ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಸಂಘಟನೆ ಒಕ್ಕೂಟದಿಂದ ವಿಧಾನಸೌದ, ಹೈಕೋರ್ಟ್ ಚಲೋ ಹೋರಾಟದಲ್ಲಿ ಪಾಲ್ಗೊಳ್ಳಲು ಕರೆ.
ಸಿಂಧನೂರು : ಜನವರಿ 26,2022 ರಂದು ರಾಯಚೂರು ನ್ಯಾಯಾಲಯದ ಧ್ವಜ ಸ್ತಂಬಕ್ಕೆ ಇಡಲಾಗಿದ್ದ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರವರ ಭಾವಚಿತ್ರವನ್ನು ಒತ್ತಾಯ ಪೂರಕವಾಗಿ ತೆಗೆಸಿ ಹಾಕಿದ ನಂತರವೆ ಧ್ವಜಾರೋಹಣ ಮಾಡಿದ, ಜಿಲ್ಲಾ ನ್ಯಾಯಧೀಶ ಮಲ್ಲಿಕಾರ್ಜುನಗೌಡರ ಮೇಲೆ ಇದುವರೆಗೂ ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಈ ರಾಷ್ಟೀಯ ಅಪಮಾನ ಅನ್ಯಾಯ ಹಾಗೂ ಅಗೌರವದ ವಿರುದ್ದ ರಾಯಚೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲಿ ಭಾರಿ ಪ್ರಮಾಣದ ಪ್ರತಿಭಟನೆ ಮುಂದುವರೆದಿದ್ದರೂ, ರಾಜ್ಯ ಸರಕಾರ ಅದರಲ್ಲೂ ಮುಖ್ಯಮಂತ್ರಿಗಳು, ಕಾನೂನು ಮಂತ್ರಿ ಹಾಗೂ ಸಮಾಜ ಕಲ್ಯಾಣ ಮಂತ್ರಿಗಳು ಸೌಜನ್ಯಕ್ಕಾದರೂ ಈಕೃತ್ಯವನ್ನು ಖಂಡಿಸಿಲ್ಲ.ಅದಕ್ಕಾಗಿ ರಾಜ್ಯದಾನಿ ಬೆಂಗಳೂರಿನಲ್ಲಿ ದಿ. 19-2-2022ರಂದು ವಿಧಾನಸೌದ, ಹೈಕೋರ್ಟ್ ಚಲೋ ಹೋರಾಟದಲ್ಲಿ ಪಾಲ್ಗೊಳ್ಳಲು ಬುದ್ದಿಜೀವಿಗಳು, ಪ್ರಗತಿಪರ ಚಿಂತಕರು,ಬಾಬಾ ಸಾಹೇಬ ಅನುಯಾಯಿಗಳು, ಭಾಗವಹಿಸಲು ದಲಿತ ಹಿಂದುಳಿದ ಅಲ್ಪಸಂಖ್ಯಾತ ಒಕ್ಕೂಟ ಮನವಿ ಮಾಡಿದರು.
ರಾಯಚೂರು ಅಂಬೇಡ್ಕರ್ ಅಪಮಾನ ಪ್ರಕರಣವನ್ನು ನಾವು ಜಾಗೂರಕತೆಯಿಂದ ಅರ್ಥಮಾಡಿಕೊಳ್ಳಬೇಕಾಗಿದೆ. ಈಡೀ ರಾಜ್ಯವೇ ಆಗ್ರಹಿಸುತ್ತಿದ್ದರೂ ಅಂಬೇಡ್ಕರವರಿಗೆ ಮಾಡಲಾದ ಅಪಚಾರಕ್ಕೆ ಈಗಲಾದರೂ ಶಿಕ್ಷೆ ಕೊಡುವಂತೆ ನಾವು ಆಗ್ರಹಿಸಬೇಕಾಗಿದೆ. ಕೂಡಲೇ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ನಾವು ಫೆಬ್ರವರಿ19 ರಂದು ರಾಜ್ಯದ ರಾಜಧಾನಿಯಾದ ಬೆಂಗಳೂರು ” ವಿಧಾನಸೌಧ-ಹೈಕೋರ್ಟ್ ಚಲೋ” ಹೋರಾಟಕ್ಕೆ ತಾಲೂಕಿನಿಂದ 40 ರಿಂದ 50 ಕ್ರಷರ್ ಗಳಿಂದ ಹೊರಟಿದ್ದೇವೆ, ಈ ಮಹತ್ವದ ರಾಷ್ಟ್ರೀಯ ಸಂವಿಧಾನಾತ್ಮಕ ಹೋರಾಟಕ್ಕೆ ಎಲ್ಲಾ ಸಮುದಾಯದ ಹಾಗೂ ಎಲ್ಲಾ ವರ್ಗದ ಜನರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲಿಸಿಬೇಕೆಂದು ಪತ್ರಿಕೆ ಹೇಳಿಕೆ ಮುಖಾಂತರ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಸಂಘಟನೆಗಳ ಒಕ್ಕೂಟ ಮನವಿ ಮಾಡಿದರು. ಈ ಸಂದರ್ಭದಲ್ಲಿ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಒಕ್ಕೂಟದ ಮುಖಂಡರು ಇದ್ದರು…

ವರದಿ. ದುಗ್ಗಪ್ಪ ಸಿಂದನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
