ಹೂವಿನಹಡಗಲಿ :-ಈ ಬಾರೀಯ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಭವಿಷ್ಯ ವಾಣಿಯ ವಿವರ ಇಲ್ಲಿದೆ ನೋಡಿ…!!!

ವಿಜಯನಗರ…ಇಡೀ ರಾಜ್ಯವೇ ಭರತ ಹುಣ್ಣಿಮೆ ಬಂತೆಂದರೆ ಎಲ್ಲಾ ಚಿತ್ತ ಶ್ರೀ ಮೈಲಾರ ಕ್ಷೇತ್ರದ ಮೈಲಾರ ಲಿಂಗೇಶ್ವರ ಸ್ವಾಮಿಯ ಭವಿಷ್ಯ ವಾಣಿಯ ಕಡೆ ಆತಂಕದ ನಡುವೆಯೋ ಖುಷಿಯಾಗಿ ಸ್ವಾಮಿಯ ದರ್ಶನವನ್ನು ಪಡೆಯುತ್ತಾರೆ ಅದಿರಲಿ ಬಿಡಿ ಈ ಬಾರಿ ಕೂಡ ಕೊವಿಡ್ ನಿಯಮಗಳ ಕಟ್ಟಳೆಯಲ್ಲೇ ಶ್ರೀ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವ ಸರಳವಾಗಿ ನಡೆಯಿತು. ತೆಂಕಣ ಮರಡಿಯಲ್ಲಿ ಬಿಲ್ಲನ್ನ ಏರಿದ ಗೊರವಪ್ಪ ರಾಮಪ್ಪಜ್ಜ ”ಮಳೆ ಬೆಳೆ ಸಂಪಾಯಿತಲೇ ಪರಾಕ್” ಎಂದು ವರ್ಷದ ಭವಿಷ್ಯವಾಣಿಯನ್ನ ನುಡಿದಿದ್ದಾರೆ.ಗೊರವಪ್ಪ ರಾಮಪ್ಪ ನುಡಿಯುವ ಈ ಭವಿಷ್ಯವಾಣಿಯನ್ನ ಬಹುತೇಕರು ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಈ ಬಾರಿಯ ಕಾರ್ಣಿಕೋತ್ಸವದ ಭವಿಷ್ಯ ನುಡಿ ರೈತರಿಗೆ ಹೆಚ್ಚು ಖುಷಿ ನೀಡಿದೆ ಎನ್ನಲಾಗುತ್ತಿದೆ.ಮುಂದಿನ ವರ್ಷ ಮಳೆ ಬೆಳೆ ಸಂಪಾಗಿ ರೈತರು ಹೆಚ್ಚು ಸಂತೋಷದಿಂದ ಇರುತ್ತಾರೆ ಎಂದು ಇಲ್ಲಿನ ದೇವಸ್ಥಾನದ ಪ್ರದಾನ ಅರ್ಚಕರು ಮತ್ತು ಧರ್ಮ ದರ್ಶಿಗಳು ಆದ ವೆಂಕಪ್ಪಯ್ಯ ಒಡೆಯರ್ ವ್ಯಾಖ್ಯಾನಿಸಿದ್ದಾರೆ.ಕಳೆದ ಎರಡು ವರ್ಷಗಳಿಂದ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ನಡೆಯುವ ಈ ಕಾರ್ಣಿಕೋತ್ಸವಕ್ಕೆ ಕೊರೊನ ಮಹಾಮಾರಿ ಕರಿ ನೆರಳು ಆವರಿಸಿದೆ. ಅದರ ಪರಿಣಾಮ ಕಾರ್ಣಿಕೋತ್ಸವವನ್ನ ಸರಳವಾಗಿ ಆಚರಿಸುವ ಮೂಲಕ ಸಂಪ್ರದಾಯ ಮುಂದುವರೆಸಿಕೊಂಡು ಬರಲಾಗುತ್ತಿದೆ.

ಇಂದು ಕೂಡ ಕೊರೋನ ನಿಯಮ ಪಾಲನೆ ಮಾಡುವ ಮೂಲಕ ಕಾರ್ಣಿಕೋತ್ಸವವನ್ನ ವಿಜಯನಗರ ಜಿಲ್ಲಾಡಳಿತ ನಡೆಸಿಕೊಟ್ಟಿದೆ.  ಮೈಲಾರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲಿ ಬ್ಯಾಸರಿಕೇಡ್ ಗಳನ್ನ ಅಳವಡಿಸುವ‌ ಮೂಲಕ ಪರ ಸ್ಥಳಗಳಿಂದ ಬರುವ ಪ್ರಯಾಣಿಕರ ವಾಹನಗಳಿಗೆ ಅವಕಾಶ ನೀಡಿರಲಿಲ್ಲ. ಕೇವಲ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದ್ದರೂ ಲಕ್ಷಾಂತರ ಭಕ್ತ ಸಮೂಹ ಕಾರ್ಣಿಕೋತ್ಸವದಲ್ಲಿ‌ ಬಾಗಿಯಾಗಿತ್ತು,

ಇನ್ನು ಶ್ರೀ ಮೈಲಾರೇಶ್ವರನ ದೇವಸ್ಥಾನಕ್ಕೆ ಭಕ್ತರಿಗೆ ಮೊದಲು ಪ್ರವೇಶ ಕಲ್ಪಿಸದೆ ಜಾತ್ರೆ ಮಾಡಲು ಜಿಲ್ಲಾಡಳಿತ ಮುಂದಾಗಿತ್ತು, ಆದರೆ ಶ್ರೀ ರಾಮಸೇನೆಯ ಜಿಲ್ಲಾಧ್ಯಕ್ಷ ಸಂಜೀವ್ ಮರಡಿ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ ಆದ ನಂತರ ದೇವಸ್ಥಾನಕ್ಕೆ ಭಕ್ತರಿಗೆ ಪ್ರವೇಶ ನೀಡುವ ಮೂಲಕ ಕೊವಿಡ್ ನಿಯಮ ಪಾಲನೆ ಮಾಡಲು ಜಿಲ್ಲಾಡಳಿತ ಭಕ್ತರಿಗೆ ಸೂಚಿಸಿತು. ಒಟ್ಟಿನಲ್ಲಿ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವ ಎಂದರೆ ರಾಜ್ಯದಲ್ಲೇ ಅತಿ ಹೆಚ್ಚು ಜನ ಸೇರುವ ಧಾರ್ಮಿಕ ಉತ್ಸವ ಇದಾಗಿದ್ದು, ಇಂತಾ ಉತ್ಸವಕ್ಕೆ ಕಳೆದ ಎರಡು ವರ್ಷಗಳಿಂದ ಕೊರೊನ ಮಹಾಮಾರಿ ಕಂಟಕವಾಗಿ ಪರಿಣಮಿಸಿದೆ. ಹೀಗಿದ್ದರು ಅನೇಕ ಭಕ್ತರು ಕಾಲ್ನಡಿಗೆಯಲ್ಲಿ ಮೈಲಾರ ತಲುಪಿ ಕಾರ್ಣಿಕೋತ್ಸವದಲ್ಲಿ ಭಾಗಿಯಾಗಿ ತಮ್ಮ ಭಕ್ತಿ ಪ್ರದರ್ಶನ ಮಾಡುತಿದ್ದಾರೆ…

ವರದಿ. ಅಜಯ್, ಚ, ಹೂವಿನಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend