಅರೆ ಸೇನೆ ಕ್ಷೇಮಾಭಿವೃದ್ಧಿ ಸಂಘಟನೆ ಸದಸ್ಯರಾದ ಶ್ರೀರಾಮಮೂರ್ತಿ, ರಾಜಾಸಿಂಹ, ಲಕ್ಷ್ಮೀಪತಿ, ಲಿಂಗಣ್ಣ ಸೇರಿದಂತೆ ಇತರರು ಪಾಲ್ಗೊಂಡಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend