ಸಿಂಧನೂರು : ನಗರದ ಸರಕಾರಿ ಪದವಿ ಕಾಲೇಜು ಮೈದಾನ ಕುಷ್ಟಗಿ ರಸ್ತೆ ಸಿಂಧನೂರಿನಲ್ಲಿ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥವಾಗಿ ಚೈತ್ರಾ ಸಿಸಿ ಗೆಳೆಯರ ಬಳಗ ವತಿಯಿಂದ ಸಿಂಧನೂರು ಪ್ರೀಮಿಯರ್ ಲೀಗ್ – 2022 ನಾಲ್ಕನೇ ಆವೃತ್ತಿ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಭಿಷೇಕ್ ನಾಡಗೌಡ ರವರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿ ಹಿಂದೆ ಕ್ರೀಡೆಗಳಿಗೆ ಬೆಲೆ ಇರಲಿಲ್ಲ ಇಂದು ಎಲ್ಲರಿಗೂ ಮನವರಿಕೆಯಾಗಿದೆ.ಆದ್ದರಿಂದ ಆಡುವವರಿಗೆ ಪ್ರೋತ್ಸಾಹಿಸೋಣ.ಆಟ ಆಡುವವರಿಗೆ ಪ್ರೋತ್ಸಾಹಿಸುವ ಶಕ್ತಿ ಚೈತ್ರಾ ಸಿಸಿ ಬಳಗಕ್ಕೆ ಇದೆ. ಆಟಗಾರರಿಗೆ ಮುಂದಿನ ದಿನಗಳಲ್ಲಿ ತರಬೇತಿ ನೀಡಲು ಏನು ಸಹಕಾರ ಬೇಕು ಅದನ್ನು ನೀಡಲು ನಾವು ಸದಾ ಸಿದ್ದ. ಕ್ರೀಡಾಪಟುಗಳು ತಮ್ಮ ಕ್ರೀಡೆಯನ್ನು ಉತ್ತಮ ಕ್ರೀಡಾಮನೋಭಾವದಿಂದ ಆಡಿದಾಗ ಮಾತ್ರ ಸಾರ್ಥಕತೆ ಹೊಂದುತ್ತದೆ.ಮುಂಬರುವ ದಿನಗಳಲ್ಲಿ ನಮ್ಮ ಸಿಂಧನೂರು ತಾಲೂಕಿನಲ್ಲಿ ಅತ್ಯಂತ ಸೂಕ್ತ ಪ್ರತಿಭೆಯನ್ನು ಗುರುತಿಸುವ ಕೆಲಸ ಚೈತ್ರಾ ಸಿಸಿ ಮಾಡಲಿ ಅಂತವರಿಗೆ ನಮ್ಮ ಸಹಕಾರ ಯಾವಾಗಲೂ ಇರುತ್ತದೆ. ಕ್ರೀಡಾಪಟುಗಳಿಗೆ ಶುಭಾಶಯಗಳನ್ನು ಕೋರಿ ಅವರು ಮಾತನಾಡಿದರು.
ನಂತರ ಮಾತನಾಡಿದ ಬೀಮೇಶ್ ಕವಿತಾಳ ಕ್ರೀಡೆಗಳಲ್ಲಿ ಭಾಗವಸಿದ ಎಲ್ಲಾ ಕ್ರೀಡಾಪಟುಗಳು ಬಹುಮಾನ ಗೆಲ್ಲಲು ಸಾಧ್ಯವಿಲ್ಲ.ಕೆಲವರು ಸೋಲಲೇಬೇಕು ಕೆಲವರು ಗೆಲ್ಲಲೇಬೇಕು. ಆಟವನ್ನು ಮಾತ್ರ ಅಣ್ಣತಮ್ಮಂದಿರಾಗಿ ಇರಬೇಕು. ಆಟ ಹಾಡುವಾಗ ದ್ವೇಷ ಅಸೂಯೆ ಪಡುವ ಹಾಗೆ ಆಗಬಾರದು. ಸ್ನೇಹ ಸೌಹಾರ್ದತೆಯನ್ನು ಬೆಳೆಸುವ ಕ್ರೀಡೆಯಾಗಲಿ,ಚೈತ್ರಾ ಸಿಸಿ ಗೆಳೆಯರ ಬಳಗದ ವತಿಯಿಂದ ನಾಲ್ಕನೇ ಆವೃತ್ತಿಯಲ್ಲಿ ಆಟವನ್ನು ಆಡಿಸುತ್ತಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯಲಿ ಮತ್ತು ಕ್ರೀಡಾಪಟುಗಳು ಹೆಚ್ಚಿನ ರೀತಿಯಲ್ಲಿ ತಾಲೂಕಿನಾಧ್ಯಂತ ಬೆಳೆಯಲಿ ಎಂದುಹಾರೈಸಿದರು.
ಕ್ರಿಕೆಟ್ ಟುರ್ನಾಮೆಂಟ್ ಬಹುಮಾನ ವಿತರಕರು: ಸಿಂಧನೂರು ಕ್ಷೇತ್ರದ ಶಾಸಕ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ ರವರು ಪ್ರಥಮ ಬಹುಮಾನ 70 ಸಾವಿರ, ಹಾಗೂ 1 ಟ್ರೋಫಿ, ಮಸ್ಕಿ ಕ್ಷೇತ್ರದ ಶಾಸಕ ಆರ್. ಬಸನಗೌಡ ತುರ್ವಿಹಾಳ ರವರು ದ್ವಿತೀಯ ಬಹುಮಾನ 50 ಸಾವಿರ ಹಾಗೂ 1 ಟ್ರೋಫಿ, ತೃತೀಯ ಬಹುಮಾನ ವೀರೇಶ್ ಬಾವಿಮನಿ 20 ಸಾವಿರ 1 ಟ್ರೋಫಿ, ಚತುರ್ಥ ಬಹುಮಾನ ಸುರೇಶ್ ಹಚ್ಚೋಳ್ಳಿ 10ಸಾವಿರ 1ಟ್ರೋಫಿ. ಕ್ರೀಡಾಪಟುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮುರ್ತಜಾಹುಸೇನ್, ಮ್ಯಾನ್ ಆಫ್ ದಿ ಸೀರಿಜ್ ನೂರ್ ಪಟೇಲ್ ಹಟ್ಟಿ, ಬೇಷ್ಟ ಬ್ಯಾಟ್ಸ್ಮನ್ ಮಂಜುನಾಥ ಎತ್ತಿನಮನಿ, ಪ್ರತಿ ಪಂದ್ಯದ ಪುರೋಶೋತಮ್ ಅಬ್ದುಲ್ ಹುಸೇನ್, ಬೇಸ್ಟ ಬಾಲರ್ 8ಗ್ರಾಂ ಬೆಳ್ಳಿ ಕಡಗ ನರೇಶ್ ಬಂಡಾರಿ, ಬೆಸ್ಟ್ ವಿಕೆಟ್ ಕೀಪರ್ 7ಗ್ರಾಂ ಬೆಳ್ಳಿ ಕಡಗ ಬಸವರಾಜ್ ನಿಪ್ಪಾಣಿ, ಟೂರ್ನಮೆಂಟಿಗೆ ಬಾಲ್ ಕೊಡುಗೆ ರಮೇಶ ಯಾದವ, ಮೊದಲ ಹ್ಯಾಟ್ರಿಕ್ ವಿಕೆಟ್ 6 ಗ್ರಾಂ ಬೆಳ್ಳಿ ಕಡಗ ಸಲ್ಮಾನ್ ಎಕೆ, ವೇಗದ ಅರ್ಧಶತಕ 5ಗ್ರಾಂ ಬೆಳ್ಳಿ ಕಡಗ ಶ್ರೀನಿವಾಸ ಮುರಾರಿ, ಉತ್ತಮ ಕ್ಷೇತ್ರ ರಕ್ಷಣೆ 5ಗ್ರಾಂ ಬೆಳ್ಳಿ ಕಡಗ ಶಿವು ಎಸ್. ಆರ್.ಕೆ , ಉತ್ತಮ ಆಟಗಾರ 4 ಗ್ರಾಂ ಬೆಳ್ಳಿ ಕಡಗ ರವಿ ಉಪ್ಪಾರ, ಅತಿ ಹೆಚ್ಚು ರನ್ ಗಳಿಸಿದ ಆಟಗಾರ ವಿತರಣೆ ದೇವು ನಾಯಕ, ನೆನಪಿನ ಕಾಣಿಕೆ ಕೊಡುಗೆ ಸಿದ್ದಿಕಿ, ಉತ್ತಮ ಆಟಗಾರ ರಾಘು ಟೂರ್ನಮೆಂಟ್ ಉತ್ತಮ ಆಟಗಾರ ಪ್ರಶಸ್ತಿ
ಈ ಸಂದರ್ಭದಲ್ಲಿ ಎಸ್.ಪಿ. ಎಲ್.ತಾಲೂಕು ಅಧ್ಯಕ್ಷರಾದ ನಾಗರಾಜ ಗಸ್ತಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯೂತ್ ಕ್ಲಬ್ ಅಧ್ಯಕ್ಷ ಸುರೇಶ್ ಹಚ್ಚೊಳ್ಳಿ, ರಾಮನಗೌಡ, ಮುರ್ತುಜಾ ಹುಸೇನ್ ನಗರಸಭೆ ಉಪಾಧ್ಯಕ್ಷರು, ವಿರೇಶ್ ಬಾವಿಮನಿ ಕರವೇ (ಪ್ರ.ಶೆಟ್ಟಿ ಬಣ) ತಾಲೂಕ ಅಧ್ಯಕ್ಷರು,ಅಬ್ದುಲ್ ಹುಸೇನ್ ಡೈಮಂಡ್ ಜುವೆಲರ್ಸ್ ಸಿಂಧನೂರು,ಕ್ರಿಡಾಪಟುಗಳು ಇನ್ನೂ ಮುಂತಾದವರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
