ರೈತರು ಬೆಳೆದ ಬೆಳೆಗಳಿಗೆ ಬಳಸುವ ಚೀಲದ ಗೋದಾಮುಗಳು ಬೆಂಕಿಗೆ ಆಹುತಿ.
ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದ ಎಪಿಎಂಸಿ ಹಾಗೂ ಸಮೀಪದ ಬಡಾವಣೆ ಒಂದರಲ್ಲಿ ಲಕ್ಷಾಂತರ ಮೌಲ್ಯದ ಕಾಲಿ ಚಿಲಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದ್ದು ಸ್ಥಳಕ್ಕೆ ಬನಹಟ್ಟಿಯ ಅಗ್ನಿಶಾಮಕ ದಳ ಮತ್ತು ಗೋದಾವರಿ ಶುಗರ್ಸ ಲಿಮಿಟೆಡ್ ಕಾರ್ಖಾನೆಯ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು ಸಹ ದೊಡ್ಡ ಮಟ್ಟದ ಬೆಂಕಿ ಬಿದ್ದಿರುವುದರಿಂದ ಎರಡು ಪ್ರತ್ಯೇಕ ಗೋದಾಮುಗಳು ಸಂಪೂರ್ಣ ಸುಟ್ಟು ಕರಕಲಾಗಿ ಚೀಲಗಳು ಮತ್ತು ಅನೇಕ ವಸ್ತುಗಳು ಸುಟ್ಟು ಲಕ್ಷಾಂತರ ಮೌಲ್ಯ ನಷ್ಟ ಉಂಟಾಗಿದೆ.
ಘಟನೆಯ ಪ್ರಕರಣ ದಾಖಲಿಸಿಕೊಂಡ ಮಹಾಲಿಂಗಪುರ ಪೋಲಿಸ ಠಾಣೆ ಪಿಎಸ್ಐ ವಿಜಯಕುಮಾರ ಕಾಂಬಳೆ ಮತ್ತು ಪೋಲೀಸ ಇಲಾಖೆಯ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ ಈ ಘಟನೆಯೂ ಪಟ್ಟಣದ ಜನರಲ್ಲಿ ಆತಂಕ ಮೂಡಿಸಿದೆ..

ವರದಿ.ಬಸವರಾಜ ನಂದೆಪ್ಪನವರ
ರಬಕವಿ ಬನಹಟ್ಟಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
