ಕೊಲೆಗೈದ ಆರೋಪಿಗಳನ್ನು ಬಂಧಿಸಲು ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟ ಆಗ್ರಹ…!!!

ಕೊಲೆಗೈದ ಆರೋಪಿಗಳನ್ನು ಬಂಧಿಸಲು ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟ ಆಗ್ರಹ.

ಸಿಂಧನೂರು : ಲಿಂಗಸಗೂರು ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ಚರಂಡಿ ಸಮಸ್ಯೆಯ ನಿಮಿತ್ಯ ಜಗಳವಾಗಿ, ಸೈನಿಕನಾದ, ಅಮರೇಶರವರ ತಾಯಿಯಾದ ಈರಮ್ಮ ಉಪ್ಪಾರ ಎಂಬುವ ವೃದ್ಧೆಯನ್ನು ಅದೇ ಗ್ರಾಮದ ಬಿಜೆಪಿ ಮುಖಂಡ ಶರಣೇಗೌಡ ಎಂಬುವವನು ಅಕ್ರಮ ಗುಂಪು ಕಟ್ಟಿಕೊಂಡು ಈರಮ್ಮನನ್ನು ಕೊಲೆ ಮಾಡಲಾಗಿದೆ. ಈ ಕೂಡಲೇ ಆರೋಪಿಗಳನ್ನು ಬಂದಿಸಬೇಕು ಅವರ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ನಗರದ ಮಿನಿವಿಧಾನಸೌಧದಲ್ಲಿ ದಲಿತ,ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟ ವತಿಯಿಂದ ರಾಜ್ಯಪಾಲರಿಗೆ
ಹಾಗೂ ಗೃಹಮಂತ್ರಿಗಳಿಗೆ ತಹಶೀಲ್ದಾರ ಮುಖಾಂತರ ಮನವಿ ಪತ್ರ ಸಲ್ಲಿಸಿದರು.

ಸಂಚಾಲಕ ಎಂ ಗಂಗಾಧರ್ ಮಾತನಾಡಿ ಕೃತ್ಯದಲ್ಲಿ ಆರೋಪಿತರ ಪರವಾಗಿ, ಮಾಜಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷ ಮಾನಪ್ಪ ವಜ್ಜಲ್ ಅವರು ರಕ್ಷಣೆಗೆ ನಿಂತಿರುವುದು ನೋಡಿದರೆ, ಯೋಧನ ಮೇಲೆ ಹಲ್ಲ್ಯೆಮಾಡಿ, ಅವರ ತಾಯಿಯು ಕೈಮುಗಿದು ಸೆರಗೊಡ್ಡಿ ಬೇಡಿಕೊಂಡರು ಬಿಡದೆ, ಕಲ್ಲು ಮನಸಿನ ಕಟುಕರು ಬಿಡದೇ ಮಹಾತಾಯಿಯ ಎದೆಗೆ ಒದ್ದು ತುಳಿದು ಕೊಲೆ ಮಾಡಿದ್ದಾರೆ. ಕರ್ನಾಟಕ ರಾಜ್ಯವು ಉತ್ತರ ಪ್ರದೇಶವಾಗುತ್ತಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ,ಹತ್ಯೆ,ಅತ್ಯಾಚಾರ, ದಬ್ಬಾಳಿಕೆಗಳು ಸರಣಿಯಾಗುತ್ತಿವೆ. ಬಿಜೆಪಿ ಪಕ್ಷ ಕೊಲೆಗಡುಕರ ಪಕ್ಷವಾಗಿ, ಮಾರ್ಪಡುತ್ತಿರುವುದಕ್ಕೆ ನಿಲೋಗಲ್‌ನಲ್ಲಿ ನಡೆದಂತ ಕೊಲೆಯೇ ಪ್ರತ್ಯಕ್ಷ ಸಾಕ್ಷಿಯಾಗಿದೆ. ಮಾತು ಮಾತಿಗೂ ದೇಶಪ್ರೇಮದ ಬಗ್ಗೆ ಮಾತನಾಡುತ್ತಿರುವ ಬಿಜೆಪಿ ಮುಖಂಡರು ಈ ದೇಶದ ರಕ್ಷಣೆಗಾಗಿ,ತನ್ನ ಕುಟುಂಬವನ್ನೇ ಲೆಕ್ಕಿಸದೆ ಭಾರತವೇ ನನ್ನ ಕುಟುಂಬವೆಂದು ಹೋರಾಡಿ ಸೈನಿಕನಾಗಿ ಕಾರ್ಯನಿರ್ವಹಿಸುತ್ತಿರುವ ಅಮರೇಶನ ತಾಯಿಯು ಈ ಬಿಜೆಪಿ ಮುಖಂಡರಿಂದ ಹಲ್ಲ್ಯೆಗೊಳಗಾಗಿ, ತನ್ನ ತಾಯಿಯನ್ನೇ ಕಳೆದುಕೊಂಡ ವಿಷಯ ಹೃದಯ ವಿದ್ರಾವಕ ಘಟನೆಯು ದೇಶದ ಜನತೆ ತಲೆ ತಗ್ಗಿಸುವಂತ ವಿಚಾರವಾಗಿದೆ.ಈ ಕುರಿತು ಹಟ್ಟಿ ಪೋಲಿಸ್ ಠಾಣೆಗೆ ದೂರು ನೀಡಲು ಹೋದರೂ ಕೂಡಾ ದೂರನ್ನು ತೆಗೆದುಕೊಳ್ಳುವುದಕ್ಕೆ ಮೀನಾಮೇಷ ಎಣಿಸಿದ್ದನ್ನು ನಮ್ಮ ಒಕ್ಕೂಟವು ಉಗ್ರವಾಗಿ ಖಂಡಿಸುತ್ತದೆ. ಮದ್ಯಾಹ್ನ 2 ಗಂಟೆಯಿಂದ ಶವವಿಟ್ಟು ಪ್ರತಿಭಟನೆ ಮಾಡಿದರು ಸಹ ಪೋಲಿಸರು ರಾಜಕೀಯ ಒತ್ತಡದಿಂದ ದೂರನ್ನು ದಾಖಲಿಸಲು ಪೋಲಿಸರು ಹಿಂದೆ-ಮುಂದೆ ನೋಡಿದರು. ಕೊನೆಗೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದನ್ನು ಪರಿಗಣಿಸಿದ ಪೋಲಿಸರು ಕೊನೆಗೆ ರಾತ್ರಿ 8 ಗಂಟೆಗೆ ದೂರನ್ನು 18 ಜನರ ಮೇಲೆ ದಾಖಲಿಸಿಕೊಂಡರು. ಆರೋಪಿಗಳು ಪರಾರಿಯಾಗಿದ್ದು, ಪೋಲಿಸರು ಇಬ್ಬರನ್ನು ಬಂಧಿಸಿದ್ದು ಉಳಿದವರನ್ನು ಕೂಡಲೇ ಬಂಧಿಸಬೇಕು.ಬಿಜೆಪಿಯ ಮುಖಂಡ ಶರಣೇಗೌಡ ಹಾಗೂ ಅಕ್ರಮ ಕೂಟ ಕಟ್ಟಿಕೊಂಡು ಬಂದು ಈರಮ್ಮನನ್ನು ಕೊಲೆಗೈದ ಆರೋಪಿಗಳನ್ನು ಕೂಡಲೇ ಬಂಧಿಸಿ, ಪರಿಹಾರವಾಗಿ ಈರಮ್ಮಳ ಕುಟುಂಬಕ್ಕೆ ಸರಕಾರ 1 ಕೋಟಿ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಸಂಚಾಲಕರಾದ,ಎಂ.ಗಂಗಾಧರ,ವಿಜಯಕುಮಾರ,ಹನುಮಂತಪ್ಪ ಹಂಪನಾಳ, ಭೀಮೇಶ ಕವಿತಾಳ, ಮಾಬುಸಾಬ ಬೆಳ್ಳಟ್ಟಿ ಮತ್ತು ಹುಲುಗಪ್ಪ ಬಾಂಬೆ ದೀನಸಮುದ್ರ, ಗುರುರಾಜ ಮುಕ್ಕುಂದ, ಯಲ್ಲಪ್ಪ ಗೋಮರ್ಸಿ ಸೇರಿದಂತೆ ಇತರರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend