ಹಿಜಾಬ್ ಕೇಸರಿ ಶಾಲು ಗೊಂದಲ ಸೃಷ್ಟಿಸಿ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಿರುವ ಸರ್ಕಾರ…!!!

ಹಿಜಾಬ್ ಕೇಸರಿ ಶಾಲು ಗೊಂದಲ ಸೃಷ್ಟಿಸಿ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಿರುವ ಸರ್ಕಾರ.

ಸಿಂಧನೂರು :ಕೆರಳುತ್ತಿರುವ ಬುರ್ಖಾ-ಹಿಜಾಬ್ ವಿವಾದ, ಬಿಜೆಪಿಯ ಸಂಘ ಪರಿವಾರ ನಿರ್ದೇಶಿತ ಯೋಜನೆಯಂತೆಯೇ ಸರ್ಕಾರ ನಡೆಯುತ್ತಿದೆ.ಧರ್ಮದ ಅಫೀಮ್ ತಲೆಗೇರಿಸಿಕೊಂಡ ಒಂದಷ್ಟು ಕಿಡಿಗೇಡಿಗಳು ಹುಟ್ಟು ಹಾಕಿದ ವಿವಾದದ ಕಿಡಿಯನ್ನು ಬೆಂಕಿಯನ್ನಾಗಿಸಿ ರಾಜ್ಯದಾದ್ಯಂತ ಹರಡುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿರುವುದನ್ನು ಸಂವಿಧಾನದ ಹಕ್ಕುಗಳ ಉಲ್ಲಂಘನೆಗೆ ನಮ್ಮ ಒಕ್ಕೂಟವು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ನಗರದ ಪ್ರವಾಸಿ ಮಂದಿರದಲ್ಲಿ ದಲಿತ, ಅಲ್ಪಸಂಖ್ಯಾತರ, ಶೋಷಿತ ಸಮುದಾಯಗಳ ಒಕ್ಕೂಟದ ವತಿಯಿಂದ ಪತ್ರಿಕಾಗೋಷ್ಠಿ ಉದ್ದೇಶಿಸಿ ಎಂ ಗಂಗಾಧರ ಮಾತನಾಡಿದರು.

ಸಂವಿಧಾನದಡಿಯಲ್ಲಿ ಕಾರ್ಯನಿರ್ವಹಿಸುವುದು ಪ್ರತಿಯೊಂದು ಸರ್ಕಾರದ ಮೂಲಭೂತ ಕರ್ತವ್ಯ. ಅದರಲ್ಲಿ ವಿಫಲವಾದರೆ ಅದು ಸಂವಿಧಾನದ ಉಲ್ಲಂಘನೆ ಮಾಡಿದಂತಾಗುತ್ತದೆ. ರಾಜ್ಯದ ಶಿಕ್ಷಣ ಸಚಿವರಾಗಿರುವ ಬಿಜೆಪಿ ಸಚಿವ ಬಿ.ಸಿ.ನಾಗೇಶ ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತಮ್ಮ ಬೇಜವಾಬ್ದಾರಿ ಹೇಳಿಕೆಗಳ ಮೂಲಕ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಶುರುಮಾಡಿದ್ದಾರೆ. ಸಂವಿಧಾನವನ್ನು ಸಾಕ್ಷಿಯಾಗಿಟ್ಟುಕೊಂಡು ಪ್ರಮಾಣ ಮಾಡಿ ಸಚಿವರಾದ ಇವರ ನಡವಳಿಕೆ ಸಂವಿಧಾನದ ವಿರೋಧಿ ನೀತಿಯಾಗಿದೆ ಎಂದರು.ಸಂವಿಧಾನದ ಒಪ್ಪಿಗೆಯ ಹಿನ್ನೆಲೆಯಲ್ಲಿ ನೋಡಿದರೆ ಹಿಜಾಬ್ ಧರಿಸಿ ಶಾಲೆ- ಕಾಲೇಜುಗಳಿಗೆ ಹೋಗುವುದು ಮುಸ್ಲಿಮ್ ವಿದ್ಯಾರ್ಥಿನಿಯರ ಮೂಲಭೂತ ಹಕ್ಕು. ಇದನ್ನೇ ನ್ಯಾಯಾಲಯಗಳು ಕೂಡಾ ಹೇಳಿವೆ. ಕೇರಳ ಹೈಕೋರ್ಟ್ 2015ರಲ್ಲಿಯೇ ಈ ಬಗ್ಗೆ ತೀರ್ಪು ನೀಡಿದೆ.ಹಿಜಾಬ್ ವಿವಾದಕ್ಕೆ ತೆರೆ ಎಳೆಯುವ ಶಕ್ತಿ ಮತ್ತು ಅವಕಾಶ ಇರುವುದು ಸಂವಿಧಾನಕ್ಕೆ ಮಾತ್ರ. ಅದು ನ್ಯಾಯಾಲಯದ ಮೂಲಕ ಆಗಬೇಕಾಗಿದೆ. ಈಗಾಗಲೇ ಒಬ್ಬ ವಿದ್ಯಾರ್ಥಿನಿ ಹೈಕೋರ್ಟ್ ಮೆಟ್ಟಿಲು ಹೆರಿದ್ದಾಳೆ.ಶೀಘ್ರವಾಗಿ ಆಕೆಯ ಮೂಲಕ ಹಿಜಾಬ್ ಧರಿಸಿದಹೆಣ್ಣುಮಕ್ಕಳಿಗೆಲ್ಲರಿಗೂ ನ್ಯಾಯ ಸಿಗಲಿ ಎಂಬುವುದು ನಮ್ಮ ಆಶಯವಾಗಿದೆ. ಈ ಕಾನೂನಿನ ಹೋರಾಟಕ್ಕೆ ರಾಜ್ಯದ ಹಿರಿಯ ವಕೀಲರು ಸಹಕಾರ ನೀಡಬೇಕೆಂದು ಒಕ್ಕೂಟವು ಬಯಸುತ್ತದೆ ಎಂದು ಮಾತನಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖಾದರ್ ಸುಭಾನಿ ಹಿಜಾಬ್ ಕುರಿತು ಗೊಂದಲ ಸೃಷ್ಟಿಸಿ ಶಾಲಾ- ಕಾಲೇಜು ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂತಹ ಕೆಲಸ ವ್ಯವಸ್ಥಿತವಾದ ಸಂಚು ಇದಾಗಿದೆ.ಭಾರತೀಯ ಪರಂಪರೆಯಲ್ಲಿ ತಲೆಯಮೇಲೆ ಹೆಣ್ಣುಮಕ್ಕಳು ಸೆರಗು ಹಾಕಿಕೊಳ್ಳುವಂತೆ ಸಂಪ್ರದಾಯ ಇರುವಂತೆ ಇಸ್ಲಾಂ ಧರ್ಮದಲ್ಲಿ ತಲೆಕೂದಲನ್ನು ಮುಚ್ಚಿಕೊಳ್ಳುವುದು ಕಡ್ಡಾಯವಾಗಿದೆ.ಮುಖ ಮುಚ್ಚಿಕೊಳ್ಳುವುದು ಕಡ್ಡಾಯವಲ್ಲ.ಅದು ಅವರವರಿಗೆ ಬಿಟ್ಟಿದ್ದು.ತಲೆಯ ಮೇಲೆ ಒಂದು ಬಟ್ಟೆ ದಾವಣಿಯನ್ನು(ಹಿಜಾಬ್ ) ಹಾಕಿಕೊಂಡು ಸಮವಸ್ತ್ರ ಹಾಕಿಕೊಂಡು ಹೋಗುವುದನ್ನು ವಿರೋಧ ಮಾಡಿ ಈಗ ರಾಜ್ಯದ ವಾತಾವರಣ ಕೆಡುತ್ತಿದೆ.ಕೆಲವು ಹೆಣ್ಣುಮಕ್ಕಳು ನ್ಯಾಯಾಲಕ್ಕೆ ಹೋಗಿದ್ದಾರೆ ನ್ಯಾಯಾಲಯದ ತೀರ್ಪು ಬರುವವರೆಗೂ ಎಲ್ಲರೂ ಸಂಯಮದಿಂದ ಪಾಲಿಸಬೇಕು. ಹಿಜಾಬ್ ಕುರಿತುವ್ಯವಸ್ಥಿತವಾದ ಗೊಂದಲವನ್ನು ಸೃಷ್ಟಿಸಿದ್ದಾರೆ. ಇದನ್ನು ಪತ್ರಿಕೆಯ ಮೂಲಕ ಖಂಡಿಸುತ್ತೇನೆ ಎಂದರು.

ಗಣರಾಜ್ಯೋತ್ಸವ ದಿನದಂದು ನಾರಾಯಣಗುರು ಸ್ತಬ್ಧ ಚಿತ್ರ ಮೆರವಣಿಗೆ ಕೇರಳ ಸರ್ಕಾರ ಕಳಿಸಿಕೊಟ್ಟಿತು. ಆದರೆ ಕೇಂದ್ರ ಸರ್ಕಾರ ನಿರಾಕರಿಸಿದೆ.ಹಾಗಾಗಿ ಮಂಗಳೂರು ಮತ್ತು ಉಡುಪಿ ಭಾಗದಲ್ಲಿ ಅತಿ ಹೆಚ್ಚು ಬಿಲ್ಲವ ಮತ್ತು ಬಡ್ಸ್ ಜನಾಂಗದವರು ಅತಿಹೆಚ್ಚು ಇರುವುದರಿಂದ ಮುಂದಿನ ಚುನಾವಣೆಯಲ್ಲಿ ಹೀನಾಯ ಸೋಲಿನ ಭೀತಿಯ ಉದ್ದೇಶದಿಂದ ರಾಜ್ಯ ಸರ್ಕಾರ ದ್ವಂದ್ವ ನೀತಿಗೆ ಸಿಲುಕಿಸುವ ಸಲುವಾಗಿ ಹಿಜಾಬ್ ಮತ್ತು ಕೇಸರಿ ಶಾಲು ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ. ರಾಜ್ಯ ಸರ್ಕಾರ ಈ ವಿಷಯವನ್ನು ಇಲ್ಲಿಗೆ ಕೈಬಿಡಬೇಕು ಶಾಲಾ- ಕಾಲೇಜಿನಲ್ಲಿ ಕೇಸರಿ ಶಾಲು ಹಾಕಿಕೊಂಡು ಜೈ ಶ್ರೀರಾಮ್ ಎನ್ನುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.ಇಲ್ಲದಿದ್ದರೆ ದಲಿತ,ಶೋಷಿತ ಸಮುದಾಯಗಳ ಒಕ್ಕೂಟದ ಬೃಹದಾಕಾರದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಭೀಮೇಶ್ ಕವಿತಾಳ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಂಚಾಲಕರಾದ ಸೈಯದ್ ರಬ್ಬಾನಿ ಜಾಗೀರದಾರ್, ವಿರೇಶ ಬಾವಿಮನಿ, ವಿಜಯಕುಮಾರ್, ದೌಲಸಾಬ ದೊಡ್ಡಮನಿ, ಮೌನೇಶ ಜಾಲವಾಡ್ಗಿ, ಶಿವರಾಜ ಉಪ್ಪಲದೊಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು…

 

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend