ಕಲಬುರಗಿ:ಹಿಜಾಬ್ ಧರಿಸಿ ವಿಧಾನಸೌಧಕ್ಕೆ ಹೋಗುತ್ತೇನೆ ತಾಕತ್ತಿದ್ರೆ ತಡಿರಿ ಎಂಬ ಶಾಸಕಿ ಖನೀಜ್ ಫಾತಿಮಾ ಹೇಳಿಕೆಗೆ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ, ಆಂದೋಲ ಮಠ ಸಿದ್ದಲಿಂಗ ಸ್ವಾಮೀಜಿ ಕಿಡಿಕಾರಿದ್ದಾರೆ.
ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಕೇಸರಿ ಶಾಲು ಧರಿಸಿ ನಗರದ ಎಸ್ ವಿಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದ ನೂರಾರು ಜನ ವಿದ್ಯಾರ್ಥಿಗಳು, ಬೇಡವೇ ಬೇಡ ಹಿಜಾಬ್ ( ಬುರ್ಖಾ) ಬೇಡ ಎಂದು ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಆಂದೋಲ ಶ್ರೀ, ಕೋಮುಗಲಭೆ ಕೆರಳಿಸುವಂತಹ ಶಾಸಕಿ ಖನೀಜ್ ಫಾತೀಮಾ ಅವರ ಮತ್ತೊಂದು ಮುಖ ಅನಾವರಣವಾಗಿದೆ ಎಂದು ವಾಗ್ದಾಳಿ ನಡೆಸಿದರು. ಇಷ್ಟು ದಿವಸ ಶಾಸಕಿ ಫಾತೀಮಾ ಅವರು ವಿಧಾನಸೌದಕ್ಕೆ ಹಾಗೆ ಹೋಗಿದ್ರ. ಚೂಡಿದಾರ ಧರಿಸಿ ಹೋಗಿದ್ರ, ಅಥವ ಸೀರೆ ಧರಿಸಿಕೊಂಡು ಹೋಗಿದ್ರ.? ಎಂದು ವಿವಾದಾತ್ಮಕ ಪ್ರಶ್ನೆ ಮಾಡಿದ್ದಾರೆ.
ಸರ್ಕಾರಿ, ಖಾಸಗಿ ಶಾಲೆಯಲ್ಲಿ ಹಿಜಾಬ್ ನಿಷೇಧಿಸಬೇಕು.!
ಶಾಲೆ ವಿದ್ಯಾಕೇಂದ್ರ, ಹಿಜಾಬ್ ಧರಿಸಿ ಪಾಠ ಕಲಿಬೇಕು ಅಂದ್ರೆ, ತಾಲಿಬಾನ್ ಗೋ, ಪಾಕಿಸ್ತಾನಕ್ಕೆ ಹೋಗಬೇಕು. ಶಾಲೆಯ ವಸ್ತ್ರ ಸಂಹಿತೆ ಪಾಲಿಸದಿದ್ರೆ ಅವರನ್ನು ಶಾಲೆಯಿಂದ ವಜಾ ಮಾಡಬೇಕು ಹೀಗಾಗಲೆ ಸರ್ಕಾರ ಆದೇಶವನ್ನು ಪಡಿಸಿದ್ದು ಎಲ್ಲರೂ ಜಾಸ್ತಿ ಸರ್ಕಾರದ ಆದೇಶ ಪಾಲಿಸಬೇಕು ಎಂದು ಆಗ್ರಹಿಸಿದರು…

ವರದಿ. ಬಸವರಾಜ್ ಹಿರೇಮಠ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
