ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು
ಶ್ರೀ ಸಂತ ಸೇವಾಲಾಲ್ ರವರ282 ನೇಯ ಪುಣ್ಯ ಜಯಂತಿ.
ಬಂಜಾರ ಬುಡಕಟ್ಟು ಸಮುದಾಯದ ಆಧ್ಯಾತ್ಮಿಕ ಗುರುಗಳೆಂದೇ ಗುರುತಿಸಲ್ಪಡುವ ಶ್ರೀ ಸಂತ ಸೇವಾಲಾಲ್ ಅವರ 282 ನೇ ಪುಣ್ಯ ಜಯಂತಿಯನ್ನು ಸ.ಹಿ.ಪ್ರಾ.ಶಾಲೆ.ಹಿರೇಕುಂಬಳಗುಂಟೆ ಯಲ್ಲಿ ಆಚರಿಸಲಾಯಿತು. ಹರಪ್ಪ ನಾಗರಿಕತೆಯಿಂದಲೂ ಬೆಳೆದುಬಂದ ಬಂಜಾರ ಜನಾಂಗವು ಸಾವಿರಾರು ವರ್ಷಗಳಿಂದ ಗುಡ್ಡಗಾಡುಗಳಲ್ಲಿ,ಅರಣ್ಯಪ್ರದೇಶಗಳಲ್ಲಿ ವಾಸಿಸುತ್ತಿದ್ದು,ಗ್ರಾಮ,ನಗರ ಜೀವನಗಳಿಂದ ದೂರ ಉಳಿದು ತಮ್ಮದೇ ಶೈಲಿಯಲ್ಲಿ ಜೀವನ ನೆಡೆಸುತ್ತಿದ್ದರು.ಇಂತಹ ಸಮುದಾಯದ ಉದ್ಧಾರಕ್ಕಾಗಿ, ಸಹೋದರತ್ವದ,ಬ್ರಾತೃತ್ವದ ಸಮಾಜವನ್ನು ನಿರ್ಮಿಸಲು ಸಂತ ಸೇವಾಲಾಲ್ ರವರು ಶ್ರಮಿಸಿದರು ಎಂಬುದನ್ನು ಶ್ರೀ ಬಸವರಾಜ ಶಿಕ್ಷಕರು ಮಕ್ಕಳಿಗೆ ತಿಳಿಯ ಪಡಿಸಿದರು.ಈ ಕಾರ್ಯಕ್ರಮವು ಸರಳವಾಗಿದ್ದು ಮುಖ್ಯಶಿಕ್ಷಕರಾದ ಶಾಮಸುಂದರ ಸಪಾರೆ,ಮಂಜುನಾಥ್, ಹನುಮಂತರಡ್ಡಿ, ರಫೀಕ್, ರೂಪ,ಶಾರದ,ಹಾಗೂ ಮಕ್ಕಳು ಉಪಸ್ಥಿತರಿದ್ದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
